ಏರ್‌ಕ್ರಾಫ್ಟ್ ಮೂಲಕ ಲೈವ್ ಮಾಡುತ್ತಿದ್ದ ಇನ್‌ಫ್ಲುಯೆನ್ಸರ್ ಸಾವು, ವಿಮಾನ ಪತನ ದೃಶ್ಯ ಸೆರೆಯಾಗಿದೆ. ಸಾಹಸ ರೀತಿಯಲ್ಲಿ ಲೈವ್ ಮಾಡುತ್ತಿದ್ದ ಕಂಟೆಂಟ್ ಕ್ರಿಯೇಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಫಾಲೋವರ್ಸ್ ಈ ಲೈವ್ ವೀಕ್ಷಣೆ ಮಾಡುತ್ತಿದ್ದಂತೆ ಇನ್‌ಫ್ಲುಯೆನ್ಸರ್ ಮೃತಪಟ್ಟಿದ್ದಾರೆ.
ಜಿಯಾಗ್ನೆ (ಸೆ.30) ಸೋಶಿಯಲ್ ಮೀಡಿಯಾಗಳಲ್ಲಿ ಮಿಂಚುತ್ತಿದ್ದ ಕಂಟೆಂಟ್ ಕ್ರಿಯೇಟರ್ ಲೈವ್‌ಗಾಗಿ ಭಾರಿ ಸಾಹಸ ಮಾಡಿದ್ದಾರೆ. ಲೈಟರ್ ಏರ್‌ಕ್ರಾಫ್ಟ್ ಮೂಲಕ ಇನ್‌ಫ್ಲುಯೆನ್ಸರ್ ಹಾರಾಟ ಮಾಡುತ್ತಾ ಲೈವ್ ಸ್ಟ್ರೀಮೀಂಗ್ ಮಾಡಿದ್ದಾರೆ. ದುರಂತ ಎಂದರೆ ಈತನ ಫಾಲೋವರ್ಸ್ ಈ ಲೈವ್ ಸ್ಟ್ರೀಮ್ ನೋಡುತ್ತಿದ್ದಂತೆ ವಿಮಾನ ಪತನಗೊಂಡಿದೆ. ಲೈವ್ ವಿಡಿಯೋ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಈ ದುರಂತದಲ್ಲಿ ಇನ್‌ಫ್ಲುಯೆನ್ಸರ್ ಮೃತಪಟ್ಟಿದ್ದಾನೆ. ಈ ಘಟನೆ ಚೀನಾದ ಜಿಯಾಗ್ನೇ ಕೌಂಟಿಯಲ್ಲಿ ನಡೆದಿದೆ.
ಚೀನಾ ಟಿಕ್‌ಟಾಕ್ ವರ್ಶನ್‌ನಲ್ಲಿ ಲೈವ್ ಸ್ಟ್ರೀಮ್
ಚೀನಾದ ಟಿಕ್‌ಟಾಕ್ ವರ್ಶನ್ ಡೌಯಿನ್ ಮೂಲಕ 55 ವರ್ಷದ ಇನ್‌ಫ್ಲುಯೆನ್ಸರ್ ಟ್ಯಾಂಗ್ ಫೆಜಿ ಲೈವ್ ಸ್ಟ್ರೀಮ್ ಮಾಡುತ್ತಿದ್ದವೇಳೆ ಈ ದುರ್ಘಟನೆ ನಡೆದಿದೆ. 1 ಲಕ್ಷ ಫಾಲೋವರ್ಸ್ ಹೊಂದಿರುವ ಟ್ಯಾಂಗ್ ಫೆಜಿ ಲೈಟರ್ ಏರ್‌ಕ್ರಾಫ್ಟ್‌ನಲ್ಲಿ ಕುಳಿತು ಹಾರಾಟ ಆರಂಭಿಸಿದ್ದರು. ಜೊತೆಗೆ ಲೈವ್ ಸ್ಟ್ರೀಮ್ ಆರಂಭಗೊಂಡಿತ್ತು. ನೂರಕ್ಕೂ ಹೆಚ್ಚು ಫಾಲೋವರ್ಸ್ ಲೈವ್ ನೋಡುತ್ತಿದ್ದಂತೆ ಫೆಜಿ ಲೈಟರ್ ಏರ್‌ಕ್ರಾಫ್ಟ್ ಪತನಗೊಂಡಿದೆ.
ಟ್ಯಾಂಗ್ ಫೆಜಿ ಖುದ್ದು ಏರ್‌ಕ್ರಾಫ್ಟ್ ಚಲಾಯಸುತ್ತಿದ್ದ. ಕೆಲ ಹೊತ್ತಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ತಕ್ಷಣವೇ ಲೈಟರ್ ಏರ್‌ಕ್ರಾಫ್ಟ್ ರೆಕ್ಕೆಗಳು ಪತನಗೊಂಡು ಏರ್‌ಕ್ರಾಫ್ಟ್ ನೆಲಕ್ಕೆ ಅಪ್ಪಳಿಸಿದೆ. ಕೆಲವೇ ಹೊತ್ತಲ್ಲೇ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಹೆಚ್ಚು ಎತ್ತರವೂ ಇರಲಿಲ್ಲ. ಹೀಗಾಗಿ ಪ್ಯಾರಾಚ್ಯೂಟ್ ಮೂಲಕ ರಕ್ಷಣೆ ಪೆಡೆಯುವ ಸಾಧ್ಯತೆಗಳು ಇರಲಿಲ್ಲ. ಇಷ್ಟೇ ಅಲ್ಲ ಪ್ಯಾರಾಚ್ಯೂಟ್ ಸೇರಿದಂತೆ ಇತರ ರಕ್ಷಣಾ ವ್ಯವಸ್ಥೆಗಳು ಏರ್‌ಕ್ರಾಫ್ಟ್‌ನಲ್ಲಿ ಇತ್ತಾ ಅನ್ನೋ ಅನುಮಾನವೂ ಎದ್ದಿದೆ.
ಲೈಟರ್ ಏರ್‌ಕ್ರಾಫ್ಟ್ ಖರೀದಿಸಿದ್ದ ಇನ್‌ಫ್ಲೂಯೆನ್ಸರ್
ಟ್ಯಾಂಗ್ ಫೆಜಿ ಡೌಯಿನ್ ಸೋಶಿಯಲ್ ಮೀಡಿಯಾ ಮೂಲಕ ಭಾರಿ ಜನಪ್ರಿಯರಾಗಿದ್ದರು. ಸೋಶಿಯಲ್ ಮೀಡಿಯಾ ಕಂಟೆಂಟ್ ಮೂಲಕ ಆದಾಯ ಪಡೆಯುತ್ತಿದ್ದ ಫೆಜಿ ಕಳೆದ ತಿಂಗಳು ಲೈಟರ್ ಏರ್‌ಕ್ರಾಫ್ಟ್ ಖರೀದಿಸಿದ್ದರು. ಈ ಕುರಿತು ವಿಡಿಯೋ ಹಂಚಿಕೊಂಡಿದ್ದರು. ಆದರೆ ಒಂದೇ ತಿಂಗಳಲ್ಲೇ ಅದೇ ಏರ್‌ಕ್ರಾಫ್ಟ್ ಮೂಲಕ ದುರಂತ ಅಂತ್ಯಕಂಡಿದ್ದಾರೆ. ಬರೋಬ್ಬರಿ 43 ಲಕ್ಷ ರೂಪಾಯಿ ನೀಡಿ ಈ ಲೈಟರ್ ಏರ್‌ಕ್ರಾಫ್ಟ್ ಖರೀದಿಸಿದ್ದರು. 2,000 ಅಡಿ ಎತ್ತರ ಹಾರಬಲ್ಲ ಹಾಗೂ 60 ಕಿಲೋಮೀಟರ್ ವೇಗದಲ್ಲಿ ಹಾರಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.
