ಬೋಲ್ಡ್ ಲುಕ್ ಬಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಸಾನ್ಯಾ ಅಯ್ಯರ್‌, ನಮ್ಮ ಮುದ್ದುಗೌರಿ ಎಂದ ಫ್ಯಾನ್ಸ್‌

First Published | May 26, 2024, 11:47 AM IST

ನಟಿ ಸಾನ್ಯಾ ಅಯ್ಯರ್ ತನ್ನ ಹೊಸ ಸಿನಿಮಾ ಗೌರಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಯಾವಾಗ್ಲೂ ಹಾಟ್‌ ಅವತಾರದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡೋ ಸಾನ್ಯಾ ಇತ್ತೀಚಿಗೆ ಸ್ಯಾರಿಯುಟ್ಟು ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ.

ನಟಿ ಸಾನ್ಯಾ ಅಯ್ಯರ್ ತನ್ನ ಹೊಸ ಸಿನಿಮಾ ಗೌರಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಯಾವಾಗ್ಲೂ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಟ್‌ ಅವತಾರದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡೋ ಸಾನ್ಯಾ ಇತ್ತೀಚಿಗೆ ಸ್ಯಾರಿಯುಟ್ಟು ಟ್ರೆಡಿಶನಲ್‌ ಲುಕ್‌ನಲ್ಲಿ ಫೋಟೋಸ್ ಶೇರ್ ಮಾಡಿದ್ದಾರೆ.

ಆರೆಂಜ್ ಕಲರ್‌ ಬ್ಲೌಸ್‌ ಹಾಗೂ ಶೈನಿಂಗ್ ಕ್ರೀಮ್‌ ಕಲರ್‌ನ ಸೀರೆಯುಟ್ಟು ಮುದ್ದಾಗಿ ನಗು ಬೀರಿದ್ದಾರೆ. ಇದಕ್ಕೆ ಒಪ್ಪುವಂತೆ ದೊಡ್ಡದಾದ ಆರೆಂಜ್ ಜುಮ್ಕಾ ಸಹ ಹಾಕಿ ಸುಂದರವಾಗಿ ಕಾಣುತ್ತಿದ್ದಾರೆ.

Tap to resize

ಯಾವಾಗ್ಲೂ ಚಡ್ಡಿ, ಶಾರ್ಟ್‌ ಡ್ರೆಸ್‌ ಹಾಕ್ಕೊಂಡು ಕಾಣಿಸಿಕೊಳ್ಳೋ ಸಾನ್ಯಾ ಅಯ್ಯರ್ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಬ್ಯೂಟಿ, ಗಾರ್ಜಿಯಸ್‌, ಕ್ವೀನ್ ಎಂದೆಲ್ಲಾ ಹೊಗಳಿದ್ದಾರೆ.

ಪುಟ್ಟ ಗೌರಿಯ ಮದುವೆ ಧಾರಾವಾಹಿ ಮೂಲಕ ಬಾಲನಟಿಯಾಗಿ ಕರ್ನಾಟಕದ ವೀಕ್ಷಕರಿಗೆ ಪರಿಚಯವಾದವರು ಸಾನ್ಯಾ ಅಯ್ಯರ್. ಈ ಸೀರಿಯಲ್‌ನಲ್ಲಿ ಸಾನ್ಯಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಿಗ್ ಬಾಸ್‌ನಲ್ಲಿ ಮತ್ತಷ್ಟು ವೀಕ್ಷಕರ ಮನಸ್ಸಿಗೆ ಹತ್ತಿರವಾದ ಸಾನ್ಯಾ ಈಗ ಇಂದ್ರಜಿತ್ ಲಂಕೇಶ್ ನಿರ್ಮಾಣದ 'ಗೌರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿರುವ ಸಾನ್ಯಾ 700ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಸಾನ್ಯಾ ಫಿಟ್ನೆಸ್‌ ಬಗ್ಗೆ ಅನೇಕರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಅಲ್ಲದೆ ಆಗಾಗ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕನ್ನಡಿ ಮುಂದೆ ನಿಂತು ಕ್ಲಿಕ್ ಮಾಡಿಕೊಂಡಿರುವ ಫೋಟೋ ಹಾಕುತ್ತಾರೆ. 

ಇಂದ್ರಜೀತ್ ಲಂಕೇಶ್ ನಿರ್ದೇಶಿಸಿರುವ ಹೊಸ ಸಿನಿಮಾ ‘ಗೌರಿ’ ಬಿಡುಗಡೆಗಾಗಿ ಕಾಯುತ್ತಿರುವ ನಟಿ ಸಾನ್ಯಾ ಅಯ್ಯರ್, ಸಮಯ ಸಿಕ್ಕಾಗಲ್ಲೆಲ್ಲಾ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಾರೆ.

Latest Videos

click me!