ಸೀತಾರಾಮ ನಟಿ ವೈಷ್ಣವಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸದಾಗಿ ಫೋಟೋ ಶೇರ್ ಮಾಡಿಕೊಂಡಿದ್ದು, ರೇಷ್ಮೆ ಸೀರೆಯುಟ್ಟು ಮಿಂಚುತ್ತಿದ್ದಾರೆ. ವೈಷ್ಣವಿ ಗೌಡ ಕೆಂಪು ಸೀರೆಯುಟ್ಟುಕೊಂಡಿರುವ ಲೇಟೆಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಿರುತೆರೆ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾರೆ. ಮಾಡರ್ನ್, ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ರೆಡ್ ಮತ್ತು ಗೋಲ್ಡನ್ ಕಲರ್ ರೇಷ್ಮೆ ಸೀರೆಯುಟ್ಟುಕೊಂಡಿರೋ ಫೋಟೋಸ್ ಶೇರ್ ಮಾಡಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಗೋಲ್ಡ್ ಕಲರ್ ಸೀರೆಗೆ ರೆಡ್ ಬಾರ್ಡರ್ ಇರುವ ಸೀರೆಯುಟ್ಟು ವೈಷ್ಣವಿ ಗೌಡ ಫೋಟೋಗೆ ಪೋಸ್ ನೀಡಿದ್ದಾರೆ. ಹೇರ್ ಫ್ರೀ ಬಿಟ್ಟಿದ್ದು ದೊಡ್ಡದಾದ ಜುಮ್ಕಾ ಹಾಕ್ಕೊಂಡಿದ್ದಾರೆ. ಕ್ಯೂಟ್ ಆಗಿ ಸ್ಮೈಲ್ ಕೊಟ್ಟಿರೋ ಸೀರಿಯಲ್ ಸೀತಾ ಟ್ರೆಡಿಶನಲ್ ಲುಕ್ ಫ್ಯಾನ್ಸ್‌ಗೆ ಸಖತ್ ಇಷ್ಟವಾಗಿದೆ.
ಸೀತಾ ರಾಮ ನಟಿ ವೈಷ್ಣವಿ ಗೌಡ ಸದ್ಯ ಸೀತಾರಾಮ ಸೀರಿಯಲ್ ಮೂಲಕ ಪ್ರೇಕ್ಷಕರ ಮನಸು ಕದ್ದಿದ್ದಾರೆ. ಮುದ್ದು ಪುಟಾಣಿ ಸಿಹಿ ಅಮ್ಮನಾಗಿ ಕಾಣಿಸಿಕೊಂಡಿರುವ ವೈಷ್ಣವಿ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ನಟಿಯ ಸೀರೆಯುಟ್ಟ ಫೋಟೋಗಳಿಗೆ 44,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ಸೌಂದರ್ಯ ದೇವತೆ.ಬ್ಯೂಟಿಫುಲ್' ಎಂದಿದ್ದಾರೆ. ಮತ್ತೊಬ್ಬರು, 'ವಾವ್ವ್ ಬೊಂಬೆ ಹುಡುಗಿ ರಾಜಕುಮಾರಿ' ಎಂದು ಕಮೆಂಟಿಸಿದ್ದಾರೆ. ಬ್ಯೂಟಿ, ಮುದ್ದು ಎಂದು ಮತ್ತೆ ಕೆಲವು ಫ್ಯಾನ್ಸ್ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ವೈಷ್ಣವಿ ಆಗಾಗ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ವೈಷ್ಣವಿ ಅವರಿಗೆ ಇನ್ಸ್ಟಾಗ್ರಾಂನಲ್ಲಿ 1 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಟ್ರೆಂಡಿಂಗ್ ಮ್ಯೂಸಿಕ್‌ಗೆ ಮಾಡೋ ರೀಲ್ಸ್‌ಗಳು ಸಹ ವೈರಲ್ ಆಗುತ್ತವೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಸೀರಿಯಲ್‌ನಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ಮಿಂಚುತ್ತಿದ್ದಾರೆ. ಸೀತಾರಾಮ ಸೀರಿಯಲ್ ಜೀ ಕನ್ನಡದಲ್ಲಿ ಟಿಆರ್‌ಪಿಯಲ್ಲೂ, ಜನಪ್ರಿಯತೆಯಲ್ಲೂ ಮುಂದಿರೋ ಸೀರಿಯಲ್ ಆಗಿದೆ.