Krithi Shetty traditional look: ನಟಿ ಕೃತಿ ಶೆಟ್ಟಿ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಫೋಟೋದಲ್ಲಿ ದಂತದ ಗೊಂಬೆಯಂತೆ ಕಂಗೊಳಿಸುತ್ತಿರುವ ಕೃತಿ, ಹೆವಿ ವರ್ಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಸದ್ಯ ಸೀರೆ ಬೆಲೆ ಎಲ್ಲರ ಗಮನ ಸಳೆದಿದೆ.
ನಟಿ ಕೃತಿ ಶೆಟ್ಟಿ ಅವರ ಇತ್ತೀಚಿನ ಫೋಟೋಶೂಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಫೋಟೋದಲ್ಲಿ ಥೇಟ್ ದಂತದ ಗೊಂಬೆಯಂತೆ ಕಂಗೊಳಿಸುತ್ತಿದ್ದಾರೆ ಕೃತಿ.
26
ಮೊದಲ ಚಿತ್ರವಿದು
ತೆಲುಗು ಚಿತ್ರ 'ಉಪ್ಪೇನ’ (Uppena)ದಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿದ ಕೃತಿ ಶೆಟ್ಟಿ, ತಮ್ಮ ಮೊದಲ ಚಿತ್ರದ ಅಭಿನಯಕ್ಕಾಗಿಯೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
36
ಅಭಿಮಾನಿಗಳ ಮನ ಗೆದ್ದ ಕೃತಿ ಶೆಟ್ಟಿ
ಅದಾದ ನಂತರ ಕೃತಿ ಶೆಟ್ಟಿ ನಾನಿ ಜೊತೆ 'ಶ್ಯಾಮ್ ಸಿಂಘ ರಾಯ್ (Shyam Singha Roy)' ಮತ್ತು ರಾಮ್ ಪೋತಿನೇನಿ ಜೊತೆ 'ದಿ ವಾರಿಯರ್' ಸೇರಿದಂತೆ ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.