ಪಿಂಕ್ ಬಣ್ಣದ ಸ್ಯಾರಿಯಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ 'ಪಾರು' ಸೀರಿಯಲ್‌ನ ಮೋಕ್ಷಿತಾ ಪೈ

Published : Apr 28, 2024, 06:19 PM IST

'ಪಾರು' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಮೋಕ್ಷಿತಾ ಪೈ. ಇತ್ತೀಚಿಗಷ್ಟೇ ಪಾರು ಸೀರಿಯಲ್‌ ಮುಗಿದಿದೆ. ಆದ್ರೆ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರ್ತಾರೆ. ಇತ್ತೀಚಿಗೆ ಪಿಂಕ್ ಸ್ಯಾರಿಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

PREV
110
ಪಿಂಕ್ ಬಣ್ಣದ ಸ್ಯಾರಿಯಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ 'ಪಾರು' ಸೀರಿಯಲ್‌ನ ಮೋಕ್ಷಿತಾ ಪೈ

'ಪಾರು' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಮೋಕ್ಷಿತಾ ಪೈ. ಸೀರಿಯಲ್‌ನಲ್ಲಿ ಮೋಕ್ಷಿತಾ,  ಆಕ್ಟಿಂಗ್, ಅಪೀರೆಯರೆನ್ಸ್ ನಲ್ಲಿರೋ ಮೋಡಿಗೆ ಎಲ್ಲರೂ ಮನಸೋತಿದ್ದಾರೆ. ಅದಕ್ಕೆ ಸಾಕ್ಷಿ ಏನೋ ಅನ್ನೋ ಹಾಗೆ ಪಾರು ಸೀರಿಯಲ್ ಮೊದಲಿಂದಲೂ ಟಾಪ್ ೫ ಸೀರಿಯಲ್ ಗಳ ಪೈಕಿ ಒಂದೆನಿಸಿಕೊಂಡಿದೆ. 

210

ಇತ್ತೀಚಿಗಷ್ಟೇ ಪಾರು ಸೀರಿಯಲ್‌ ಮುಗಿದಿದೆ. ಆದ್ರೆ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಮೋಕ್ಷಿತಾ ಪರ್ಸನಲ್‌ ಹಾಗೂ ಪ್ರೋಫೆಶನಲ್‌ ಲೈಫ್‌ ಎರಡರ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಾರೆ.

310

ಇತ್ತೀಚಿಗೆ ಡಾರ್ಕ್‌ ಮೆರೂನ್ ಹಾಗೂ ಪಿಂಕ್‌ ಕಲರ್ ಸೀರೆಯುಟ್ಟು ಸಖತ್ತಾಗಿ ಮಿಂಚಿದ್ದಾರೆ. ಇದಕ್ಕೆ ದೊಡ್ಡದಾದ ಜುಮುಕಿ ಸಹ ಹಾಕಿಕೊಂಡಿದ್ದು, ಹೇರ್ ಓಪನ್ ಬಿಟ್ಕೊಂಡು ಸುಂದರವಾಗಿ ನಗು ಬೀರಿದ್ದಾರೆ.

410

ಇನ್ನು ಕೆರಿಯರ್ ವಿಷಯಕ್ಕೆ ಬಂದ್ರೆ ಕನ್ನಡ, ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿರುವ ಪಾರು, ತಮಿಳು ತೆಲುಗು ಸೀರಿಯಲ್ ಗಳಿಂದ ಬೇಗನೆ ಹೊರಬಂದು ಕಳೆದ ಐದು ವರ್ಷಗಳಿಂದ ಪಾರು ಸೀರಿಯಲ್ ನಲ್ಲಿ ಪಾರು ಪಾತ್ರದ ಮೂಲಕವೇ ಮಿಂಚುತ್ತಿದ್ದಾರೆ. 

510

ಮಂಗಳೂರು ಮೂಲದ ಈ ಚೆಲುವೆ ಮೋಕ್ಷಿತಾ ಪೈ ರಿಯಲ್ ಲೈಫಲ್ಲಿ ಜೊತೆಗೆ ರೀಲ್ ಲೈಫ್ ಎರಡರಲ್ಲೂ ಎಲ್ಲಾ ಅಭಿಮಾನಿಗಳಿಂದ ಪಾಸಿಟಿವ್ ಮಾತುಗಳನ್ನೇ ಕೇಳಿಕೊಂಡು ಬಂದಿದ್ದಾರೆ.

610

ವಿಕಲಚೇತನ ತಮ್ಮನಿಗೆ ಎರಡನೇ ತಾಯಿಯಾಗಿರುವ ಪಾರು, ಸೋಶಿಯಲ್ ಮೀಡಿಯಾದಲ್ಲೂ ತಮ್ಮನ ಬಗ್ಗೆ ಬರೆದುಕೊಂಡು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

710

ಮೋಕ್ಷಿತಾಳ ತಮ್ಮನಿಗೀಗ ಹದಿನೆಂಟು ವರ್ಷ ವಯಸ್ಸು. ಆದರೆ ಬುದ್ಧಿ ಎಳೆಯ ಮಗುವಿನದು. ಒಂದೆರಡು ವರ್ಷ ವಯಸ್ಸಿನ ಮಗುವಿನಂತೇ ಆಡುತ್ತಾನೆ. ಈತನನ್ನು ಮೋಕ್ಷಿತಾ ತಮ್ಮ ಮಗುವಿನಂತೆಯೇ ನೋಡಿಕೊಳ್ಳುತ್ತಾರೆ.

810

ಮೋಕ್ಷಿತಾಗೆ ತಾನು ಫ್ಯಾಶನ್ ಡಿಸೈನಿಂಗ್ ಮಾಡಬೇಕು ಅನ್ನೋ ಕನಸಿತ್ತು. ಆದರೆ ಈಕೆಯ ಅಮ್ಮ ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ಕಲಿಯುತ್ತಿದ್ದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿದರು.

910

ತಮ್ಮನಿಗೆ ತಾನೇ ಅಮ್ಮನಾಗಿ ನಿಂತರು. ತಮ್ಮನ ಸ್ನಾನ, ತಿಂಡಿಯಿಂದ ಹಿಡಿದು ಎಲ್ಲಾ ಆರೈಕೆಯನ್ನೂ ಎರಡು ವರ್ಷಗಳ ಕಾಲ ಮಾಡಿದ್ರು. 

1010

ಹರೆಯದ ಹುಡುಗಿಯೊಬ್ಬಳು ತನ್ನ ಅಮೂಲ್ಯ ಬದುಕಿನ ಸಮಯವನ್ನು ತಮ್ಮನಾಗಿ ಮೀಸಲಿಡುವುದು ಬಹಳ ಮಹತ್ವದ ವಿಚಾರ ಅಲ್ವಾ. ಅಮ್ಮನ ಅಧ್ಯಯನ ಕಂಪ್ಲೀಟ್ ಆದ ಮೇಲೆ ಸೀರಿಯಲ್ ಜಗತ್ತಿನತ್ತ ಮೋಕ್ಷಿತಾ ದೃಷ್ಟಿ ನೆಟ್ಟರು.

Read more Photos on
click me!

Recommended Stories