ಸಾಂಪ್ರದಾಯಿಕ ಇಳಕಲ್ ಸೀರೆ ಇದೇ ಮೊದಲ ಬಾರಿಗೆ ತನ್ನ ಲುಕ್ ಬದಲಾಯಿಸಿಕೊಂಡು ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಕರ್ನಾಟಕದ ಅಸ್ಮಿತೆಯನ್ನು ಸಾರುವ ಇಳಕಲ್ ಸೀರೆ ಕರ್ನಾಟಕದ ಹೆಮ್ಮೆಯ ತಾಣವಾದ ಹಂಪೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡು ಮೆರೆಸುವಂಥ ಹೊಸ ಡಿಸೈನ್ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹಂಪೆಯ ಕಲ್ಲಿನ ರಥ, ಕಲ್ಲಿನ ಪಗಾರ ಗೋಡೆ, ರಥದ ಆನೆಗಳು, ಕಲಾತ್ಮಕ ಚಕ್ರಗಳು ಸೀರೆಯಲ್ಲಿ ಒಡಮೂಡಿವೆ.
ಹಲವು ಬಣ್ಣಗಳಲ್ಲಿ ಪೆನ್ಸಿಲ್ ಸ್ಕೆಚ್ ಮಾದರಿಯ ಪ್ರಿಂಟ್ ಕಲಾಪ್ರಿಯರ ಮನ ಗೆಲ್ಲುತ್ತಿವೆ.
ದಿನನಿತ್ಯದ ಬಳಕೆಗೆ ಮಾತ್ರವಲ್ಲದೆ, ಎಲ್ಲಾ ಸಮಾರಂಭಗಳಿಗೂ ಈ ಸೀರೆ ಬೆಸ್ಟ್.
ಯಾವುದೇ ಆಡಂಬರ ಬಯಸದೆ ಸಿಂಪಲ್ ಲುಕ್‌ನ ಸೀರೆ ಇಷ್ಟಪಡುವವರು ಈ ರೀತಿಯ ಸೀರೆಯನ್ನು ಒಮ್ಮೆ ಟ್ರೈ ಮಾಡಬಹುದು.