Natural acne relief drink: ಮೊಡವೆ ಕಾಟದಿಂದ ಬೇಸತ್ತಿದ್ದೀರಾ? ಎಷ್ಟೇ ಸ್ಕಿನ್ ಕೇರ್ ಮಾಡಿದ್ರೂ, ಕ್ರೀಮ್ ಹಚ್ಚಿದ್ರೂ ಮೊಡವೆಗಳು ಮತ್ತೆ ಮತ್ತೆ ಬರ್ತಾನೇ ಇರುತ್ತೆ. ಇಂಥ ಟೈಮ್‌ನಲ್ಲಿ ಬರೀ ಮುಖದ ಆರೈಕೆ ಮಾಡಿದರೆ ಸಾಲದು, ನಮ್ಮ ಊಟ ಹಾಗೂ ಲೈಫ್‌ಸ್ಟೈಲ್ ಕಡೆಗೂ ಗಮನ ಕೊಡಬೇಕು ಅಂತಾರೆ ಎಕ್ಸ್‌ಪರ್ಟ್ಸ್.
ವಾತಾವರಣ, ಲೈಫ್‌ಸ್ಟೈಲ್ ಹಾಗೂ ಫುಡ್‌ನಿಂದಾಗಿ ಮುಖದ ಮೇಲೆ ಮೊಡವೆಗಳು ಬಂದು ಕಿರಿಕಿರಿ ಮಾಡುತ್ತವೆ. ಎಷ್ಟೇ ಟ್ರೀಟ್‌ಮೆಂಟ್ ತಗೊಂಡ್ರೂ ಇವು ಕಮ್ಮಿ ಆಗಲ್ಲ. ಇದರಿಂದಾಗಿ ಆಚೆ ಹೋಗೋಕೂ ಮುಜುಗರ ಆಗುತ್ತೆ. ಆದ್ರೆ, ನೀವು ಒಮ್ಮೆ ಈ 7 ದಿನಗಳ ಹೆಲ್ದಿ ಚಾಲೆಂಜ್ ಟ್ರೈ ಮಾಡಿ ನೋಡಿ. ಲೈಫ್‌ನಲ್ಲಿ ಮತ್ತೆ ಮೊಡವೆಗಳು ನಿಮ್ಮ ಹತ್ತಿರ ಸುಳಿಯಲ್ಲ.
25
ಹೇಗೆ ತಯಾರಿಸಬೇಕು?
ನೀವು ಮೊದಲು 3-4 ಲವಂಗಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಅದನ್ನು ನುಣ್ಣಗೆ ಅರೆಯಿರಿ. ಆ ಪೇಸ್ಟ್‌ಗೆ ಸ್ವಲ್ಪ ಜೇನುತುಪ್ಪ, ಒಂದೆರಡು ಹನಿ ನಿಂಬೆರಸ ಹಾಗೂ ಸ್ವಲ್ಪ ತಾಜಾ ಬೇವಿನ ಎಲೆಯ ಪೇಸ್ಟ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.
35
ಇದು ಮೊಡವೆಗೆ ಹೇಗೆ ಕೆಲಸ ಮಾಡುತ್ತೆ?
ಲವಂಗವು ಆಂಟಿ-ಇನ್ಫ್ಲಮೇಟರಿ ಹಾಗೂ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ. ಬೇವಿನ ಎಲೆಯನ್ನು ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸುತ್ತಾರೆ. ಜೇನುತುಪ್ಪ ಹಾಗೂ ನಿಂಬೆರಸ ನಮ್ಮ ದಿನನಿತ್ಯದ ಆಹಾರದ ಭಾಗವಾಗಿದೆ. ಇವೆಲ್ಲವೂ ಸೇರಿ ಮೊಡವೆಗಳನ್ನು ಓಡಿಸುತ್ತವೆ.
ನೀವು ಈ ಮನೆಮದ್ದನ್ನು ಪ್ರತಿದಿನ ಬಳಸಿದರೆ ಮೊಡವೆ ಹಾಗೂ ಉರಿಯೂತದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದರೆ ಪ್ರತಿಯೊಬ್ಬರ ತ್ವಚೆ, ಹಾರ್ಮೋನ್, ಊಟ ಹಾಗೂ ಲೈಫ್‌ಸ್ಟೈಲ್ ಬೇರೆ ಬೇರೆ ಇರುತ್ತದೆ. ಹಾಗಾಗಿ ಕೇವಲ 7 ದಿನಗಳಲ್ಲಿ ಮೊಡವೆ ಸಂಪೂರ್ಣವಾಗಿ ಮಾಯವಾಗುತ್ತದೆ ಎಂದು ಹೇಳಲಾಗದು. ನೀವು ಸಾಕಷ್ಟು ನೀರು ಕುಡಿಯಬೇಕು, ಸಾತ್ವಿಕ ಆಹಾರ ತಿನ್ನಬೇಕು ಹಾಗೂ ಕರಿದ ಪದಾರ್ಥಗಳನ್ನು ಬಿಡಬೇಕು.
ಮೊಡವೆ ಸಮಸ್ಯೆ ವಿಪರೀತವಾಗಿದ್ದರೆ ಡರ್ಮಟಾಲಜಿಸ್ಟ್ ಭೇಟಿ ಮಾಡುವುದು ಒಳ್ಳೆಯದು. ಗರ್ಭಿಣಿಯರು ಅಥವಾ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯಬೇಕು.
55
ವೈದ್ಯರ ಸಲಹೆ ಪಡೆಯಿರಿ
ಈ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮೊಡವೆಗಳು ಖಂಡಿತಾ ಕಡಿಮೆಯಾಗುತ್ತವೆ ಎನ್ನಲು ಯಾವುದೇ ಕ್ಲಿನಿಕಲ್ ಆಧಾರಗಳಿಲ್ಲ. ಪ್ರತಿಯೊಬ್ಬರ ಸ್ಕಿನ್ ಟೈಪ್ ಬೇರೆ ಇರುತ್ತದೆ. ಈ ಲೇಖನದಲ್ಲಿರುವ ಮಾಹಿತಿ ಕೇವಲ ನಿಮ್ಮ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಯಾವುದೇ ಹೊಸ ಪ್ರಯೋಗ ಮಾಡುವ ಮುನ್ನ ನೀವು ನುರಿತ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.