ರೇಷ್ಮೆ ಸೀರೆಯಲ್ಲಿ ಮಿಂಚಿದ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ ವಿಲನ್‌ ಕೀರ್ತಿ, ಪೊರ್ಲು ಪೊರ್ಲು ಎಂದ ಫ್ಯಾನ್ಸ್‌

First Published | Apr 28, 2024, 12:32 PM IST

'ಲಕ್ಷ್ಮಿ ಬಾರಮ್ಮ' ಸೀರಿಯಲ್‌ ನೋಡ್ತಾ ಇದ್ರೆ ಸಾಕು ಪ್ರೇಕ್ಷಕರು ಕೀರ್ತಿ ಪಾತ್ರ ಬಂದೊಡನೆ ಹಿಗ್ಗಾಮುಗ್ಗಾ ಬೈಯೋಕೆ ಶುರು ಮಾಡ್ತಾರೆ. ಸೈಕೋ ಲವರ್ ಪಾತ್ರಕ್ಕೆ ಜೀವ ತುಂಬಿದ ನಟಿ ತನ್ವಿ ರಾವ್‌. ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳೋ ತನ್ವಿ, ರಿಯಲ್‌ ಲೈಫ್‌ನಲ್ಲಿ ರೇಷ್ಮೆ ಸೀರೆಯುಟ್ಟು ಮಿಂಚಿದ್ದಾರೆ.

'ಲಕ್ಷ್ಮಿ ಬಾರಮ್ಮ' ಸೀರಿಯಲ್‌ ನೋಡ್ತಾ ಇದ್ರೆ ಸಾಕು ಪ್ರೇಕ್ಷಕರು ಕೀರ್ತಿ ಪಾತ್ರ ಬಂದೊಡನೆ ಹಿಗ್ಗಾಮುಗ್ಗಾ ಬೈಯೋಕೆ ಶುರು ಮಾಡ್ತಾರೆ. ಸೈಕೋ ಲವರ್ ಪಾತ್ರಕ್ಕೆ ಜೀವ ತುಂಬಿದ ನಟಿ ತನ್ವಿ ರಾವ್‌. ಸೀರಿಯಲ್‌ನಲ್ಲಿ ಯಾವಾಗ್ಲೂ ಮಾಡರ್ನ್‌ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳೋ ತನ್ವಿ, ರಿಯಲ್‌ ಲೈಫ್‌ನಲ್ಲಿ ರೇಷ್ಮೆ ಸೀರೆಯುಟ್ಟು ಮಿಂಚಿದ್ದಾರೆ.

ಇತ್ತೀಚಿಗೆ ನೀಲಿ ಮತ್ತು ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟು ಸಖತ್ತಾಗಿ ಮಿಂಚಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಇದಕ್ಕೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Latest Videos


ಬ್ಯೂಟಿಫುಲ್‌, ಪ್ರೆಟ್ಟೀ, ಫೆಂಟಾಸ್ಟಿಕ್‌, ವಾವ್‌ ಕೀರ್ತಿ, ಪೊರ್ಲು (ಚಂದ) ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು ಸೀರಿಯಲ್‌ನಲ್ಲಿ ನಿಮ್ಮ ಆಕ್ಟಿಂಗ್ ತುಂಬಾ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ.

'ವಿಲನ್ ಪಾತ್ರವನ್ನೇ ಅಷ್ಟು ಅದ್ಭುತವಾಗಿ ಮಾಡುತ್ತಿದ್ದೀರಿ. ನೀವು ನಿಜವಾಗಿಯೂ ಹೀರೋಯಿನ್ ಮೆಟಿರೀಯಲ್‌' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್‌ ಆಗಿದ್ದು, ಪ್ರೀತಿಸಿದವನನ್ನು ಕಳೆದುಕೊಂಡು ಸ್ಯಾಡಿಸ್ಟ್ ಆಗಿ ವರ್ತಿಸುತ್ತಿರುವ ಯುವತಿಯ ಪಾತ್ರ. ಎಲ್ಲ ಎಮೋಶನ್‌ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್‌ ಸಖತ್ತಾಗಿ ಅಭಿನಯಿಸುತ್ತಿದ್ದಾರೆ. 

ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್‌ ಬಿ ರಂಗ್‌'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

Tanvi rao

ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್‌ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. 

‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು.  

ಇನ್ನು ತನ್ವಿ, ಭರತನಾಟ್ಯ ಕಲಾವಿದೆ ಕೂಡಾ ಹೌದು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ

click me!