ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿನ್ನರಿ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್ನಲ್ಲಿ ತಮ್ಮ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿರ್ತಾರೆ.
ಬಿಗ್ ಬಾಸ್ ಬಳಿಕ ಕನ್ನಡ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ನಟಿ ಭೂಮಿ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಮಾತ್ರ ತುಂಬಾನೆ ಆಕ್ಟಿವ್ ಆಗಿರ್ತಾರೆ. ತಮ್ಮ ಹೊಸ ಹೊಸ ಫೋಟೋ ಶೂಟ್ ಮೂಲಕ ಸುದ್ದಿ ಮಾಡ್ತಿರ್ತಾರೆ.
ಇತ್ತೀಚಗೆ ಇನ್ಸ್ಟಾಗ್ರಾಂನಲ್ಲಿ ವೈಟ್ ಕಲರ್ ಸೀರೆಯುಟ್ಟ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದಾರೆ. ಕಿವಿಗೆ ದೊಡ್ಡದಾದ ಇಯರಿಂಗ್ ಧರಿಸಿ ಓಪನ್ ಹೇರ್ನಲ್ಲಿ ನಸು ನಕ್ಕಿದ್ದಾರೆ. ನಾನಾ ರೀತಿಯಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.
ಭೂಮಿ ಶೆಟ್ಟಿ ಸೀರೆ ಲುಕ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೈಕ್ಸ್, ಹಾರ್ಟ್ ಎಮೋಜಿ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಹಲವರು ಪ್ರೆಟ್ಟೀ, ಬ್ಯೂಟಿಫುಲ್, ಗಾರ್ಜಿಯಸ್, ಕ್ಯೂಟ್ ಸ್ಮೆಲ್, ಬ್ಲ್ಯಾಕ್ ಬ್ಯೂಟಿ, ಲವ್ಲೀ ಡಾರ್ಲಿಂಗ್, ಕ್ವೀನ್ ಎಂದೆಲ್ಲಾ ಹೊಗಳಿ ಕಾಮೆಂಟ್ ಮಾಡಿದ್ದಾರೆ.
ಬಹುತೇಕ ಮಂದಿ ಭೂಮಿ ಶೆಟ್ಟಿಯನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಹೋಲಿಸಿದ್ದಾರೆ. 'ನೀನು ಕನ್ನಡದ ಶಿಲ್ಪ ಶೆಟ್ಟಿ ಕಣೇ' ಎಂದಿದ್ದಾರೆ. ಇನ್ನೊಬ್ಬರು ಜ್ಯೂನಿಯರ್ ಶಿಲ್ಪಾ ಶೆಟ್ಟಿ ಎಂದು ಹೊಗಳಿದ್ದಾರೆ.
Bhoomi shetty
ಕಿನ್ನರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಲೋಕ ಪ್ರವೇಶಿಸಿದ ಭೂಮಿ ಶೆಟ್ಟಿ ಕಿನ್ನರಿಯಾಗಿ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು. ಇದಾದ ನಂತರ ಅವರು ತಮಿಳು, ತೆಲುಗು ಸೀರಿಯಲ್ ಗಳಲ್ಲೂ ಸಹ ನಟಿಸಲು ಆರಂಭಿಸಿದರು.
ಬಿಗ್ ಬಾಸ್ ಬಂದ ಮೇಲೆ. ಆಕೆಯ ರಿಯಲ್ ಲೈಫ್, ಮುಗ್ಧತೆ, ಆಟ ಎಲ್ಲವೂ ಸೇರಿ ಭೂಮಿ ಶೆಟ್ಟಿಯನ್ನು ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಮಾಡಿದ್ದಂತೂ ನಿಜ.
ಸದ್ಯಕ್ಕೆ ಭೂಮಿ ಶೆಟ್ಟಿ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಸಹ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಒಟ್ಟಲ್ಲಿ ಭೂಮಿ ಕಿರುತೆರೆಯ ಜೊತೆಗೆ ಹಿರಿತೆರೆಯ ಫೇವರಿಟ್ ನಟಿ ಕೂಡ ಆಗಿದ್ದಾರೆ.