ಕಣ್ಣೋಟದಲ್ಲೇ ಎಲ್ಲರ ಸೆಳೆಯಲು ಮುಂದಾದ ಇನ್‌ಫ್ಲುಯೆನ್ಸರ್, ಸರ್ಜರಿ ಬೆನ್ನಲ್ಲೇ ಸಾವು

Published : Oct 09, 2025, 07:38 PM IST

ಕಣ್ಣೋಟದಲ್ಲೇ ಎಲ್ಲರ ಸೆಳೆಯಲು ಮುಂದಾದ ಇನ್‌ಫ್ಲುಯೆನ್ಸರ್, ಸರ್ಜರಿ ಬೆನ್ನಲ್ಲೇ ಸಾವು, ಫಾಕ್ಸ್ ಐಯ್ ಸರ್ಜರಿ ಮಾಡಿಸಿಕೊಂಡ ಈ ಇನ್‌ಫ್ಲುಯೆನ್ಸರ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಮತ್ತೆ ಬ್ಯೂಟಿ ಸರ್ಜರಿ ಮಾರಕ ಅನ್ನೋದು ಸಾಬೀತಾಗಿದೆ.

PREV
16
ಫಾಕ್ಸ್ ಐಯ್ ಸರ್ಜರಿ

ಫಾಕ್ಸ್ ಐಯ್ ಸರ್ಜರಿ

ಬ್ಯೂಟಿ ಹೆಚ್ಚಿಸಿಕೊಳ್ಳಲು ಮಾಡುವ ಸರ್ಜರಿ ಅಪಾಯಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಸೌಂದರ್ಯ ವರ್ಧಿಸಲು ಹೋಗಿ ಹಲವರು ಹಾಸಿಗೆ ಹಿಡಿದಿದ್ದರೆ, ಮತ್ತೆ ಕೆಲವರು ಇಹಲೋಕ ತ್ಯಜಿಸಿದ್ದಾರೆ. ಇದೀಗ 31 ವರ್ಷದ ಇನ್‌ಫ್ಲುಯೆನ್ಸರ್ ಫಾಕ್ಸ್ ಐಯ್ ( ಬೆಕ್ಕಿನ ಕಣ್ಣು) ರೀತಿಯ ಸರ್ಜರಿ ಮಾಡಿಸಿಕೊಂಡಿದ್ದಾರೆ. ಪರಿಣಾಮ ಇನ್‌ಫೆಕ್ಷನ್, ಊತ, ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಮೃತಪಟ್ಟ ಘಟನೆ ನಡೆದಿದೆ.

26
31 ವರ್ಷದ ಇನ್‌ಫ್ಲುಯೆನ್ಸರ್ ಸಾವು

31 ವರ್ಷದ ಇನ್‌ಫ್ಲುಯೆನ್ಸರ್ ಸಾವು

ಅಡೈರ್ ಮೆಂಡೆಸ್ ಡುಟ್ರಾ ಅನ್ನೋ 31 ವರ್ಷದ ಬ್ರೆಜಲ್ ಇನ್‌ಫ್ಲುಯೆನ್ಸರ್ ಸಾವು ಮತ್ತೆ ಬ್ಯೂಟಿ, ಕಾಸ್ಮೆಟಿಕ್ಸ್ ಸರ್ಜರಿ ಮಾಡಿಸಿಕೊಳ್ಳುವ ಮಂದಿಗೆ ಎಚ್ಚರಿಕೆ ನೀಡಿದೆ. ಜನಪ್ರಿಯ ಇನ್‌ಫ್ಲುಯೆನ್ಸರ್ ಬ್ರ್ಯಾಂಡ್ ಪ್ರಮೋಟರ್ ಆಗಿ ಗುರುತಿಸಿಕೊಂಡಿದ್ದ ಅಡೈರ್ ಕಣ್ಣಿನಲ್ಲೇ ಎಲ್ಲರ ಆಕರ್ಷಿಸಲು ಹೋಗಿ ಸಾವು ಕಂಡಿದ್ದಾರೆ.

36
ಫಾಕ್ಸ್ ಐಯ್ ಸರ್ಜರಿ ಭಾರಿ ಅಪಾಯ

ಫಾಕ್ಸ್ ಐಯ್ ಸರ್ಜರಿ ಭಾರಿ ಅಪಾಯ

ಡಾ.ದೆಬರಾಜ್ ಶೋಮ್ ಪ್ರಕರಾ, ಫಾಕ್ಸ್ ಐಯ್ಸ್ ಸರ್ಜರಿ ಅತ್ಯಂತ ಅಪಾಯಾಕಾರಿ. ನುರಿತ ತಜ್ಞ ವೈದ್ಯರು ಮಾತ್ರ ಈ ಸರ್ಜರಿ ಮಾಡುತ್ತಾರೆ. ಕಡಿಮೆ ದುಡ್ಡಿನಲ್ಲಿ ಮಾಡಿಕೊಡುತ್ತಾರೆ ಎಂದು ಮೋಸಹೋಗಬಾರದು. ಕಣ್ಣಿನ ಸರ್ಜರಿ ಇದಾಗಿರುವ ಕಾರಣ ಅತೀ ಸೂಕ್ಷ್ಮತೆ ಬೇಕು ಎಂದು ಶೋಮ್ ಹೇಳಿದ್ದಾರೆ.

46
ಏನಿದು ಫಾಕ್ಸ್ ಐಯ್ ಸರ್ಜರಿ?

ಏನಿದು ಫಾಕ್ಸ್ ಐಯ್ ಸರ್ಜರಿ?

ಇದು ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ.. ಕಣ್ಣಿನ ಹೊರಗಿನ ಮೂಲೆಗಳನ್ನು ಎತ್ತಿ ಹಾಗೂ ಉದ್ದಗೊಳಿಸುವ ಮೂಲಕ ಬೆಕ್ಕಿನ ಕಣ್ಣಿನ ರೀತಿ ಅಥವಾ ಬಾದಾಮಿ ಆಕಾರದ ರೀತಿ ಮಾಡಲಾಗುತ್ತದೆ. ಕಣ್ಣಿನ ಮೂಲೆಗಳನ್ನು ಎತ್ತುವ ಸರ್ಜರಿ ಮಾಡಲಾಗುತ್ತದೆ. ಕಣ್ಣಿನ ತುದಿ ಚರ್ಮಗಳನ್ನು ಕತ್ತರಿಸಿ ಮೇಲಕ್ಕೆ ಎತ್ತಲಾಗುತ್ತದೆ.

56
ಇನ್‌ಫೆಕ್ಷನ್ ಹೆಚ್ಚು

ಇನ್‌ಫೆಕ್ಷನ್ ಹೆಚ್ಚು

ಈ ಶಸ್ತ್ರಚಿಕಿತ್ಸೆಯಲ್ಲಿ ಕಣ್ಣುಗಳು ಊದಿಕೊಳ್ಳುತ್ತದೆ, ನರಗಳಿಗೆ ಹಾನಿಯಾಗಬಹುದು. ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಗುದು. ತಲೆನೋವು ಕಾಣಿಸಿಕೊಳ್ಳಹುದು, ಇನ್‌ಫೆಕ್ಷನ್ ವಿಪರೀತವಾದರೆ ಉಸಿರಾಟ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡು ಪ್ರಾಣಕ್ಕೆ ಕುತ್ತು ತರಬುಹುದು ಎಂದು ಶೋಮ್ ಹೇಳಿದ್ದಾರೆ.

66
ಅಡೈರ್ ವಿಚಾರದಲ್ಲೂ ಆಗಿದ್ದು ಇದೆ

ಅಡೈರ್ ವಿಚಾರದಲ್ಲೂ ಆಗಿದ್ದು ಇದೆ

ಇನ್‌ಫ್ಲುಯೆನ್ಸರ್ ಅಡೈರ್ ವಿಚಾರದಲ್ಲೂ ಇದೇ ಸಮಸ್ಯೆಯಾಗಿರುವ ಸಾಧ್ಯತೆ ಇದೆ ಎಂದು ಶೋಮ್ ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಅಡೈರ್ ತೀವ್ರ ಆರೋಗ್ಯ ಸಮಸ್ಯೆಗಳಿಂದ ನಲುಗಿದ್ದರು. ಸತತ ಚಿಕಿತ್ಸೆ ಪಡೆದರೂ ಅಡೈರ್ ಚೇತರಿಸಿಕೊಳ್ಳಲಿಲ್ಲ.

Read more Photos on
click me!

Recommended Stories