ಕಿರುತೆರೆಯ ಮೂಲಕ ಮನೆಮಂದಿಗೆ ಹತ್ತಿರವಾಗುವ ಕೆಲ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಟ್ರೆಡಿಶನಲ್, ಮಾಡರ್ನ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ. ಅಂಥಾ ಪುಟ್ಟಕ್ಕನ ಮಕ್ಕಳು ಸೀರಿಯಲ್ ಖ್ಯಾತಿಯ ಸ್ನೇಹಾ. ಅಸಲಿ ಹೆಸರು ಸಂಜನಾ ಬುರ್ಲಿ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪ್ರಮುಖ ನಟಿ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ತಮ್ಮ ಸೋಶಿಯಲ್ ಮೀಡಿಯಾದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಯಾವಾಗ್ಲೂ ಸ್ಟೈಲಿಶ್ ಫೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ.
ಹೆಚ್ಚಾಗಿ ರೀಲ್ಸ್, ಡ್ಯಾನ್ಸ್, ಫೊಟೋಶೂಟ್ ಮಾಡಿಸಿಕೊಂಡು ವಿಡಿಯೋ, ಫೋಟೋಗಳನ್ನು ಶೇರ್ ಮಾಡುವ ಮೂಲಕ ಸದಾ ಜನರ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. ಇದೀಗ ಸಂಜನಾ ಬುರ್ಲಿ ರೇಷ್ಮೆ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ.
ಕಡು ನೀಲಿ ಬಣ್ಣದ ಸಿಲ್ಕ್ ಸೀರೆಗೆ, ತಿಳಿ ಆರೆಂಜ್ ಬಣ್ಣದ ಹೆವಿ ಹ್ಯಾಂಡ್ ವರ್ಕ್ ಇರುವ ಬ್ಲೌಸ್ ಧರಿಸಿರುವ ಸಂಜನಾ, ಇದಕ್ಕೆ ಬ್ಲೂ ಪೆಂಡೆಂಟ್ ಇರುವ ಸ್ಟೋನ್ ನೆಕ್ಲೇಸ್, ಈಯರಿಂಗ್ಸ್ ಸಹ ಧರಸಿದ್ದಾರೆ. ಕೂದಲನ್ನು ತುರುಬು ಕಟ್ಟಿ ಹಣೆಗೆ ಪುಟ್ಟದಾದ ಬಿಂದಿಯನ್ನಿಟ್ಟು ಸುಂದರವಾಗಿ ಕಾಣತ್ತಿದ್ದಾರೆ.
ಕಿರುತೆರೆ ವೀಕ್ಷಕರ ಪ್ರೀತಿಯ ಮಿಸ್ಸು ಆಗಿರುವ ಸಂಜನಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಈ ಹೊಸ ಫೋಟೋ ಶೂಟ್‌ಗೆ ಭಾರಿ ಕಾಮೆಂಟ್ಸ್ ಬಂದಿವೆ. ನಟ್ಟಿಗರು ಫೋಟೋ ನೋಡಿ ಫಿದಾ ಆಗಿದ್ದಾರೆ. ಲೈಕ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ.
ಒಬ್ಬ ಅಭಿಮಾನಿ, 'ಜ್ಯೂನಿಯರ್ ಕಲ್ಪನಾ ಥರಾ ಕಾಣಿಸ್ತಾ ಇದ್ದೀರಾ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಮನಸಲ್ಲಿ ಇರೋ ಮಾತು ಹಾಡು ಆದಂಗಿದೆ' ಎಂದು ಹೇಳಿದ್ದಾರೆ.
ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಗ್ಗೆ ಹೇಳೋದಾದರೆ ಸ್ನೇಹಾ ಅಕ್ಕ ಸಹನಾ ಬಾಳು ಹಾಳಾಗುವ ಹಂತದಲ್ಲಿದೆ. ಅತ್ತೆಯ ಕಾಟ ತಾಳಲಾರದೆ ತವರು ಮನೆಗೆ ವಾಪಾಸ್ ಬಂದಿರುವ ಸಹನಾ ವಿರುದ್ಧ ಗಂಡ ಮುರಳಿ ಪಂಚಾಯತಿ ಮೆಟ್ಟಿಲೇರಿದ್ದಾರೆ. ಇತ್ತ, ಸ್ನೇಹಾ ಅತ್ತೆಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು ಈಗ ತಪ್ಪಿನ ಅರಿವಾಗಿದೆ.
ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟಿದ್ದರು ನಟಿ. ಆ ಬಳಿಕ ಆರೂರು ಜಗದೀಶ್ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕೊಟ್ಟಿದ್ದರು. ಧಾರಾವಾಹಿ ಎಲ್ಲರ ಮನಗೆದ್ದಿದ್ದು, ಸಂಜನಾ ಬುರ್ಲಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಇನ್ನು ಸಂಜನಾ ಅವರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವ ಕುರಿತು ಹೇಳುವುದಾದರೆ, ಈ ಹಿಂದೆ ಅವರೇ ಸಂದರ್ಶನವೊಂದರಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ಇವರ ಮೊದಲ ಧಾರಾವಾಹಿ 'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ ಪ್ರಸಾರ ನಿಲ್ಲಿಸಿತ್ತು.