ಮೆರೂನ್ ಡ್ರೆಸ್‌ನಲ್ಲಿ ಮಿಂಚಿದ 'ಮೊನಾಲಿಸಾ' ನಟಿ ಸದಾ, ವಯಸ್ಸಾಯ್ತು ಮದ್ವೆಯಾಗಿ ಮೇಡಂ ಎಂದ ನೆಟ್ಟಿಗರು!

Published : Apr 08, 2024, 02:53 PM ISTUpdated : Apr 08, 2024, 03:02 PM IST

ದಕ್ಷಿಣ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಮಿಂಚಿದ್ದ ಸ್ಟಾರ್‌ ನಟಿ ಸದಾ ಬಹುತೇಕರ ಫೇವರಿಟ್. ಆದರೆ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಕನ್ನಡದ ಮೊನಾಲಿಸಾ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿಯ ಇತ್ತೀಚಿನ ಫೋಟೋಸ್ ಇಲ್ಲಿದೆ.

PREV
19
ಮೆರೂನ್ ಡ್ರೆಸ್‌ನಲ್ಲಿ ಮಿಂಚಿದ 'ಮೊನಾಲಿಸಾ' ನಟಿ ಸದಾ, ವಯಸ್ಸಾಯ್ತು ಮದ್ವೆಯಾಗಿ ಮೇಡಂ ಎಂದ ನೆಟ್ಟಿಗರು!

ದಕ್ಷಿಣ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ಮಿಂಚಿದ್ದ ಸ್ಟಾರ್‌ ನಟಿ ಸದಾ ಬಹುತೇಕರ ಫೇವರಿಟ್.  ಜಯಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಅಪಾರ ಅಭಿಮಾನಿಗಳನ್ನ ಪಡೆದವರು. ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಸದಾ ತಮ್ಮ ಅಭಿನಯ ಹಾಗೂ ಬ್ಯೂಟಿ ಮೂಲಕ ಚಿತ್ರರಂಗದ ಗಮನವನ್ನೂ ಸೆಳೆದಿದ್ದರು.

29

ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡಿದ ಸದಾ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗೂ ಕನ್ನಡದ ಸಿನಿಮಾಗಳಲ್ಲಿ ನಟಿಸೋದಕ್ಕೆ ಶುರು ಮಾಡಿದ್ರು. ಸ್ಯಾಂಡಲ್ ವುಡ್ ಮಂದಿಯೂ ಸದಾ ಬ್ಯೂಟಿಗೆ ಬೆರಗಾಗಿ ಕನ್ನಡ ಚಿತ್ರರಂಗಕ್ಕೂ ಕರೆತಂದ್ರು.

39

ಕನ್ನಡದಲ್ಲಿ ಮೊನಾಲಿಸ ಸಿನಿಮಾ ಮಾಡಿ ಸಕ್ಸಸ್ ಕಂಡ್ರು. ಫಸ್ಟ್ ಚಿತ್ರದಲ್ಲಿ ಸದಾ ಡಬಲ್ ಆಕ್ಟಿಂಗ್ ಮಾಡಿ ಪ್ರೇಕ್ಷಕರಿಂದ ಜೈ ಎನ್ನಿಸಿಕೊಂಡ್ರು. ನಂತ್ರ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೋಹಿನಿ. ಹುಡುಗ-ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಆರಕ್ಷಕ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

49

ಸ್ಟಾರ್ ನಟಿಯಾಗಿ ಮಿಂಚಿದ್ದ ಸದಾ ಸುಮಾರು 15 ವರ್ಷಗಳ ಕಾಲ ಪಂಚಭಾಷಾ ತಾರೆಯಾಗಿ ಮಿಂಚಿದ್ರು. ನಂತರ ಸ್ಟಾರ್ ಡಂ ಕಮ್ಮಿ ಆಗ್ತಿದ್ದಂತೆ ಕಿರುತೆರೆಯತ್ತ ಮುಖ ಮಾಡಿದ್ರು. ತೆಲುಗು ಇಂಡಸ್ಟ್ರಿಯಲ್ಲಿ ಡ್ಯಾನ್ಸ್ ಹಾಗೂ ಸಿಂಗಿಂಗ್ ಷೋಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದ್ರು.

59

ಇನ್ನು ಚಿತ್ರರಂಗದಲ್ಲಿ ಆಫರ್ ಗಳು ಕಮ್ಮಿ ಆಗ್ತಿದ್ದಂತೆ ಸದಾ ತಮ್ಮ ಹವ್ಯಾಸಗಳತ್ತ ಗಮನ ಹರಿಸಿದ್ದಾರೆ/ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಸದಾ ವೀಕೆಂಡ್ ನಲ್ಲಿ ವೈಲ್ಡ್ ಫೋಟೋಗ್ರಫಿ ಮಾಡುತ್ತಾರೆ. ಅದಕ್ಕಾಗಿ ಕಾಡು ಮೇಡು ಸುತ್ತಿ ತಮ್ಮ ಕ್ಯಾಮೆರಾದಲ್ಲಿ ಪ್ರಾಣಿ ಪಕ್ಷಿಯ ಫೋಟೋಗಳನ್ನ ಸೆರೆ ಹಿಡಿಯುತ್ತಾರೆ.

69

ನಟಿ ಸದಾ ಸದ್ಯ ಮುಂಬೈನಲ್ಲಿ ವಾಸವಾಗಿದ್ದು ಮನೆಯಲ್ಲಿ ಬೆಕ್ಕುಗಳನ್ನ ಸಾಕಿಕೊಂಡಿದ್ದಾರೆ. ಸಾಕುಪ್ರಾಣಿಗಳೆಂದರೆ ಸದಾ ಅವ್ರಿಗೆ ಎಲ್ಲಿಲ್ಲದ ಪ್ರೀತಿ. ಮನೆಯಲ್ಲಿ ಮಾತ್ರವಲ್ಲದೆ ಗೋಶಾಲೆಗಳಿಗೂ ಬೇಟಿಕೊಟ್ಟು ಸಮಯ ಕಳೆಯುತ್ತಾರೆ.

79

ಆ ಸುಮದುರ ಕ್ಷಣಗಳನ್ನ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಮ್ಮ ಲೈಫ್ ಸ್ಟೈಲ್ ಬಗ್ಗೆ ಅಪ್ಡೇಟ್ ಕೊಡ್ತಾರೆ ಈ ನಟಿ.

89

ನಟಿ ಸದಾ ಅವ್ರಿಗೆ ಸದ್ಯ 38 ವರ್ಷ ವಯಸ್ಸಾಗಿದ್ದು ಇಂದಿಗೂ ಕೂಡ ಸಖತ್ ಯಂಗ್ ಆಗಿ ಕಾಣಿಸಿಕೊಳ್ತಾರೆ. ಸದಾ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರೋ ಫೋಟೋಗಳನ್ನ ನೋಡಿದ್ರೆ ಎಂತವ್ರು ಕೂಡ ಅವ್ರ ಮನಸೋಲೋದು ಖಂಡಿತ. ಸದಾ ಕೇವಲ ನಟನೆ ಮಾತ್ರವಲ್ಲ ಭರತನಾಟ್ಯ ನೃತ್ಯ ಕಲಾವಿದೆಯೂ ಹೌದು.

99

ವಯಸ್ಸು 38 ಆದರೂ ಸದಾಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಅದಕ್ಕೆ ಸದಾ ಅವ್ರಿಗೇನು ಬೇಸರವಿಲ್ಲ. ಮದುವೆ ಯಾಕೆ ಆಗಿಲ್ಲ ಅಂದರೆ ನನಗೆ ಮದುವೆ ಆಗಬೇಕು ಅನ್ನಿಸೋ ಹುಡುಗ ಸಿಕ್ಕಿಲ್ಲ ಅದಕ್ಕೆ ಸಿಂಗಲ್ ಆಗಿಯೇ ಇದ್ದಿನಿ ಅಂತಾರೆ.

Read more Photos on
click me!

Recommended Stories