ಯೆಲ್ಲೋ ಸ್ಯಾರಿಯಲ್ಲಿ ಮಿಂಚಿದ 'ನಮ್ಮಮ್ಮ ಸೂಪರ್‌ಸ್ಟಾರ್‌' ಜಾಹ್ನವಿ, ವಯಸ್ಸು ಜಸ್ಟ್ ನಂಬರ್ ಎಂದ ಫ್ಯಾನ್ಸ್!

First Published Apr 28, 2024, 3:16 PM IST

ಸಿನಿಮಾ ಹೀರೋಯಿನ್‌ ಇಂಟರ್‌ವ್ಯೂ ಮಾಡ್ತಾ, ಇದ್ರಲ್ಲಿ ನಿಜವಾಗ್ಲೂ ಹೀರೋಯಿನ್ ಯಾರಪ್ಪಾ, ನಿರೂಪಕಿ ಯಾರಪ್ಪಾ ಅಂತ ಜನ್ರಲ್ಲಿ ಕನ್‌ಫ್ಯೂಸ್‌ ಮೂಡಿಸಿ ಸುದ್ದಿಯಾದವರು ಜಾನ್ವಿ. ಇತ್ತೀಚಿಗೆ ಯೆಲ್ಲೋ ಕಲರ್ ಸ್ಯಾರಿಯಲ್ಲಿ ಸಖತ್ತಾಗಿ ಮಿಂಚಿದ್ದಾರೆ.

ಸಿನಿಮಾ ಹೀರೋಯಿನ್‌ ಇಂಟರ್‌ವ್ಯೂ ಮಾಡ್ತಾ, ಇದ್ರಲ್ಲಿ ನಿಜವಾಗ್ಲೂ ಹೀರೋಯಿನ್ ಯಾರಪ್ಪಾ, ನಿರೂಪಕಿ ಯಾರಪ್ಪಾ ಅಂತ ಜನ್ರಲ್ಲಿ ಕನ್‌ಫ್ಯೂಸ್‌ ಮೂಡಿಸಿ ಸುದ್ದಿಯಾದವರು ಜಾನ್ವಿ.

ನನ್ನಮ್ಮ ಸೂಪರ್‌ಸ್ಟಾರ್‌, ಗಿಚ್ಚಿ ಗಿಲಿಗಿಲಿ ಸೇರಿದಂತೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ರನ್ನರ್‌ಅಪ್‌ ಆಗಿದ್ದ ಜಾನ್ವಿ ಈಗ ಸವಿರುಚಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇತ್ತೀಚಿಗೆ ಯೆಲ್ಲೋ ಕಲರ್ ಸ್ಯಾರಿಯಲ್ಲಿ ಸಖತ್ತಾಗಿ ಮಿಂಚಿದ್ದಾರೆ.

ಜಾಹ್ನವಿ ಸ್ಟೈಲಿಶ್‌ ಸ್ಯಾರಿ ಲುಕ್‌ಗೆ ಫ್ಯಾನ್ಸ್‌ ಲೈಕ್ಸ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿದ್ದಾರೆ. ಕ್ಯೂಟ್‌, ಸೂಪರ್, ಬ್ಯೂಟಿಫುಲ್‌, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವು ಅಭಿಮಾನಿಗಳು, ಯೆಲ್ಲೋ ಕ್ವೀನ್‌, ಏಂಜೆಲ್‌, ಬ್ಯೂಟಿಫುಲ್ ಜಾನು, ವಯಸ್ಸು ಅನ್ನೋದು ಜಸ್ಟ್‌ ನಂಬರ್‌ ಅಷ್ಟೇ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಸದ್ಯ ಜಾಹ್ನವಿ ಕಲರ್ಸ್‌ ಕನ್ನಡದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗುತ್ತಿರುವ ಸವಿರುಚಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಜೊತೆಗೆ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಸಹ ಈ ಕಾರ್ಯಕ್ರಮದಲ್ಲಿದ್ದಾರೆ.

ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿ, ಬಳಿಕ ನಮ್ಮಮ್ಮ ಸೂಪರ್ ಸ್ಟಾರ್ ಮೂಲಕ ಕಿರುತೆರೆಗೆ ಪರಿಚಿತರಾದ ಜಾಹ್ನವಿ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತಹ ಸೌಂದರ್ಯವತಿ. ತಮ್ಮ ನಿರರ್ಗಳ ಮಾತು, ಸ್ಪಷ್ಟ ಕನ್ನಡ, ನೇರ, ದಿಟ್ಟ ಮಾತುಗಳ ಮೂಲಕ ಜೊತೆಗೆ ಸೌಂದರ್ಯದಿಂದಲೂ ನ್ಯೂಸ್ ವೀಕ್ಷಕರ ಗಮನ ಸೆಳೆದವರು.

ಬಳಿಕ ಮಗನ ಜೊತೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ನಮ್ಮಮ್ಮ ಸೂಪರ್ ಸ್ಟಾರ್ ಶೋದಲ್ಲಿ ಭಾಗಿಯಾಗುವ ಮೂಲಕ ಭರ್ಜರಿ ಮನರಂಜನೆ ನೀಡಿದ್ದರು, ಜೊತೆಗೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು. 

ಸಿನಿಮಾದಲ್ಲೂ ಸಹ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಅಧಿಪತ್ರ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ನಟಿಸಿದ್ದಾರೆ. ನೈಜ್ಯ ಘಟನೆ ಆಧಾರಿತ ಚಿತ್ರ ಇದಾಗಿದ್ದು, ಮಂಗಳೂರು ಮತ್ತು ಉಡುಪಿ ಸುತ್ತಮುತ್ತ ಶೂಟಿಂಗ್ ನಡೆದಿದೆ

click me!