Silk Saree Shopping Tips: ಸಿಲ್ಕ್ ಸೀರೆಗಳು ಅವುಗಳ ವಿಶಿಷ್ಟ ಹೊಳಪು ಮತ್ತು ಮೃದುತ್ವಕ್ಕೆ ಹೆಸರುವಾಸಿ. ಆದರೆ ಮಾರುಕಟ್ಟೆಯಲ್ಲಿ ಅಸಲಿ ರೇಷ್ಮೆಯ ಹೆಸರಿನಲ್ಲಿ ನಕಲಿ ಸೀರೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅಸಲಿ ಯಾವುದು ಎಂದು ಗುರುತಿಸುವುದೇ ಈಗ ಸವಾಲಿನ ಕೆಲಸವಾಗಿದೆ.
ಮಹಿಳೆಯರಿಗೂ ಸೀರೆಗೂ ಇರುವ ನಂಟನ್ನು ಹೆಚ್ಚೇನು ಹೇಳಬೇಕಿಲ್ಲ. ಇನ್ನು ಸಮಾರಂಭಗಳು, ಹಬ್ಬ ಹರಿದಿನಗಳು ಬಂತೆಂದರೆಸಿಲ್ಕ್ ಸೀರೆಗೆ ಹೆಚ್ಚು ಪ್ರಾಶಸ್ತ್ಯ. ಆದರೆ ನೀವು ಸಿಲ್ಕ್ ಸೀರೆ ಖರೀದಿಸಲು ಹೋಗುತ್ತಿದ್ದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬಹುದು. ವಿಶೇಷವಾಗಿ ಸಿಲ್ಕ್ ಸೀರೆಗಳು ತಮ್ಮ ವಿಶಿಷ್ಟ ಹೊಳಪು ಮತ್ತು ಸಾಫ್ಟ್‌ನೆಸ್‌ಗೆ ಹೆಸರುವಾಸಿಯಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಸಲಿ ಸಿಲ್ಕ್ ಹೆಸರಿನಲ್ಲಿ ಕಲಬೆರಕೆ ಅಥವಾ ಸಿಂಥೆಟಿಕ್ ಬಟ್ಟೆಗಳ ಹಾವಳಿ ಹೆಚ್ಚಾಗಿದ್ದು, ಅಸಲಿ ಮತ್ತು ನಕಲಿ ಸಿಲ್ಕ್ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಸಾಕಷ್ಟು ಕಷ್ಟದ ಕೆಲಸವಾಗಿದೆ. ನೀವು ಸಿಲ್ಕ್ ಸೀರೆ ಖರೀದಿಸಲು ಯೋಜಿಸುತ್ತಿದ್ದರೆ, ಸರಿಯಾದ ಬಟ್ಟೆಯನ್ನು ಗುರುತಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ಗಮನಿಸುವುದು ಅಗತ್ಯವಾಗಿದೆ.
26
ಉಂಗುರದ ಪರೀಕ್ಷೆ
ಸಿಲ್ಕ್ ಸೀರೆಯು ತುಂಬಾ ಸಾಫ್ಟ್ ಮತ್ತು ನುಣುಪಾಗಿರುತ್ತದೆ. ಅಸಲಿ ಸಿಲ್ಕ್ ಗುರುತಿಸಲು ನೀವು ಉಂಗುರವನ್ನು ಬಳಸಬಹುದು. ಸೀರೆಯು ಉಂಗುರದ ಮಧ್ಯದಿಂದ ಸುಲಭವಾಗಿ ಹಾದುಹೋದರೆ ಅದು ಅಸಲಿ ಸಿಲ್ಕ್ ಆಗಿದೆ. ಏಕೆಂದರೆ ಅಸಲಿ ಸಿಲ್ಕ್ ತುಂಬಾ ಮೃದು ಮತ್ತು ಸ್ಥಿತಿಸ್ಥಾಪಕತ್ವವನ್ನು (flexible) ಹೊಂದಿರುತ್ತದೆ. ಅದೇ ನಕಲಿ ಸಿಲ್ಕ್ ಆಗಿದ್ದರೆ ಉಂಗುರದಲ್ಲಿ ಪದೇ ಪದೇ ಸಿಲುಕಿಕೊಳ್ಳುತ್ತದೆ.
36
ಹೊಳಪಿನಿಂದ ಗುರುತಿಸಿ
ಸಿಲ್ಕ್ ಸೀರೆಯ ಹೊಳಪಿನ ಮೂಲಕವೂ ನೀವು ಅದನ್ನು ಗುರುತಿಸಬಹುದು. ಇದರ ಹೊಳಪು ವಿಶಿಷ್ಟವಾಗಿರುತ್ತದೆ. ನೀವು ಅದನ್ನು ಬೇರೆ ಬೇರೆ ಕೋನಗಳಿಂದ (angles) ನೋಡಿದಾಗ, ಅದು ಬಣ್ಣ ಬದಲಾಯಿಸುವಂತೆ ಕಾಣಿಸುತ್ತದೆ. ಇದರಿಂದ ನೀವು ಅಸಲಿ ಸಿಲ್ಕ್ ಅನ್ನು ಗುರುತಿಸಬಹುದು.
ಸಿಲ್ಕ್ ಸೀರೆಗಳಲ್ಲಿ ಹೆಚ್ಚಾಗಿ ಜರಿ ಕೆಲಸವನ್ನು ಮಾಡಲಾಗಿರುತ್ತದೆ. ಅಸಲಿ ಜರಿಯಲ್ಲಿ ಬೆಳ್ಳಿ ಅಥವಾ ಚಿನ್ನದ ತಂತಿಗಳನ್ನು ಬಳಸಲಾಗುತ್ತದೆ. ಇದನ್ನು ಗುರುತಿಸಲು ನೀವು ಸೀರೆಯನ್ನು ಉಲ್ಟಾ ಮಾಡಿ ನೋಡಬಹುದು. ಒಂದು ವೇಳೆ ಹಿಂಭಾಗದಲ್ಲಿ ದಾರಗಳು ಅತಿಯಾಗಿ ಎದ್ದು ಕಾಣುತ್ತಿದ್ದರೆ (protruding), ಅದು ಮಷೀನ್ ಕೆಲಸವಾಗಿರುವ ಸಾಧ್ಯತೆ ಇರುತ್ತದೆ.
56
ನೀರಿನಿಂದ ಪರೀಕ್ಷಿಸಿ
ಸೀರೆಯ ಮೇಲೆ ಕೆಲವು ಹನಿ ನೀರನ್ನು ಹಾಕಿ ಪರೀಕ್ಷಿಸುವ ಮೂಲಕವೂ ಅಸಲಿ ಸಿಲ್ಕ್ ಪತ್ತೆಹಚ್ಚಬಹುದು. ಸೀರೆಯು ನೀರನ್ನು ಹೀರಿಕೊಂಡರೆ ಅದು ಅಸಲಿ ಎಂದರ್ಥ. ಆದರೆ ಸಿಂಥೆಟಿಕ್ ಸಿಲ್ಕ್ ಮೇಲೆ ನೀರಿನ ಹನಿಗಳು ಜಾರಿ ಹೋಗುತ್ತವೆ.
66
ಕೈಯಿಂದ ಉಜ್ಜಿ ನೋಡಿ
ಅಸಲಿ ಸಿಲ್ಕ್ ಗುರುತಿಸಲು ಅದನ್ನು ಅಂಗೈಯಿಂದ ಉಜ್ಜಿ ನೋಡಬಹುದು. ಉಜ್ಜಿದಾಗ ಸ್ವಲ್ಪ ಉಷ್ಣತೆ ಅಥವಾ ಬಿಸಿ ಅನುಭವವಾದರೆ ಅದು ಅಸಲಿ ಸಿಲ್ಕ್ ಆಗಿರಬಹುದು. ಅದೇ ಸಿಂಥೆಟಿಕ್ ಅಥವಾ ನಕಲಿ ಸಿಲ್ಕ್ ಅನ್ನು ಉಜ್ಜಿದಾಗ ಅದು ತಂಪಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.