Slow metabolism signs Kannada: ಜೀರ್ಣಕ್ರಿಯೆ ಎನ್ನುವುದು ಕೇವಲ ಕ್ಯಾಲೊರಿಗಳನ್ನು ಸುಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಚರ್ಮದ ಕೋಶಗಳನ್ನು ರಿಪೇರಿ ಮಾಡುವ ಕೆಲಸವನ್ನೂ ಮಾಡುತ್ತದೆ. ಹಾಗಾದರೆ ಜೀರ್ಣಕ್ರಿಯೆ ನಿಧಾನವಾದಾಗ ಮುಖದ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳೇನೆಂದು ತಿಳಿಯೋಣ.
ನಾವೆಲ್ಲರೂ ಹೊಳೆಯುವ ಚರ್ಮಕ್ಕಾಗಿ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಆದರೆ ಚರ್ಮದ ಆರೋಗ್ಯಕ್ಕೆ ನೇರ ಸಂಬಂಧವಿರುವ 'ಜೀರ್ಣಶಕ್ತಿ'ಯನ್ನು ನಿರ್ಲಕ್ಷಿಸುತ್ತೇವೆ. ಜೀರ್ಣಶಕ್ತಿ ಸರಿಯಾಗಿದ್ದಾಗ ಚರ್ಮವು ಒಳಗಿನಿಂದಲೇ ರಿಪೇರಿ ಆಗುತ್ತದೆ. ಒಂದು ವೇಳೆ ಆರೋಗ್ಯ ಹದಗೆಟ್ಟರೆ ಅದರ ಪರಿಣಾಮ ಮೊದಲು ನಿಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಆ ಲಕ್ಷಣಗಳು ಇಲ್ಲಿವೆ..
26
ಮುಖ ಕಳೆಗುಂದುವುದು
ಮೆಟಾಬಾಲಿಸಂ ಅಂದರೆ ಜೀರ್ಣಕ್ರಿಯೆ ನಿಧಾನವಾದರೆ, ಪ್ರತಿ 28-49 ದಿನಗಳಿಗೊಮ್ಮೆ ಚರ್ಮವು ತನ್ನನ್ನು ತಾನು ನವೀಕರಿಸಿಕೊಳ್ಳುವ ನೈಸರ್ಗಿಕ ಸಾಮರ್ಥ್ಯದ ಅವಧಿ ಹೆಚ್ಚಾಗುತ್ತದೆ. ಇದರಿಂದ ಚರ್ಮದ ಮೇಲ್ಭಾಗದಲ್ಲಿ ಸತ್ತ ಕೋಶಗಳು (Dead cells) ಸಂಗ್ರಹವಾಗಿ, ಮುಖವು ದಣಿದಂತೆ ಮತ್ತು ಕಳೆಗುಂದಿದಂತೆ ಕಾಣುತ್ತದೆ.
36
ಶುಷ್ಕತೆ
ಚರ್ಮದ ರಕ್ಷಣಾ ಪದರವನ್ನು ಕಾಪಾಡಿಕೊಳ್ಳಲು ಜೀರ್ಣಕ್ರಿಯೆ ಮುಖ್ಯ ಪಾತ್ರ ವಹಿಸುತ್ತದೆ. ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನವಾದಾಗ, ಚರ್ಮವು ನೈಸರ್ಗಿಕ ತೈಲಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಚರ್ಮದಲ್ಲಿ ಅತಿಯಾದ ಶುಷ್ಕತೆ ಉಂಟಾಗುತ್ತದೆ.
ಹಾರ್ಮೋನ್ ಅಸಮತೋಲನವು ನೇರವಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದೆ. ಇನ್ಸುಲಿನ್ ರೆಸಿಸ್ಟೆನ್ಸ್ ಸಮಸ್ಯೆ ಇರುವವರಲ್ಲಿ 'ಸೀಬಮ್' ಉತ್ಪಾದನೆ ಹೆಚ್ಚಾಗಿ, ಇದ್ದಕ್ಕಿದ್ದಂತೆ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು.
56
ಗಾಯ ನಿಧಾನವಾಗಿ ವಾಸಿಯಾಗುವುದು
ಚರ್ಮದ ಮೇಲಿನ ಸಣ್ಣ ಗಾಯಗಳು, ಮೊಡವೆಯ ಕಲೆಗಳು ಅಥವಾ ಉರಿ ಕಡಿಮೆಯಾಗಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ, ಅದಕ್ಕೆ ನಿಮ್ಮ ಜೀರ್ಣಕ್ರಿಯೆ ಕಾರಣವಿರಬಹುದು. ಕೋಶಗಳ ರಿಪೇರಿ ಮತ್ತು ಪೋಷಕಾಂಶಗಳ ಪೂರೈಕೆಯು ಮೆಟಾಬಾಲಿಸಂನ ದಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ.
66
ಸುಧಾರಿಸುವುದು ಹೇಗೆ?
ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಚರ್ಮದ ಆರೋಗ್ಯವೂ ಸುಧಾರಿಸುತ್ತದೆ. ಇದನ್ನು ಹೆಚ್ಚಿಸಲು ಕೆಲವು ಮಾರ್ಗಗಳು ಇಲ್ಲಿವೆ.. ಪ್ರೋಟೀನ್, ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿರುವ ಆಹಾರ ಸೇವಿಸಿ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಾಗಿ ಮೆಟಾಬಾಲಿಸಂ ಸುಧಾರಿಸುತ್ತದೆ. ಸಾಕಷ್ಟು ನಿದ್ರೆ ಮಾಡಿ ಮತ್ತು ಒತ್ತಡವನ್ನು ನಿಯಂತ್ರಿಸಿ. ಇದರಿಂದ ಹಾರ್ಮೋನುಗಳ ಮಟ್ಟ ಸಮತೋಲನದಲ್ಲಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.