Latest Videos

ಪಂಜಾಬಿ ಲುಕ್‌ನಲ್ಲಿ ಮುದ್ದಾಗಿ ಕಾಣಿಸ್ಕೊಂಡ ಜಾನ್ವಿ ಕಪೂರ್, ಶ್ರೀದೇವಿ ಮಗಳ ಅಂದಕ್ಕೆ ಮನಸೋತ ಫ್ಯಾನ್ಸ್‌

First Published May 26, 2024, 12:28 PM IST

ಬಾಲಿವುಡ್​ ಎವರ್​ಗ್ರೀನ್​ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್. ತಮ್ಮ ಬ್ಯೂಟಿ ಹಾಗೂ ಬೋಲ್ಡ್‌ ಲುಕ್‌ನಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಚಂಡೀಗಡದಲ್ಲಿ ಪಂಜಾಬಿ ಹುಡುಗಿ ಲುಕ್‌ನಲ್ಲಿ ಮುದ್ದಾಗಿ ಕಾಣಿಸ್ಕೊಂಡಿದ್ದಾರೆ.

ಬಾಲಿವುಡ್​ ಎವರ್​ಗ್ರೀನ್​ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್. ತಮ್ಮ ಬ್ಯೂಟಿ ಹಾಗೂ ಬೋಲ್ಡ್‌ ಲುಕ್‌ನಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಚಂಡೀಗಡದಲ್ಲಿ ಪಂಜಾಬಿ ಹುಡುಗಿ ಲುಕ್‌ನಲ್ಲಿ ಮುದ್ದಾಗಿ ಕಾಣಿಸ್ಕೊಂಡಿದ್ದಾರೆ.

ಜಾನ್ವಿ ಕಪೂರ್ ಚಂಡೀಗಢದಲ್ಲಿ ತನ್ನ ಮುಂಬರುವ ಚಿತ್ರ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಪ್ರಚಾರ ಮಾಡಿದರು. ಈ ಇವೆಂಟ್‌ಗಾಗಿ ಪಂಜಾಬಿ ಹುಡುಗಿಯಂತೆ ಡ್ರೆಸ್ ಮಾಡಿದರು.

ನಟಿ ಪಟಿಯಾಲ ಸಲ್ವಾರ್ ಕಮೀಜ್ ಸೆಟ್ ಧರಿಸಿ ಚಿತ್ರದ ಪ್ರಚಾರ ಮಾಡಿದರು. ಹಳದಿ ಕುರ್ತಾ, ಗೋಲ್ಡನ್ ಗೋಟಾ ಪಟ್ಟಿ ಕಸೂತಿ ಮತ್ತು ಗುಲಾಬಿ ಮತ್ತು ಬಿಳಿ ಬಣ್ಣದ ಟಸೆಲ್‌ಗಳಿರುವ ಸಲ್ವಾರ್‌ನ್ನು ಜಾನ್ವಿ ಧರಿಸಿದ್ದರು. ಈ ಸಂದರ್ಭದಲ್ಲಿ ಚಂಡೀಗಡದ ಹೆಸರುವಾಸಿ ಲಸ್ಸಿಯನ್ನು ಸವಿದರು.

ಬಾಲಿವುಡ್​ ಎವರ್​ಗ್ರೀನ್​ ತಾರೆ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್. ತಮ್ಮ ಬ್ಯೂಟಿ ಹಾಗೂ ಬೋಲ್ಡ್‌ ಲುಕ್‌ನಿಂದ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಅಲ್ಲದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಇವರದ್ದೇ ಹವಾ. ಸ್ಟೈಲಿಶ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.

ಇತ್ತೀಚಿಗೆ ತಮ್ಮ ಮೂವಿ ಪ್ರಮೋಷನ್‌ಗಾಗಿ ಚಂಡೀಘಡದಲ್ಲಿ ಪಂಜಾಬಿ ಹುಡುಗಿ ಲುಕ್‌ನಲ್ಲಿ ಮುದ್ದಾಗಿ ಕಾಣಿಸ್ಕೊಂಡಿದ್ದಾರೆ. ಶ್ರೀದೇವಿ ಮಗಳ ಅಂದ ನೋಡಿ ನೆಟ್ಟಿಗರು ವಾವ್ ಅಂದಿದ್ದಾರೆ. ಬ್ಯೂಟಿ, ಹಾಟ್‌, ಪ್ರೆಟ್ಟೀ ಎಂದೆಲ್ಲಾ ಹೊಗಳಿದ್ದಾರೆ.

ಜಾಹ್ನವಿ ಕಪೂರ್ ಬೆಳ್ಳಿತೆರೆಯಲ್ಲಿ ಅಂಥಾ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲವಾದರೂ, ಗ್ಲಾಮರ್‌ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್​ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್​ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ  ಇರುತ್ತಾರೆ.  ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್​, ಪಾರ್ಟಿ, ಟೂರ್​ ಎನ್ನುತ್ತಲೇ ಇರುತ್ತಾರೆ.  

ಮಿ. & ಮಿಸೆಸ್ ಮಾಹಿ' ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ಜಾನ್ವಿ ಕಪೂರ್ ನಟಿಸಿದ್ದಾರೆ. ಮೇ 31ರಂದು ಚಿತ್ರ ಬಿಡುಗಡೆಯಾಗಲಿದೆ.
 ಶ್ರೀದೇವಿ ಪುತ್ರಿ  ಜಾಹ್ನವಿ ಕಪೂರ್​ ಹೆಸರು ಹಲವಾರು ಮಂದಿಯ ಜೊತೆ ಥಳಕು ಹಾಕಿಕೊಂಡಿದೆ. ಆದರೆ ಕೆಲ ವರ್ಷಗಳಿಂದ  ಈಕೆ ಉದ್ಯಮಿ ಶಿಖರ್​ ಪಹರಿಯಾ ಜೊತೆ ಸುತ್ತಾಡುತ್ತಿದ್ದಾರೆ.

click me!