ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಶೃಂಗಾರ ದೃಶ್ಯಗಳು ಸದ್ದು ಮಾಡುತ್ತಿದ್ದರೆ, ಇತ್ತ ಅವರ ಪತ್ನಿ ರಾಧಿಕಾ ಪಂಡಿತ್ ಕುಟುಂಬದೊಂದಿಗೆ ಎಡ್ ಶೀರೆನ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. ಅಣ್ಣ-ಅತ್ತಿಗೆಯ ಜೊತೆ ಅವರು ಸ್ಟೆಪ್ಸ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಇತ್ತ ಟಾಕ್ಸಿಕ್ ಚಿತ್ರದ ಹಾಡುಗಳು ಅದರಲ್ಲಿಯೂ ತಬಾಹಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್ಚಲ್ ಸೃಷ್ಟಿಸುತ್ತಿದೆ. ಯಶ್ ಅವರ ಬೋಲ್ಡ್ ದೃಶ್ಯಕ್ಕೆ ಅಭಿಮಾನಿಗಳು ಸುಸ್ತಾಗಿ ಹೋಗಿದ್ದಾರೆ.
26
ಶೃಂಗಾರ ಜ್ವಾಲೆ
ಹೌದು, ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರ ಅಡ್ವಾನಿಯ ಶೃಂಗಾರ ಜ್ವಾಲೆ ಸಿಡಿದಿದೆ. ಈ ಜ್ವಾಲೆಗೆ ಸಾಮಾಜಿಕ ಜಾಲತಾಣವೇ ಕೊಚ್ಚಿಕೊಂಡು ಹೋಗುತ್ತಿದೆ. ಇಬ್ಬರ ಸಿಡಿಲಬ್ಬರದ ರೊಮ್ಯಾನ್ಸ್ ನೋಡಿ ಇಡೀ ಸಿನಿ ಜಗತ್ತು ದಂಗಾಗಿದೆ.. 'ಟಾಕ್ಸಿಕ್'ನಲ್ಲಿ ಯಶ್ ಇನ್ನೇನೇನು ಮಾಡಿದ್ದಾರೋ ಅನ್ನೋ ಕಲುತೂಹಲ ಬೆಟ್ಟವಾಗಿದೆ.
36
ರಾಧಿಕಾ ಪಂಡಿತ್ ಟೂರ್
ಇದರ ಬೆನ್ನಲ್ಲೇ ರಾಧಿಕಾ ಪಂಡಿತ್ (Radhika Pandit) ಅವರು ಅಣ್ಣ ಮತ್ತು ಅತ್ತಿಗೆಯ ಜೊತೆಯಲ್ಲಿ ಸಂಗೀತವನ್ನು ಸವಿದಿದ್ದು, ಅದರ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ವಿಶ್ವವಿಖ್ಯಾತ ಪಾಪ್ ಗಾಯಕ ಎಡ್ ಶೀರೆನ್ ಅವರ ಲೈವ್ ಮ್ಯೂಸಿಕ್ ಕಾನ್ಸರ್ಟ್‌ಗೆ ನಟಿ ರಾಧಿಕಾ ಅಣ್ಣನ ಫ್ಯಾಮಿಲಿ ಜೊತೆ ಹೋಗಿದ್ದಾರೆ. ಅಲ್ಲಿ ಎಂಜಾಯ್ ಮಾಡ್ತಿರೋ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
56
ಅಣ್ಣ-ಅತ್ತಿಗೆ ಜೊತೆ ಕಾರ್ಯಕ್ರಮ
ರಾಧಿಕಾ ಪಂಡಿತ್ ಅವರು ತಮ್ಮ ಅಣ್ಣ ಗೌರಂಗ್ ಪಂಡಿತ್ ಹಾಗೂ ಅತ್ತಿಗೆ ಸಹನಾ ಪಂಡಿತ್ ಅವರೊಂದಿಗೆ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಡ್ ಶೀರೆನ್ ಅವರ ಸೂಪರ್ ಹಿಟ್ ಹಾಡುಗಳಿಗೆ ಈ ಮೂವರೂ ಒಟ್ಟಿಗೆ ಸಖತ್ ಆಗಿ ಸ್ಪೆಟ್ ಹಾಕಿದ್ದಾರೆ. ಹಾಡುತ್ತಾ, ಕುಣಿಯುತ್ತಾ ಲೈವ್ ಕಾನ್ಸರ್ಟ್‌ನ ಎಂಜಾಯ್ ಮಾಡಿದ್ದಾರೆ.
66
ನಟಿ ಭರ್ಜರಿ ಸ್ಟೆಪ್ಸ್
ಈ ವೇಳೆ, ರಾಧಿಕಾ ಅವರು ಅಣ್ಣ ಗೌರಂಗ್ ಹಾಗೂ ಅತ್ತಿಗೆ ಸಹನಾ ಜೊತೆ ರಾಧಿಕಾ ಪಂಡಿತ್ ಸಖತ್ ಸ್ಟೆಪ್ಸ್ ಹಾಕಿದ್ದು ಅದರ ವಿಡಿಯೋ ಕೂಡ ವೈರಲ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.