ಲ್ಯಾವೆಂಡರ್ ಸೀರೆಯಲ್ಲಿ ಮಿಂಚಿದ ಕೆಜಿಎಫ್ ಬೆಡಗಿ, ಹಿಪ್ನೊಟೈಸ್‌ ಮಾಡ್ಬಿಟ್ರಲ್ಲಾ ಎಂದ ಫ್ಯಾನ್ಸ್‌

Published : Apr 08, 2024, 10:40 AM ISTUpdated : Apr 08, 2024, 11:09 AM IST

ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್‌ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

PREV
18
ಲ್ಯಾವೆಂಡರ್ ಸೀರೆಯಲ್ಲಿ ಮಿಂಚಿದ ಕೆಜಿಎಫ್ ಬೆಡಗಿ, ಹಿಪ್ನೊಟೈಸ್‌ ಮಾಡ್ಬಿಟ್ರಲ್ಲಾ ಎಂದ ಫ್ಯಾನ್ಸ್‌

ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್‌ ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.

28

ಕೆಜಿಎಫ್ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಗೆ ಅದಕ್ಕೆ ತಕ್ಕಂತೆ ಅವಕಾಶಗಳು ಸಿಗುತ್ತಿಲ್ಲ ಎಂದೇ ಹೇಳಬೇಕು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಟ್ರೆಡಿಶನಲ್, ಮಾಡರ್ನ್‌ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.

38

ಶ್ರೀನಿಧಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಬಿಳಿ ಹರಳಿನ ಗ್ರ್ಯಾಂಡ್ ನೆಕ್ಲೇಸ್‌ ಸಹ ಧರಿಸಿದ್ದಾರೆ. ಈ ಫೋಟೊಗಳಲ್ಲಿ ಅಪ್ಪಟ ದಕ್ಷಿಣ ಭಾರತದ ನಟಿಯಂತೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. 

48

ಕೆಜಿಎಫ್' ಬ್ಯೂಟಿ ಶ್ರೀನಿಧಿ ಶೆಟ್ಟಿಯ ಈ ಫೋಟೊಗಳಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫ್ಯಾನ್ಸ್‌ ಕಮೆಂಟ್ ಮಾಡುತ್ತಿದ್ದಾರೆ. ಕ್ಯೂಟಿ, ಬ್ಯೂಟಿಫುಲ್, ಗಾರ್ಜಿಯಸ್‌, ಬೇಬಿ, ಕ್ರಶ್ ಎಂದೆಲ್ಲಾ ಹೊಗಳಿದ್ದಾರೆ.

58

ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಸೀರಿಸ್‌ನಿಂದ ಫೇಮಸ್ ಆಗಿದ್ದಾರೆ. ಅವರ ಈ ಸಿನಿಮಾ ನೋಡಿದವರು ಅವರ ಸೌಂದರ್ಯವನ್ನಷ್ಟೇ ಹೊಗಳಿಲ್ಲ. ಬದಲಾಗಿ, ಅವರ ನಟನೆಯನ್ನೂ ಹೊಗಳಿದ್ದರು. ನಟನೆಯ ಮೊದಲ ಹೆಜ್ಜೆಯಲ್ಲೇ 'ಕೆಜಿಎಫ್' ಸಿನಿಮಾ ಶ್ರೀನಿಧಿ ಶೆಟ್ಟಿಗೆ ಅಪಾರ ಜನಮನ್ನಣೆ ನೀಡಿತ್ತು. 

68

ಸದ್ಯ ಶ್ರೀನಿಧಿ ಶೆಟ್ಟಿ 'ತೆಲುಸು ಕದಾ' ಅನ್ನುವ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದು ಬಿಟ್ಟರೆ ಶ್ರೀನಿಧಿ ಶೆಟ್ಟಿ ಬೇರೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

78

ಶ್ರೀನಿಧಿ ಶೆಟ್ಟಿ ಅವರು 21 ಅಕ್ಟೋಬರ್ 1992 ರಂದು ಕರ್ನಾಟಕದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಜನಿಸಿದರು. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 2015 ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಗೆದ್ದರು.

88

ಶ್ರೀನಿಧಿ ಮಿಸ್ ದಿವಾ 2016 ರಲ್ಲಿ ಸೂಪರ್ ನ್ಯಾಷನಲ್ ಆದರು. ಜೊತೆಗೆ ಮಣಪ್ಪುರಂ ಮಿಸ್ ಕ್ವೀನ್ ಇಂಡಿಯಾ ಕಿರೀಟವನ್ನು ಗೆದ್ದರು. ಇನ್ನು ಶ್ರೀನಿಧಿ ಅನೇಕ ಉತ್ಪನ್ನಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories