ಭಾರತದ ಸೌಂದರ್ಯ ಸ್ಪರ್ಧೆಗಳು ಹಲವಾರು ಮಂದಿಯ ಪಾಲಿಗೆ ನಟನಾ ವೃತ್ತಿಜೀವನಕ್ಕೆ ಮೆಟ್ಟಿಲುಗಳಾಗಿವೆ. ಜೀನತ್ ಅಮಾನ್‌ನಿಂದ ಹಿಡಿದು ಮನುಷ್ ಚಿಲ್ಲರ್ ವರೆಗೆ ಅನೇಕ ಮಿಸ್ ಇಂಡಿಯಾಗಳು ಮತ್ತು ವಿಶ್ವ ಸುಂದರಿಯರು ಮಾಡೆಲಿಂಗ್‌ನಿಂದ, ಸೌಂದರ್ಯ ಸ್ಪರ್ಧೆ, ಅಲ್ಲಿಂದ ಬಾಲಿವುಡ್ ವರೆಗೆ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
ಆದರೆ ಈ ಮಿಸ್ ಇಂಡಿಯಾ ನೋಡಲು ಅತೀ ಸುಂದರಿಯಾಗಿದ್ದರೂ, ಬಾಲಿವುಡ್‌ನಲ್ಲಿ ಸಾಲು ಸಾಲು ಅವಕಾಶಗಳು ಸಿಕ್ಕರೂ ಸಹ ಚಿತ್ರರಂಗವನ್ನು ತೊರೆದರು. ಆಕೆ ಮತ್ಯಾರೂ ಅಲ್ಲ ಅದಿತಿ ಆರ್ಯ.
ಅದಿತಿ ಆರ್ಯ 1993ರಲ್ಲಿ ಚಂಡೀಗಢದಲ್ಲಿ ಜನಿಸಿದರು. ಆ ನಂತರ ತಮ್ಮ ಕುಟುಂಬದೊಂದಿಗೆ ಗುರ್ಗಾಂವ್‌ಗೆ ತೆರಳಿದರು. ದೆಹಲಿ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ನಿರ್ವಹಣೆಯಲ್ಲಿ ಪದವಿ ಪಡೆದರು. ಕಾರ್ಪೊರೇಟ್ ಜಗತ್ತಿನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಕೆಲಸ ಮಾಡಿದರು. 2015ರಲ್ಲಿ, ಅದಿತಿ ಮಿಸ್ ಇಂಡಿಯಾವನ್ನು ಗೆದ್ದರು ಮತ್ತು ಮಿಸ್ ವರ್ಲ್ಡ್ 2015ರಲ್ಲಿ ಭಾರತವನ್ನು ಪ್ರತಿನಿಧಿಸಿದರು.
ತೆಲುಗು ಸಿನಿಮಾ ಇಸ್ಮ್‌ನೊಂದಿಗೆ ತಮ್ಮ ಸಿನಿ ಕೆರಿಯರ್ ಆರಂಭಿಸಿದರು. ಆ ನಂತರ ಕೆಲವು ಹಿಂದಿ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದರು. ಸಿನಿಮಾ ರಂಗದಲ್ಲಿ ಅದಿತಿಗೆ ಸಾಲು ಸಾಲು ಅವಕಾಶಗಳು ಸಿಗುತ್ತಿದ್ದವು.
2021ರಲ್ಲಿ, ಅದಿತಿ 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾದ ಮೂವಿ '83'ನಲ್ಲಿ ಪೋಷಕ ಪಾತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆ ನಂತರ ಅವರು ಯಾವುದೇ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ.
ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲಿ ಅವರು ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ಗೆ ಸೇರಿಕೊಂಡರು, MBA ಅನ್ನು ಮುಂದುವರಿಸಿದರು. ಅವರು ಈ ವರ್ಷದ ಆರಂಭದಲ್ಲಿ ಪದವಿ ಪಡೆದರು. ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್ ಅವರೊಂದಿಗೆ ಅದಿತಿ ಆರ್ಯ ವಿವಾಹ ನಡೆಯಿತು.
2023ರಲ್ಲಿ, ಅದಿತಿ ಅವರು ತಮ್ಮ ಗೆಳೆಯ ಜಯ್ ಕೋಟಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗಿ ಬಹಿರಂಗಪಡಿಸಿದರು. ಜಯ್ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬ್ಯಾಂಕರ್ ಉದಯ್ ಕೋಟಕ್ ಅವರ ಮಗ.
ಫೋರ್ಬ್ಸ್ ನಿಯತಕಾಲಿಕದ ಪಟ್ಟಿಯ ಪ್ರಕಾರ, ಕೋಟಾಕ್ 1,11,600 ಕೋಟಿ ರೂ. ಮೌಲ್ಯವನ್ನು ಹೊಂದಿದ್ದು, ದೇಶದ 14 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ನವೆಂಬರ್‌ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.