ಸೀರೆಯುಟ್ಟು ಮುದ್ದಾಗಿ ನಕ್ಕ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ ಕೀರ್ತಿ, ನೋಡಿದ್ರೆ ಕೋಪ ಬರುತ್ತೆ ಅನ್ನೋದಾ ನೆಟ್ಟಿಗರು!

First Published Apr 20, 2024, 1:41 PM IST

ಕನ್ನಡ ಧಾರಾವಾಹಿ ಪ್ರಿಯರ ನೆಚ್ಚಿನ ಸೀರಿಯಲ್‌ಗಳಲ್ಲೊಂದು ಲಕ್ಷ್ಮೀ ಬಾರಮ್ಮ. ಇದರಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ಈ ಪಾತ್ರದಲ್ಲಿ ಅಭಿನಯಿಸ್ತಿರೋ ತನ್ವಿ ರಾವ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್. ಇತ್ತೀಚಿಗೆ ಸೀರೆಯುಟ್ಟು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
 

'ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ಸೈಕೋ ಪ್ರೇಮಿಯ ಪಾತ್ರಕ್ಕೆ ತನ್ವಿ ರಾವ್‌ ಜೀವ ತುಂಬಿದ್ದಾರೆ. ಇತ್ತೀಚಿಗೆ ವಿಲನ್ ಪಾತ್ರದಲ್ಲಿ ನಟಿಸ್ತಿರೋ ತನ್ವಿ ರಾವ್ ಸೀರೆಯುಟ್ಟು ಫೋಟೋಸ್ ಶೇರ್ ಮಾಡಿದ್ದಾರೆ. ಆದ್ರೆ ನೆಟ್ಟಿಗರು ಮಾತ್ರ ನಿಮ್ಮನ್ನು ನೋಡಿ ಸಿಕ್ಕಾಪಟ್ಟೆ ಕೋಪ ಬರ್ತಿದೆ ಅಂತಿದ್ದಾರೆ.

ಸೀರಿಯಲ್ ವಿಲನ್ ತನ್ವಿ ರಿಯಲ್ ಲೈಫ್‌ನಲ್ಲಿ ಸಖತ್ ಕ್ಯೂಟು. ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಹಾಗೆಯೆ ಇತ್ತೀಚಿಗೆ ಪಿಂಕ್ ಕಲರ್‌ನ ಟ್ರಾನ್ಸಪರೆಂಟ್ ಸೀರೆಯುಟ್ಟ ಫೋಟೋಸ್ ಶೇರ್ ಮಾಡಿದ್ದಾರೆ.

ತನ್ವಿ ರಾವ್ ಲುಕ್‌ಗೆ ನೆಟ್ಟಿಗರು ಬ್ಯೂಟಿಫುಲ್, ಕ್ಯೂಟ್, ನಿಮ್ಮ ಅಭಿನಯ ಅದ್ಭುತ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಆದ್ರೆ ಒಬ್ಬ ಬಳಕೆದಾರರು, 'ನಿಮ್ಮನ್ನು ನೋಡಿದ್ರೆ ಕೋಪ ಬರುತ್ತೆ' ಎಂದಿದ್ದಾರೆ.

'ನಿಮ್ಮನ್ನು ಸೀರಿಯಲ್‌ನಲ್ಲಿ ನೋಡಿದ್ರೆ ಕೋಪ ಬರುತ್ತೆ. ಅದು ರಿಯಲ್ ಅಲ್ಲ ರೀಲ್ ಅಂತ ಗೊತ್ತಿದ್ರೂ ನಿಮ್ಮ ಮೇಲೆ ಕೋಪ ಬರುತ್ತೆ. ಯಾಕಂದ್ರೆ ನಿಮ್ಮ ಆಕ್ಟಿಂಗ್ ಅಷ್ಟು ಚೆನ್ನಾಗಿದೆ' ಎಂದು ಕಾಂಪ್ಲಿಮೆಂಟ್ ನೀಡಿದ್ದಾರೆ.

'ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್‌ ಆಗಿದ್ದು, ಪ್ರೀತಿಸಿದವನನ್ನು ಕಳೆದುಕೊಂಡು ಸ್ಯಾಡಿಸ್ಟ್ ಆಗಿ ವರ್ತಿಸುತ್ತಿರುವ ಯುವತಿಯ ಪಾತ್ರ. ಎಲ್ಲ ಎಮೋಶನ್‌ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್‌ ಸಖತ್ತಾಗಿ ಅಭಿನಯಿಸುತ್ತಿದ್ದಾರೆ. 

ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್‌ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. 

‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು.  ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್‌ ಬಿ ರಂಗ್‌'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ. 

ಇನ್ನು ತನ್ವಿ, ಭರತನಾಟ್ಯ ಕಲಾವಿದೆ ಕೂಡಾ ಹೌದು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

click me!