ಡ್ರೆಸ್ ಹೇಗಿದ್ದರೇನು, ಚೆಂದ ಕಾಣಿಸಬೇಕು ಅಂದರೆ ಹೀಗ್ ಡ್ರೆಸ್ ಮಾಡ್ಕೊಳ್ಳಿ!

First Published Jun 11, 2022, 6:28 PM IST

ಕಾಲೇಜಿನಲ್ಲಿ ನಾನೇ ಅತ್ಯಂತ ಆಕರ್ಷಕವಾಗಿ ಕಾಣಬೇಕು... ಈ ದಿನಗಳಲ್ಲಿ ಎಲ್ಲಾ ಫ್ರೆಶರ್‌ಗಳು ಅದನ್ನೇ ಯೋಚಿಸುತ್ತಾರೆ. ಆದರೆ ಔಟ್ ಫಿಟ್ಸ್ ನಿಮ್ಮನ್ನು ಗ್ಲಾಮರಸ್ ಆಗಿ ಕಾಣುವಂತೆ ಮಾಡೋದು ಮಾತ್ರವಲ್ಲದೆ, ಅವುಗಳೊಂದಿಗೆ ಟ್ರೆಂಡಿ ಅಕ್ಸೆಸರಿಗಳನ್ನು ಹೊಂದಿರುವುದು ಸಹ ತುಂಬಾ ಮುಖ್ಯ.

ಟ್ರೆಂಡಿ ಆಕ್ಸೆಸರಿ ಜೊತೆ ನೀವು ನಿಮ್ಮ ಔಟ್ ಫಿಟ್ ಇನ್ನು ಆಕರ್ಷಕ ಮಾತ್ರವಲ್ಲ ಮತ್ತು ಹೈಲೈಟ್ ಮಾಡಬಹುದು. ಆದ್ದರಿಂದ ಟಿ-ಶರ್ಟ್ ನ್ನು ನಿಮ್ಮ ಕಲೆಕ್ಷನ್ ನ  ಒಂದು ಭಾಗವನ್ನಾಗಿ ಏಕೆ ಮಾಡಬಾರದು. ಟೀ ಶರ್ಟ್(T shirt) ಜೊತೆ ಅಕ್ಸೆಸರಿಗಳನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಿ ಮತ್ತು ಆಕರ್ಷಕ ಲುಕ್ ಪಡೆಯಿರಿ.

ಕೇರ್ ಫ್ರೀ ಲುಕ್ (Care free look)

ನೀವು ಟಿ-ಶರ್ಟ್ ಜೊತೆ ನಿಮ್ಮ ಲುಕ್ ಇನ್ನಷ್ಟು ಸ್ಪೈಸಿ ಮಾಡಲು ಬಯಸಿದರೆ, ಬಾಟಮ್ ವೇರ್ ಜೊತೆ ಅಕ್ಸೆಸರಿಗಳ ಬಗ್ಗೆ ಸಹ ಗಮನ ಹರಿಸಬೇಕು. ಇಯರ್ ರಿಂಗ್ಸ್ , ಸ್ಮಾರ್ಟ್ ವಾಚ್, ಸನ್ ಗ್ಲಾಸ್, ಸ್ಕಾರ್ಫ್, ಹೆಡ್ ಗೇರ್, ಬ್ರೇಸ್ ಲೆಟ್, ಉಂಗುರಗಳು, ಬೆಲ್ಟ್, ಬ್ಯಾಗ್ , ನೆಕ್ ಪೀಸ್, ಫುಟ್ ವೇರ್ ಗಳಿಂದ ಗ್ಲಾಮರಸ್ ಜೊತೆಗೆ ಆಕರ್ಷಕ ಕೇರ್ ಫ್ರೀ ಲುಕ್ ಪಡೆಯಬಹುದು.

ಬ್ರೇಸ್ ಲೆಟ್ (Bracelet) ಧರಿಸಿ

ನೆಕ್ ಪೀಸ್ ಲೇಯರಿಂಗ್ ನಂತೆಯೇ, ಕಳೆದ ಕೆಲವು ವರ್ಷಗಳಲ್ಲಿ ಬ್ರೇಸ್ ಲೆಟ್ ಲೇಯರಿಂಗ್ ಟ್ರೆಂಡ್ ಸಹ ಹೆಚ್ಚಾಗಿದೆ. ಹಾಗಾಗಿ ನೀವು ಪ್ಲೈನ್ ಅಥವಾ ಪ್ರಿಂಟೆಡ್  ಟಿ-ಶರ್ಟ್ ಗಳೊಂದಿಗೆ ವಿವಿಧ ರೀತಿಯ ಬ್ರೇಸ್ ಲೆಟ್ ಗಳನ್ನು ಧರಿಸಬಹುದು ಅಥವಾ ಬ್ರೇಸ್ ಲೆಟ್ ಜೊತೆ ವಾಚ್ ಕೂಡ ಧರಿಸಬಹುದು. ಇವುಗಳಿಂದ ನಿಮ್ಮ ಲುಕ್ಸ್ ಇನ್ನೂ ಟ್ರೆಂಡಿಯಾಗುತ್ತೆ.

ಕಲರ್ ಫುಲ್ ಲುಕ್ (Colorful look)

ಈಗ ಕಲರ್ ಫುಲ್ ಫ್ಯಾಷನ್ ಟ್ರೆಂಡ್ ನಲ್ಲಿದೆ. ಆದ್ದರಿಂದ ಡಿಫರೆಂಟ್ ಕಲರ್ ಟಿ-ಶರ್ಟ್ ಗಳೊಂದಿಗೆ ಕಾಂಟ್ರಾಸ್ಟ್ ನೆಕ್ ಪೀಸ್ ಗಳು ಅಥವಾ ಕಿವಿಯೋಲೆ ಧರಿಸುವ ಮೂಲಕ ನೀವು ಪರ್ಫೆಕ್ಟ್ ಆಗಿ ಕಾಣಬಹುದು. 

ಇಷ್ಟೇ ಅಲ್ಲ ನಿಮ್ಮ ಔಟ್ ಫಿಟ್ ಗಳಲ್ಲಿ(Outfit) ಕಲರ್ ಬ್ಯಾಲೆನ್ಸ್ ಹೊಂದಿರೋದು ಬಹಳ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ. ಬಣ್ಣಬಣ್ಣದ ಮಣಿಗಳ ಕಾಲ್ಗೆಜ್ಜೆಗಳು, ಕಲರ್ ಫುಲ್ ಹೆಡ್ ಗೇರ್, ವರ್ಣರಂಜಿತ ಸ್ಕಾರ್ಫ್ ಗಳು, ಮಲ್ಟಿ ಕಲರ್ ಎಂಬ್ರಾಯಿಡರಿ ಜೂಟ್ ಬ್ಯಾಗ್ಸ್ ಸಹ ಇದರಲ್ಲಿ ಸೇರಿಸಬಹುದು.

ಇಂಪಾರ್ಟೆಂಟ್ ಟಿಪ್ಸ್

- ನಿಮ್ಮ ಲುಕ್ಸ್ ಅನ್ನು ಅತಿಯಾಗಿ ಎಕ್ಸರ್ಸೈಜ್ ಮಾಡೋದನ್ನು ತಪ್ಪಿಸಿ. ಸಿಂಪಲ್ ಆದ್ರೆ ಅಟ್ರಾಕ್ಟೀವ್ ಆಗಿರಿ.
- ಟೀ-ಶರ್ಟ್ಗಳು ಮತ್ತುಅಕ್ಸೆಸರಿಗಳನ್ನು ಸೇರಿಸಿದ ನಂತರ, ಮೇಕಪ್ ಮಾಡ್ಕೋಬೇಕಾಗಿ ಇಲ್ಲ. ಆದ್ದರಿಂದ ನ್ಯಾಚುರಲ್(Natural) ಅಥವಾ ಮಿನಿಮಲ್ ಮೇಕಪ್ ಮಾತ್ರ ಮಾಡಿ

- ಕಲರ್ ಫುಲ್ ಆಗಿ  ಕಾಣುವುದು ಒಳ್ಳೆಯದು ಆದರೆ ಶೈನಿಂಗ್ ಬಣ್ಣ ಅವಾಯ್ಡ್ ಮಾಡಿ.
- ನೀವು ಥ್ರೀ ಪೀಸ್ ಔಟ್ ಫಿಟ್ ಹೊಂದಿದ್ದರೆ, ಸ್ಟೇಟ್ಮೆಂಟ್ ಜ್ಯುವೆಲ್ಲರಿ ಟ್ರೈ ಮಾಡಿ ನೋಡಿ.

ಈ ಫ್ಯಾಷನ್ ಸಲಹೆ ಟ್ರೈ ಮಾಡೊ ಮೂಲಕ, ನೀವು ಕ್ಯಾಶುಯಲ್ ಲುಕ್ ನಲ್ಲಿ(Casual look) ಆಕರ್ಷಕವಾಗಿ ಕಾಣಬಹುದು.
 

click me!