ಕೊಬ್ಬರಿ ಎಣ್ಣೆ ಜೊತೆ ಇದೊಂದು ಕ್ಯಾಪ್ಸುಲ್ ಹಾಕಿ ಹಚ್ಚಿದ್ರೆ ಕೂದಲು ಡಬಲ್ ವೇಗದಲ್ಲಿ ಬೆಳೆಯುತ್ತೆ

Published : Sep 18, 2026, 04:27 PM IST

Hair Growth Remedy: ಕೂದಲನ್ನು ಉದ್ದ, ದಪ್ಪ ಮತ್ತು ಬಲವಾಗಿ ಬೆಳೆಯಲು ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ ಬಳಸುವ ವಿಧಾನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಕೂದಲನ್ನು ಕಂಡೀಷನ್ ಮಾಡಲು ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನಲಾಗುತ್ತಿದೆ. ನೀವು ಟ್ರೈ ಮಾಡಿ.

PREV
16
ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗ್ತಿದೆ ಕೂದಲು ಬೆಳೆಯುವ ರೆಮೆಡಿ

ಪ್ರತಿಯೊಬ್ಬ ಹುಡುಗಿಯೂ ಉದ್ದ, ದಪ್ಪ ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾಳೆ. ಆದರೆ, ಕಳಪೆ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಕೂದಲು ಉದುರುವಿಕೆ ಮತ್ತು ಶುಷ್ಕತೆ ಸಾಮಾನ್ಯ ಸಮಸ್ಯೆಗಳಾಗಿವೆ, ಇದು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳುವುದನ್ನು ಒಂದು ಸವಾಲಾಗಿ ಮಾಡಿದೆ, ಕೂದಲನ್ನು ಬೆಳೆಸುವುದಂತೂ ಕಷ್ಟ. ಆದರೆ ಇದೀಗ ಈ ಒಂದು ರೆಮೆಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

26
ಕೂದಲಿಗೆ ಮ್ಯಾಜಿಕ್ ಮಾಡುತ್ತೆ

ಜನರು ಈ ಪರಿಹಾರವು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೂದಲನ್ನು ಆರೋಗ್ಯಕರವಾಗಿಡುವುದಲ್ಲದೆ, ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಈ ಪರಿಹಾರದಲ್ಲಿ ತೆಂಗಿನ ಎಣ್ಣೆಯನ್ನು ವಿಟಮಿನ್ ಇ ಕ್ಯಾಪ್ಸುಲ್‌ಗಳೊಂದಿಗೆ ಬೆರೆಸಿ ಕೂದಲಿಗೆ ಹಚ್ಚಲಾಗುತ್ತೆ, ಇದರಿಂದ ಅತ್ಯುತ್ತಮ ರಿಸಲ್ಟ್ ಬರುತ್ತಿದೆ ಎಂದು ಹೇಳಲಾಗುತ್ತಿದೆ.

36
ಕೊಬ್ಬರಿ ಎಣ್ಣೆಯಿಂದ ಕೂದಲ ಬೆಳವಣಿಗೆ

ನಾವು ನೂರಾರು ವರ್ಷಗಳಿಂದ ಕೊಬ್ಬರಿ ಎಣ್ಣೆ ಬಳಸುತ್ತಿದ್ದೇವೆ, ನಮ್ಮ ಅಜ್ಜಿಯರು ಸಹ ಇದನ್ನು ಬಳಸುತ್ತಿದ್ದರು. ನಾವು ಬಳಸುತ್ತಿದ್ದೆವು. ಈ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ಕೂದಲಿನ ಕೋಶಕದೊಳಗೆ ಆಳವಾಗಿ ತೂರಿಕೊಂಡು ಪ್ರೋಟೀನ್ ನಷ್ಟವನ್ನು ತಡೆಯುತ್ತದೆ. ಇದು ಕೂದಲು ಒಡೆಯುವಿಕೆಯನ್ನು ಕಡಿಮೆ ಮಾಡುತ್ತದೆ, ಮೃದುವಾಗಿರಿಸುತ್ತದೆ ಮತ್ತು ತೇವಾಂಶವನ್ನು ನೀಡುತ್ತದೆ. ಇದು ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ.

46
ವೈರಲ್ ಎಣ್ಣೆ ತಯಾರಿಸಲು ನಿಮಗೆ ಬೇಕಾಗಿರೋದು ಏನು?
  • ನಿಮಗೆ 2-3 ಚಮಚ ಶುದ್ಧ ತೆಂಗಿನ ಎಣ್ಣೆ (ಕೋಲ್ಡ್-ಪ್ರೆಸ್ಡ್ ಅಥವಾ ವರ್ಜಿನ್)
  • 1-2 ವಿಟಮಿನ್ ಇ ಕ್ಯಾಪ್ಸುಲ್‌ಗಳು ( ಎವಿಯಾನ್ 400).
  • ಇವೆರಡು ಜೊತೆಯಾಗಿ ಸೇರಿಸಿದರೆ ನಿಮ್ಮ ಕೂದಲು ಆರೋಗ್ಯಯುತವಾಗಿ ಜೊತೆಗೆ ಡಬಲ್ ವೇಗದಲ್ಲಿ ಬೆಳೆಯುತ್ತದೆ.
56
ಇದನ್ನು ತಯಾರಿಸುವ ವಿಧಾನ

ಮೊದಲು, ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದು ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ. ಎಣ್ಣೆಯನ್ನು ಹೊರತೆಗೆಯಲು ಕ್ಯಾಪ್ಸುಲ್ ಅನ್ನು ಸ್ವಚ್ಛವಾದ ಪಿನ್‌ನಿಂದ ಚುಚ್ಚಿ ತೆಂಗಿನ ಎಣ್ಣೆಗೆ ಸೇರಿಸಿ, ನಂತರ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಕೂದಲನ್ನು ಭಾಗಗಳಾಗಿ ವಿಂಗಡಿಸಿ ಮತ್ತು ನಿಮ್ಮ ಬೆರಳುಗಳಿಂದ ವೃತ್ತಾಕಾರವಾಗಿ ನಿಮ್ಮ ನೆತ್ತಿಯನ್ನು ಸುಮಾರು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

66
ಎಷ್ಟು ಬಾರಿ ಈ ಎಣ್ಣೆ ಹಚ್ಚಬೇಕು?

ಉಳಿದ ಪೇಸ್ಟ್ ಕೂದಲು ಮತ್ತು ನೆತ್ತಿಯ ಉದ್ದಕ್ಕೂ ಹಚ್ಚಿ. 30-60 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಅಗತ್ಯವಿದ್ದರೆ, ಎಲ್ಲಾ ಎಣ್ಣೆಯನ್ನು ತೆಗೆದುಹಾಕಲು ಎರಡು ಬಾರಿ ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಇದನ್ನು ಹಚ್ಚಬಹುದು. ಉದ್ದ ಅಥವಾ ದಪ್ಪ ಕೂದಲಿಗೆ, ಸರಿಯಾದ ಪ್ರಮಾಣದಲ್ಲಿ ಹಚ್ಚಿ. ಮೊದಲ ಬಾರಿಗೆ ಹಚ್ಚುವ ಮೊದಲು, ಕೈಯಲ್ಲಿ ಅಥವಾ ಕಿವಿಯ ಹಿಂದೆ ಪ್ಯಾಚ್ ಟೆಸ್ಟ್ ಮಾಡಿ. ಗರ್ಭಿಣಿಯರು ಅಥವಾ ಮೆಡಿಕಲ್ ಕಂಡೀಶನ್ ಇರುವವರು ಇದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories