ತಂಬೂರಿ ಹಿಡಿದು ಕುಳಿತ 'ಲಕ್ಷ್ಮಿ ಬಾರಮ್ಮ' ನಟಿ ಕೀರ್ತಿ, ಕಾಯ್ಬೇಡಿ, ವೈಷ್ಣವ್ ಬರಲ್ಲ ಅನ್ನೋದಾ ಫ್ಯಾನ್ಸ್‌!

Published : Feb 10, 2024, 10:49 AM IST

ಲಕ್ಷ್ಮಿ ಬಾರಮ್ಮ' ಸೀರಿಯಲ್‌ನಲ್ಲಿ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ವಿಲನ್ ಪಾತ್ರದಲ್ಲಿ ನಟಿಸ್ತಿರೋ ತನ್ವಿ ರಾವ್ ಇತ್ತೀಚಿಗೆ ಡಿಫರೆಂಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಆದ್ರೆ ತಂಬೂರಿ ಹಿಡಿದು ಕುಳಿತು ಕೀರ್ತಿಯನ್ನು ನೋಡಿ, ನೆಟ್ಟಿಗರು ವೈಷ್ಣವ್‌ಗೆ ಕಾಯ್ಬೇಡಿ, ಲಕ್ಷ್ಮಿಯನ್ನು ಬಿಟ್ಟು ಬರಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

PREV
110
ತಂಬೂರಿ ಹಿಡಿದು ಕುಳಿತ 'ಲಕ್ಷ್ಮಿ ಬಾರಮ್ಮ' ನಟಿ ಕೀರ್ತಿ, ಕಾಯ್ಬೇಡಿ, ವೈಷ್ಣವ್ ಬರಲ್ಲ ಅನ್ನೋದಾ ಫ್ಯಾನ್ಸ್‌!

ಕನ್ನಡ ಧಾರಾವಾಹಿ ನೋಡುವ ಪ್ರೇಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲಿ ಒಂದು 'ಲಕ್ಷ್ಮಿ ಬಾರಮ್ಮ'. ಇದರಲ್ಲಿ ಸೀರಿಯಲ್‌ ನಾಯಕ-ನಾಯಕಿಯಷ್ಟೇ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಹೆಸರು ತನ್ವಿ ರಾವ್.

210

ಆದ್ರೆ ಸೀರಿಯಲ್ ವಿಲನ್ ತನ್ವಿ ರಿಯಲ್ ಲೈಫ್‌ನಲ್ಲಿ ಸಖತ್ ಕ್ಯೂಟು. ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಸ್ಟೈಲಿಶ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಡಿಫರೆಂಟ್ ಔಟ್‌ಫಿಟ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

310

ಗೋಲ್ಡನ್ ಕಲರ್ ಸೀರೆ, ಸಂಪೂರ್ಣ ಬ್ಲ್ಯಾಕ್ ಬ್ಲೌಸ್ ಹಾಕ್ಕೊಂಡು ತುರುಬು ಕಟ್ಟಿದ್ದಾರೆ. ಸಿಲ್ವರ್ ಕಲರ್‌ನ ಜ್ಯುವೆಲ್ಲರಿ, ಕಪ್ಪಗಿನ ಬಳೆ ಹಾಗೂ ಸ್ಟಿಕ್ಕರ್ ಹಾಕಿ ವಿಭಿನ್ನ ರೀತಿ ಫೋಟೋಶೂಟ್ ಮಾಡ್ಕೊಂಡಿದ್ದಾರೆ. 

410

ಕೈಯಲ್ಲಿ ತಂಬೂರಿ ಹಿಡಿದು ತನ್ಮಯರಾಗಿ ಪೋಟೋಗಳಿಗೆ ಫೋಸ್ ನೀಡಿದ್ದಾರೆ. ಸೀರಿಯಲ್ ಕೀರ್ತಿ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

510

ಒಬ್ಬ ಅಭಿಮಾನಿ, 'ನಿಮ್ಮ ಕಣ್ಣುಗಳುಅದ್ಭುತವಾಗಿ ಮಾತನಾಡುತ್ತವೆ. ಚೆನ್ನಾಗಿ ಅಭಿನಯಿಸುತ್ತೀರಿ' ಎಂದು ಹೊಗಳಿದ್ದಾರೆ. ಮತ್ತೆ ಹಲವರು 'ಸಿಂಪ್ಲೀ ಸೂಪರ್ಬ್‌' ಎಂದಿದ್ದಾರೆ.

610

ಒಬ್ಬ ಬಳಕೆದಾರರು, 'ತಂಬೂರಿ ಹಿಡಿದು ಕಾಯಬೇಡಿ, ವೈಷ್ಣವ್‌ ಲಕ್ಷ್ಮೀಯನ್ನು ಬಿಟ್ಟು ಬರೋದಿಲ್ಲ' ಎಂದು ಕಾಮೆಂಟಿಸಿದ್ದಾರೆ. 

710

ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಕೀರ್ತಿ ಪಾತ್ರ ಸಖತ್ ಚಾಲೆಂಜಿಂಗ್‌ ಆಗಿದ್ದು, ಪ್ರೀತಿಸಿದವನನ್ನು ಕಳೆದುಕೊಂಡು ಸ್ಯಾಡಿಸ್ಟ್ ಆಗಿ ವರ್ತಿಸುತ್ತಿರುವ ಯುವತಿಯ ಪಾತ್ರ. ಎಲ್ಲ ಎಮೋಶನ್‌ಗಳೂ ಇರೋ ಈ ಪಾತ್ರವನ್ನು ತನ್ವಿ ರಾವ್‌ ಸಖತ್ತಾಗಿ ಅಭಿನಯಿಸುತ್ತಿದ್ದಾರೆ. 

810

ಈ ಕೀರ್ತಿ ಪಾತ್ರಕ್ಕೆ ಹತ್ತಾರು ಶೇಡ್‌ಗಳಿವೆ. ಅದನ್ನು ನಿರ್ವಹಿಸೋದು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ಈ ಪಾತ್ರವನ್ನು ತನ್ವಿ ರಾವ್ ಲೀಲಾಜಾಲವಾಗಿ ನಿಭಾಯಿಸುತ್ತಿದ್ದಾರೆ. 

910

‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು 'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು.  ಕನ್ನಡದಲ್ಲಿ ಈಕೆ ನಟಿಸಿರೋ ಸಿನಿಮಾದ ಹೆಸರು 'ರಂಗ್‌ ಬಿ ರಂಗ್‌'. ಇನ್ನೂ ಒಂದೆರಡು ಸಿನಿಮಾಗಳು ತನ್ವಿ ಕೈಯಲ್ಲಿವೆ. ಆ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ. 

1010

ಇನ್ನು ತನ್ವಿ, ಭರತನಾಟ್ಯ ಕಲಾವಿದೆ ಕೂಡಾ ಹೌದು. ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿತ ತನ್ವಿ ರಾವ್, ಕಥಕ್, ಒಡಿಸಾ, ಬಾಲಿವುಡ್ ಸೇರಿದಂತೆ ಅನೇಕ ವಿಧದ ಡಾನ್ಸ್ ಕಲಿತಿದ್ದಾರೆ. ಅಪೂರ್ವ ಬಾಲಪ್ರತಿಭೆ ಪ್ರಶಸ್ತಿ ಪಡೆದಿದ್ದ ತನ್ವಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

Read more Photos on
click me!

Recommended Stories