Jelly glass bangles: ಹಬ್ಬ, ಮದುವೆ ಸಮಾರಂಭಗಳಲ್ಲಿ ಕೈಗಳ ಅಂದ ಹೆಚ್ಚಿಸಲು ಸಾಂಪ್ರದಾಯಿಕ ಬಳೆಗಳ ಜಾಗದಲ್ಲಿ ಹೊಸ ಲುಕ್ ಹುಡುಕುತ್ತಿದ್ದೀರಾ? ಹಾಗಿದ್ದರೆ ಸದ್ಯ ಭಾರೀ ಟ್ರೆಂಡಿಂಗ್‌ನಲ್ಲಿರುವ ಈ ಕಲರ್‌ಫುಲ್ ‘ಜೆಲ್ಲಿ ಗಾಜಿನ ಬಳೆಗಳು’ ನಿಮಗಾಗಿ..
ಭಾರತೀಯ ನಾರಿಯರ ಅಂದವನ್ನು ಹೆಚ್ಚಿಸುವಲ್ಲಿ ಗಾಜಿನ ಬಳೆಗಳಿಗೆ ಸಾಟಿಯೇ ಇಲ್ಲ. ಕಾಲ ಬದಲಾದಂತೆ ಬಳೆಗಳ ಶೈಲಿಯಲ್ಲೂ ಹೊಸ ಟ್ರೆಂಡ್ ಶುರುವಾಗಿದ್ದು, ಇದೀಗ ಪಾರದರ್ಶಕ ಹೊಳಪು ಹೊಂದಿರುವ 'ಜೆಲ್ಲಿ ಗ್ಲಾಸ್ ಬಳೆಗಳು' (Jelly Glass Bangles) ಭಾರಿ ಸದ್ದು ಮಾಡುತ್ತಿವೆ. ಹಬ್ಬ, ಮದುವೆ ಸಮಾರಂಭಗಳಲ್ಲಿ ಸೀರೆ ಹಾಗೂ ಲೆಹೆಂಗಾಗಳಿಗೆ ಈ ಬಳೆಗಳನ್ನು ಹೇಗೆ ಮ್ಯಾಚ್ ಮಾಡಬಹುದು ಎಂಬ ವಿವರ ಇಲ್ಲಿದೆ..
24
ವಿಶೇಷತೆಯೇನು?
ಸಾಮಾನ್ಯ ಗಾಜಿನ ಬಳೆಗಳಿಗಿಂತ ಈ ಜೆಲ್ಲಿ ಗ್ಲಾಸ್ ಬಳೆಗಳು ಕೊಂಚ ಭಿನ್ನ. ಇವುಗಳು ಮೃದುವಾದ, ಹೊಳಪಿನ ಪಾರದರ್ಶಕ (Translucent finish) ವಿನ್ಯಾಸವನ್ನು ಹೊಂದಿದ್ದು, ನೋಡಲು ಜೆಲ್ಲಿಯಂತೆಯೇ ಕಂಗೊಳಿಸುತ್ತವೆ. ಆಲಿವ್ ಗ್ರೀನ್, ಕಿತ್ತಳೆ, ಲ್ಯಾವೆಂಡರ್, ಪಿಂಕ್, ಮರೂನ್, ಹಳದಿ ಮತ್ತು ಗಾಢ ಕೆಂಪು ಸೇರಿದಂತೆ ಹತ್ತಾರು ನವನವೀನ ಬಣ್ಣಗಳಲ್ಲಿ ಇವು ಲಭ್ಯವಿವೆ. ಇವು ಸಾಂಪ್ರದಾಯಿಕ ಉಡುಗೆಗಳಿಗೆ ಯೂತ್‌ಫುಲ್ ಹಾಗೂ ಕ್ಲಾಸಿ ಲುಕ್ ನೀಡುತ್ತವೆ.
34
ಸೀರೆ ಹಾಗೂ ಉಡುಗೆಗಳಿಗೆ ಮ್ಯಾಚಿಂಗ್ ಟಿಪ್ಸ್
ಹಬ್ಬ, ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಧರಿಸುವ ವಿವಿಧ ಉಡುಗೆಗಳಿಗೆ ಈ ಬಳೆಗಳನ್ನು ಅತ್ಯಂತ ಸುಲಭವಾಗಿ ಮ್ಯಾಚ್ ಮಾಡಬಹುದು..
ಕಾಂಜೀವರಂ ಸೀರೆಗಳಿಗೆ: ಹಸಿರು ಹಾಗೂ ಗೋಲ್ಡ್ ಶೇಡ್ ಬಳೆಗಳು ರೇಷ್ಮೆ ಸೀರೆಗಳಿಗೆ ಅದ್ಭುತ ಮೆರುಗು ನೀಡುತ್ತವೆ.
ಬನಾರಸಿ & ಸಿಲ್ಕ್ ಸೀರೆಗೆ: ಕ್ಲಾಸಿಕ್ ಕೆಂಪು ಮತ್ತು ಮರೂನ್ ಬಣ್ಣದ ಬಳೆಗಳ ಕಾಂಬಿನೇಷನ್ ಅತ್ಯಂತ ರಿಚ್ ಲುಕ್ ತಂದುಕೊಡುತ್ತದೆ.
ಲೆಹೆಂಗಾ ಮತ್ತು ಲಂಗ-ದಾವಣಿಗೆ: ಹಳದಿ ಹಾಗೂ ಕಿತ್ತಳೆ ಬಣ್ಣದ ಬಳೆಗಳು ಯುವತಿಯರ ಅಂದವನ್ನು ದುಪ್ಪಟ್ಟು ಮಾಡುತ್ತವೆ.
ಅನಾರ್ಕಲಿ ಡ್ರೆಸ್‌ಗಳಿಗೆ: ತಿಳಿ ಗುಲಾಬಿ (ಪಿಂಕ್) ಮತ್ತು ಲ್ಯಾವೆಂಡರ್ ಶೇಡ್‌ಗಳು ಪಾಸ್ಟೆಲ್ ಬಣ್ಣದ ಅನಾರ್ಕಲಿಗಳಿಗೆ ಹೇಳಿಮಾಡಿಸಿದಂತಿವೆ.
ಎಲ್ಲಾ ಬಣ್ಣಗಳನ್ನು ಒಟ್ಟಿಗೆ ಬೆರೆಸಿ ಧರಿಸುವ ಬದಲು, ನಿಮ್ಮ ಸೀರೆ ಅಥವಾ ಉಡುಗೆಯ ಬಣ್ಣಕ್ಕೆ ತಕ್ಕಂತೆ ಎರಡರಿಂದ ಮೂರು ಸಂಬಂಧಿತ ಶೇಡ್‌ಗಳನ್ನು ಆರಿಸಿ ಒಂದರ ಪಕ್ಕ ಒಂದರಂತೆ (Stacking) ಧರಿಸಿದರೆ ಕೈಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಪರಂಪರೆ ಮತ್ತು ಮಾಡರ್ನ್ ಸೊಬಗಿನ ಅದ್ಭುತ ಸಂಗಮವಾಗಿರುವ ಈ ಜೆಲ್ಲಿ ಬಳೆಗಳು ಪ್ರತಿಯೊಬ್ಬ ಮಹಿಳೆಯ ಜ್ಯುವೆಲ್ಲರಿ ಬಾಕ್ಸ್‌ನಲ್ಲಿ ಇರಲೇಬೇಕಾದ ಆಭರಣ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.