ಫಾರಿನ್‌ನಲ್ಲಿ ಮಸ್ತ್ ಮಜಾ ಮಾಡ್ತಿರೋ ರಶ್ಮಿಕಾ, ವಿಜಯ್‌ ದೇವರಕೊಂಡ ಬೆಸ್ಟ್ ಫೋಟೋಗ್ರಾಫರ್ ಎಂದ ನೆಟ್ಟಿಗರು!

First Published Apr 8, 2024, 12:48 PM IST

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಫಾರಿನ್‌ ಟ್ರಿಪ್‌ ಹೋಗ್ಬಿಟ್ಟು ಸಖತ್ ಮಜಾ ಮಾಡ್ತಿದ್ದಾರೆ. ಅಭಿಮಾನಿಗಳು ಫೋಟೋ ನೋಡಿ ವಿಜಯ್ ದೇವರಕೊಂಡ ಜೊತೆಗಿದ್ರಾ ಎಂದು ಕಾಲೆಳೆದಿದ್ದಾರೆ.

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌..ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ಫಾರಿನ್‌ ಟ್ರಿಪ್‌ ಹೋಗ್ಬಿಟ್ಟು ಸಖತ್ ಮಜಾ ಮಾಡ್ತಿದ್ದಾರೆ.

ಅಭಿಮಾನಿಗಳು ಫೋಟೋ ನೋಡಿ ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಮಾತ್ರವಲ್ಲ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ, 'ವಿಜಯ್ ದೇವರಕೊಂಡ ಒಳ್ಳೆಯ ಫೋಟೋಗ್ರಾಫರ್‌ ಎಂದು ಕಾಲೆಳೆದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈಗ ಬರ್ತ್‌ಡೇ ಖುಷಿಯಲ್ಲೇ ವಿದೇಶಕ್ಕೆ ಹಾರಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ.

ಅಭಿಮಾನಿಗಳು, ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸ್ ಇನ್ ದಿ ವರ್ಲ್ಡ್‌,ಶ್ರೀವಲ್ಲ, ಬ್ಯೂಟಿಫುಲ್, ಕ್ರಶ್ ಆಫ್ ಆಲ್ ಟೈಂ ಎಂದೆಲ್ಲಾ ಹೊಗಳಿದ್ದಾರೆ.

ತಮ್ಮ ಬಿಝಿ ಶೆಡ್ಯೂಲ್‌ಗಳ ಮಧ್ಯೆಯೂ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಕುರಿತಾದ ಅಪ್‌ಡೇಟ್‌, ಮಾಡರ್ನ್‌, ಟ್ರೆಡಿಶನಲ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್ ಸಹ ಇದಕ್ಕೆ ಮಿಸ್ ಮಾಡ್ದೆ ಕಾಮೆಂಟ್ ಮಾಡುತ್ತಾರೆ.

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ತಾರೆ ಎನ್ನುವ ಸಿನಿ ರಂಗದಲ್ಲಿ ರೂಮರ್ಸ್ ಕೇಳಿ ಬರ್ತಿದೆ. ಆದ್ರೆ ಇದರ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. 

ಇನ್ನು, ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಗೀತಾಂಜಲಿ ಪಾತ್ರದಲ್ಲಿ ರಶ್ಮಿಕಾ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. 

ಎಪ್ರಿಲ್ 5ರಂದು ರಶ್ಮಿಕಾ ಮಂದಣ್ಣ ಬರ್ತ್‌ಡೇಯ ಸಲುವಾಗಿ, 'ಪುಷ್ಪಾ' ಚಿತ್ರತಂಡ ಫಸ್ಟ್‌ಲುಕ್‌ ರಿಲೀಸ್ ಮಾಡಿದೆ. ಇದರಲ್ಲಿ ರಶ್ಮಿಕಾ ದೊಡ್ಡದಾಗಿ ಸಿಂಧೂರ ಇಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

click me!