Cannes Festival: ತುಪ್ಪ-ಬೆಲ್ಲದ ಬ್ಯೂಟಿ ಸೀಕ್ರೆಟ್​ ಹೇಳಿ, ಫ್ಯಾಷನ್​ ಲೋಕವನ್ನು ದಂಗು ಬಡಿಸಿದ Alia Bhatt

Published : May 14, 2026, 12:53 PM IST

ಫ್ರಾನ್ಸ್‌ನ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಆಲಿಯಾ ಭಟ್ ತಮ್ಮ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಅಡುಗೆಮನೆಯಲ್ಲಿ ಲಭ್ಯವಿರುವ ತುಪ್ಪ, ಬೆಲ್ಲ, ಕಡಲೆಕಾಯಿ ಮತ್ತು ತೆಂಗಿನಕಾಯಿ ಬಳಸಿ ತಯಾರಿಸಿದ 'ಸ್ಕಿನ್ ಸ್ನ್ಯಾಕ್' ತಮ್ಮ ಹೊಳೆಯುವ ಚರ್ಮದ ಹಿಂದಿನ ರಹಸ್ಯ ಎಂದು ತಿಳಿಸಿದ್ದಾರೆ.

PREV
16
ಮೇಕಪ್ಪೇ ಸರ್ವಸ್ವ

ನಟ-ನಟಿಯರು ಮಾತ್ರವಲ್ಲದೇ ಕೆಲವು ಮಹಿಳೆಯರ ಬ್ಯೂಟಿ ಸೀಕ್ರೇಟ್​ ಹಿಂದೆ ಐದಾರು ಕೆ.ಜಿ ಮೇಕಪ್​ಗಳ ರಹಸ್ಯ ಇರುವುದು ಹೊಸ ವಿಷಯವೇನಲ್ಲ. ಈ ಬಗ್ಗೆ ಮೀಮ್ಸ್​ಗಳ ಸುರಿಮಳೆಯೂ ಆಗುತ್ತಲೇ ಇರುತ್ತದೆ. ಸೌಂದರ್ಯ ಎಂದರೆ ತೆಳ್ಳಗೆ-ಬೆಳ್ಳಗೆ ಎಂದುಕೊಂಡಿರುವ ಮನಸ್ಥಿತಿಯಿಂದಾಗಿ ಸೆಲೆಬ್ರಿಟಿಗಳಿಗೆ ಅಭಿಮಾನಿಗಳನ್ನು ಗಳಿಸಲು ಇದು ಅನಿವಾರ್ಯವಾದರೆ, ಇನ್ನು ಕೆಲವು ಜನರಿಗೂ ಮೇಕಪ್​ ಇಲ್ಲದೇ ಇರಲು ಆಗುವುದೇ ಇಲ್ಲ.

26
ಅಡುಗೆ ಮನೆಯಲ್ಲಿಯೇ ಸೌಂದರ್ಯ

ಆದರೆ, ಭಾರತೀಯರ ಅಡುಗೆ ಮನೆಯಲ್ಲಿಯೇ ಸೌಂದರ್ಯದ ಗುಟ್ಟು ಅಡಗಿದೆ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ. ಈಗ ಭಾರತದ ಆಯುರ್ವೇದ, ಯೋಗ, ಧ್ಯಾನ ಎಲ್ಲವು ಹೊರ ದೇಶಗಳ ಜನರ ಗಮನ ಸೆಳೆಯುತ್ತಿರುವ ಕಾರಣ, ಮೊದಲಿಗೆ ಆಯುರ್ವೇದ ಎಂದರೆ ಸೊಟ್ಟಮೂತಿ ಮಾಡುತ್ತಿದ್ದ ಭಾರತೀಯರು ವಿದೇಶಿಗರ ಪ್ರಭಾವದಿಂದ ಆಯುರ್ವೇದ, ಯೋಗ, ಧ್ಯಾನದದ ಶ್ರೇಷ್ಠತೆಯನ್ನು ಈಗ ಅರಿಯುತ್ತಿರುವುದು ಶೋಚನೀಯವಾದರೂ, ಸದ್ಯ ಆದ್ರೂ ಬುದ್ಧಿಬಂತಲ್ಲ ಎನ್ನುವುದಷ್ಟೇ ಸಂತೋಷ.

36
ಫ್ಯಾಷನ್​ ಲೋಕ ದಂಗು

ಫ್ರಾನ್ಸ್​ನಲ್ಲಿ ನಡೆಯುವ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ಆಲಿಯಾ ಭಟ್​, ಭಾರತೀಯ ಅಡುಗೆ ಮನೆಯ ತುಪ್ಪ-ಬೆಲ್ಲದ ಬ್ಯೂಟಿ ಸೀಕ್ರೇಟ್​ ತೆರೆದಿಡ್ಡು ಫ್ಯಾಷನ್​ ಲೋಕವನ್ನು ದಂಗುಬಡಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ.

46
ತುಪ್ಪ-ಬೆಲ್ಲದ ಗುಟ್ಟು

ಫ್ಯಾಷನ್​ ದಿಗ್ಗಜೆ ಮೇರಿ ಕ್ಲೇರ್ ಫ್ರಾನ್ಸ್ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಬಾಲಿವುಡ್ ತಾರೆ ಆಲಿಯಾ ಭಟ್ ಅವರು ಭಾರತೀಯ ಅಡುಗೆಮನೆಗಳಲ್ಲಿ ತುಪ್ಪ ಮತ್ತು ಬೆಲ್ಲವನ್ನು ಬಳಸಿ ತಯಾರಿಸಿದ ವಿಶೇಷ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ, ತಮ್ಮ ಬ್ಯೂಟಿ ಸೀಕ್ರೇಟ್​ ಅನ್ನೂ ಅವರು ರಿವೀಲ್​ ಮಾಡಿದ್ದಾರೆ.

56
ತುಪ್ಪವೇ ಬ್ಯೂಟಿ ಸೀಕ್ರೇಟ್​

ವಿಡಿಯೋದಲ್ಲಿ ಆಲಿಯಾ "ಭಾರತದಲ್ಲಿ, ಕನಿಷ್ಠ ನನ್ನ ಮನೆಯಲ್ಲಿ, ನಾವು ತುಪ್ಪದಲ್ಲಿ ಆಹಾರವನ್ನು ಬೇಯಿಸುತ್ತೇವೆ, ಮತ್ತು ಅನೇಕ ಜನರು ಸಹ ಮಾಡುತ್ತಾರೆ. ಇದು ಆರೋಗ್ಯ ಮತ್ತು ಚರ್ಮ ಎರಡಕ್ಕೂ ಒಳ್ಳೆಯದು ಎಂದಿದ್ದಾರೆ. ಸ್ವಲ್ಪ ಬೆಲ್ಲ, ಸ್ವಲ್ಪ ಪುಡಿಮಾಡಿದ ಕಡಲೆಕಾಯಿ ಮತ್ತು ತುಪ್ಪದಲ್ಲಿ ಸ್ವಲ್ಪ ತೆಂಗಿನಕಾಯಿಯನ್ನು ಬೆರೆಸಿ ತಾನು ಲಘು ತಿಂಡಿ ತಯಾರಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ. ಅವರು ಈ ಪಾಕವಿಧಾನವನ್ನು "ಸ್ಕಿನ್ ಸ್ನ್ಯಾಕ್" ಎಂದು ಕರೆದಿದ್ದಾರೆ. "ನನ್ನ ಚರ್ಮವನ್ನು ಚೆನ್ನಾಗಿ ಕಾಣುವಂತೆ ಮಾಡಲು ನಾನು ಇದನ್ನು ತಿನ್ನುತ್ತೇನೆ ಮತ್ತು ಅದು ನಿಜವಾಗಿಯೂ ಕೆಲಸ ಮಾಡುತ್ತದೆ" ಎಂದು ನಟಿ ಹೇಳಿದ್ದಾರೆ.

66
ಆಲಿಯಾಳ ದೇಸಿ ತಿಂಡಿ ಮಾಡುವ ವಿಧಾನ

ಸಾಮಗ್ರಿಗಳು: 1 ಚಮಚ ತುಪ್ಪ, 1 ಚಮಚ ಬೆಲ್ಲ, 1 ಚಮಚ ಹುರಿದ ಕಡಲೆಕಾಯಿ ಮತ್ತು 1 ಚಮಚ ತುರಿದ ತೆಂಗಿನಕಾಯಿ.

ವಿಧಾನ: ಇವೆಲ್ಲವನ್ನೂ ಒಂದು ಸಣ್ಣ ಬಟ್ಟಲಿನಲ್ಲಿ ಮಿಶ್ರಣ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿ, ತಾಜಾವಾಗಿ ತಿನ್ನಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories