ನೇಲ್ ಪಾಲಿಶ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಈಸಿ ಟಿಪ್ಸ್
ನೇಲ್ ಪಾಲಿಶ್ ಹಚ್ಚುವ ಮೊದಲು ನಿಮ್ಮ ಉಗುರನ್ನು ಯಾವಾಗಲೂ ತೊಳೆಯಿರಿ ಮತ್ತು ಕ್ಲೀನ್ ಮಾಡಿ. ನಿಮ್ಮ ಉಗುರನ್ನು ಸೋಪ್ ನೀರಿನಲ್ಲಿ ನೆನೆಸಿ ಮತ್ತು ಉಗುರುಗಳ ಸುತ್ತಲಿನ ಡೆಡ್ ಸ್ಕಿನ್ ಮತ್ತು ಕ್ಯುಟಿಕಲ್ ತೆಗೆದುಹಾಕಿ.
ನೇಲ್ ಪಾಲಿಶ್ ಬಾಟಲ್ ರೋಲ್ ಮಾಡಿ, ಅದನ್ನು ಅಲುಗಾಡಿಸಬೇಡಿ. ಪಾಲಿಶ್ ಬಾಟಲಿಯನ್ನು ಅಲುಗಾಡಿಸುವುದರಿಂದ ಬಣ್ಣವು ಏರ್ ಬಬಲ್ ಜೊತೆ ಮಿಕ್ಸ್ ಆಗುತ್ತೆ, ಇದು ಕ್ರ್ಯಾಕ್ ಗೆ(Crack) ಕಾರಣವಾಗುತ್ತೆ. ಹಾಗಾಗಿ ಪಾಲಿಶ್ ನೇರವಾಗಿ ಹಿಡಿದು ನಿಮ್ಮ ಕೈ ರೋಲ್ ಮಾಡೋ ಮೂಲಕ ಮಿಕ್ಸ್ ಮಾಡಿ.
ಅದಕ್ಕೆ ತಕ್ಕಂತೆ ಉಗುರು (Nails) ಟ್ರಿಮ್ ಮಾಡಿ ಮತ್ತು ಶೇಪ್ ನೀಡಿ, ನಂತರ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ. ಮೃದುವಾದ ಟವೆಲ್ ನಿಂದ ಡ್ರೈ ಮಾಡಿ ಮತ್ತು ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಕೈಗಳು ಸಾಫ್ಟ್ ಆಗುತ್ತವೆ.
10 ನಿಮಿಷಗಳ ಕಾಲ ಉಗುರು ಒಣಗಲು ಬಿಡಿ. ಈಗ, ನೇಲ್ ಪಾಲಿಶ್ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ನಿಮ್ಮ ಉಗುರುಗಳಿಗೆ ತೆಳುವಾದ ಬೇಸ್ ಕೋಟ್ (Base coat) ಹಚ್ಚಿ ಮತ್ತು ಉಗುರಿನ ಕೊನೆವರೆಗೆ ಸರಿಯಾಗಿ ಕವರ್ ಮಾಡುವಂತೆ ಹಚ್ಚಿ. ಸಾಮಾನ್ಯವಾಗಿ, ನೇಲ್ ಪಾಲಿಶ್ ಮೊದಲು ತುದಿಗಳಿಂದ ಎದ್ದು ಹೋಗಲು ಆರಂಭವಾಗುತ್ತೆ. ಮೇಲೆ ತೆಳುವಾದ ಕೋಟ್ ಹಚ್ಚಿದ್ರೆ ಅದು ನೇಲ್ ಪಾಲಿಶ್ ಅನ್ನು ರಕ್ಷಿಸುತ್ತೆ ಮತ್ತು ಅದು ದೀರ್ಘಕಾಲ ಉಳಿಯುವಂತೆ ಮಾಡುತ್ತೆ.
ನಿಮ್ಮ ಉಗುರುಗಳ ಮೇಲೆ ಕೋಟ್ ಒಣಗಲು ಬಿಡಿ. ತೆಳುವಾದ ಕೋಟ್ ಡ್ರೈ ಆದ ನಂತರ, ನೇಲ್ ಪಾಲಿಶ್ ಕಲರ್ (Colour) ಹಚ್ಚಿ ಮತ್ತು ಅದನ್ನು ಒಣಗಲು ಬಿಡಿ.ಅನೇಕ ದಿನಗಳವರೆಗೆ ನೇಲ್ ಪಾಲಿಶ್ ಹಾಗೇ ಉಳಿಸಲು ಒಂದು ಬ್ಯೂಟಿ ಟಿಪ್ಸ್ ಎಂದರೆ ಎರಡರಿಂದ ಮೂರು ಕೋಟ್ ಹಚ್ಚೋದು.
ಲೈಟ್ ನೇಲ್ ಪಾಲಿಶ್ ಕಲರ್ಸ್ ಯೂಸ್ ಮಾಡೋರು 3 ಕೋಟ್ ಕೊಡಬೇಕು. ಇದು ನಿಜವಾದ ಉಗುರಿನ ಬಣ್ಣವನ್ನು ಹೊರತರುತ್ತೆ ಮತ್ತು ಉತ್ತಮವಾಗಿ ಕಾಣುತ್ತೆ. ಅಲ್ಲದೇ ನಿಮ್ಮ ಲುಕ್ (Look) ಕೂಡ ಇದರಿಂದ ಚೆನ್ನಾಗಿ ಕಾಣುವಂತೆ ಮಾಡುತ್ತೆ.
ನಿಮ್ಮ ಉಗುರುಗಳ ಮೇಲೆ ಕೋಟ್ ಒಣಗಲು ಬಿಡಿ. ತೆಳುವಾದ ಕೋಟ್ ಡ್ರೈ ಆದ ನಂತರ, ನೇಲ್ ಪಾಲಿಶ್ ಕಲರ್ (Colour) ಹಚ್ಚಿ ಮತ್ತು ಅದನ್ನು ಒಣಗಲು ಬಿಡಿ.ಅನೇಕ ದಿನಗಳವರೆಗೆ ನೇಲ್ ಪಾಲಿಶ್ ಹಾಗೇ ಉಳಿಸಲು ಒಂದು ಬ್ಯೂಟಿ ಟಿಪ್ಸ್ (Beauty tip)ಎಂದರೆ ಎರಡರಿಂದ ಮೂರು ಕೋಟ್ ಹಚ್ಚೋದು.
ಆತುರದಲ್ಲಿದ್ದರೆ, ನೇಲ್ ಪಾಲಿಶ್ ಹಚ್ಚಿದ ನಂತರ 5 ನಿಮಿಷಗಳ ಕಾಲ ತಣ್ಣೀರಿನಲ್ಲಿ (Cold water)ಕೈಗಳನ್ನು ನೆನೆಸಿಡಿ. ಇಲ್ಲದಿದ್ದರೆ, ಉಗುರನ್ನು ಗಾಳಿಯಲ್ಲಿ ಒಣಗಿಸಿ. ದಿನಕ್ಕೆ ಎರಡು ಬಾರಿ ಹ್ಯಾಂಡ್ ಕ್ರೀಮ್ ಬಳಸೋದ್ರಿಂದ ನಿಮ್ಮ ಕೈ ತೇವಾಂಶದಿಂದ ಇಡಲು ಸಹಾಯ ಮಾಡುತ್ತೆ.
ನೀವು ಪ್ರತಿದಿನ ಮನೆಕೆಲಸ ಮಾಡಬೇಕಾದವರಾಗಿದ್ದರೆ, ನಿಮ್ಮ ಉಗುರು ರಕ್ಷಿಸಲು ರಬ್ಬರ್ ಗ್ಲೋವ್ಸ್ (Gloves)ಧರಿಸಿ. ಇಲ್ಲವಾದರೆ ನೀರು, ಸೋಪ್ ಮತ್ತು ಇತರ ಕೆಮಿಕಲ್ ಉಪಯೋಗದಿಂದಾಗಿ ನಿಮ್ಮ ನೇಲ್ ಪಾಲಿಶ್ ಕಲರ್ ಡಲ್ ಆಗುತ್ತೆ.
ನೇಲ್ ಪಾಲಿಶ್ ಒಣಗಿದ ಬಳಿಕ, ಅದರ ಬಣ್ಣ ಎದ್ದೇಳಲು ಆರಂಭವಾಗುತ್ತೆ. ಅದನ್ನು ತಪ್ಪಿಸಲು ನೀವು ದಿನಕ್ಕೆ ಒಮ್ಮೆಯಾದರೂ ನೇಲ್ ಆಯಿಲ್(Nail oil) ಬಳಸಿ. ಇದರಿಂದ ನೇಲ್ ಪಾಲಿಶ್ ತುಂಬಾ ಸಮಯದವರೆಗೆ ಉಳಿಯಲು ಸಾಧ್ಯವಾಗುತ್ತೆ.