ನಟಿ ಡೈಸಿ ಶಾ, ಕನ್ನಡ ಸಿನಿಮಾದಲ್ಲಿ ನಟಿಯರ ಸ್ತನಗಳಿಗಿಂತ ಹೊಕ್ಕುಳಿನ ಮೇಲೆ ಹೆಚ್ಚು ಗೀಳಿರುವುದಾಗಿ ಹೇಳಿದ್ದಾರೆ. ಶೂಟಿಂಗ್ ಇಲ್ಲದ ದಿನ ಟಿವಿಯಲ್ಲಿ ನಾಯಕಿಯರ ಹೊಕ್ಕುಳಿನ ಮೇಲೆ ಫ್ರೂಟ್ ಸಲಾಡ್, ಐಸ್ ಕ್ಯೂಬ್ ಇಟ್ಟು ಚಿತ್ರೀಕರಿಸಿದ ಹಾಡುಗಳನ್ನು ನೋಡಿ ತಮಗಾದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಕನ್ನಡದ 'ಭದ್ರ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಬಾಲಿವುಡ್ ಬೆಡಗಿ ಡೈಸಿ ಶಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿಯರನ್ನು ಬಿಂಬಿಸುವ ವಿಧಾನದ ಬಗ್ಗೆ ಆಘಾತಕಾರಿ ವಿಚಾರ ಬಹಿರಂಗಪಡಿಸಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗಕ್ಕೆ ಸ್ತನಗಳಿಗಿಂತ ನಟಿಯರ ಹೊಕ್ಕುಳ (Navel) ಮೇಲೆಯೇ ಹೆಚ್ಚಿನ ಗೀಳು ಎಂದು ಹೇಳುವ ಮೂಲಕ ಅವರು ಸೌತ್ ಸಿನಿಮಾ ರಂಗದ ಹಿಟ್ ಸೂತ್ರವನ್ನು ಲೇವಡಿ ಮಾಡಿದ್ದಾರೆ.
25
ರೂಮ್‌ನಲ್ಲಿ ಟಿವಿ ಆನ್ ಮಾಡಿದಾಗ ಕಾದಿತ್ತು ಶಾಕ್!
ತಮ್ಮ ಕನ್ನಡ ಸಿನಿಮಾದ ಚಿತ್ರೀಕರಣದ ದಿನಗಳನ್ನು ನೆನಪಿಸಿಕೊಂಡ ಡೈಸಿ ಶಾ, ಶೂಟಿಂಗ್ ಇಲ್ಲದ ರಜಾ ದಿನದಂದು ರೂಮ್‌ನಲ್ಲಿ ಕುಳಿತು ಟಿವಿ ಚಾನೆಲ್ ಹಾಕಿದಾಗ ತಮಗಾದ ತಮಾಷೆಯ ಅನುಭವವನ್ನು ಹಂಚಿಕೊಂಡಿದ್ದಾರೆ.ನನಗೆ ಸ್ತನಗಳ ಪ್ರದರ್ಶನದ ಬಗ್ಗೆ ಅಷ್ಟಾಗಿ ಐಡಿಯಾ ಇಲ್ಲ. ಆದರೆ ದಕ್ಷಿಣದ ಸಿನಿಮಾಗಳಲ್ಲಿ ಹೊಕ್ಕುಳಿನ ಗೀಳಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕನ್ನಡ ಸಿನಿಮಾ ಮಾಡುತ್ತಿದ್ದಾಗ, ಶೂಟಿಂಗ್ ಇಲ್ಲದ ದಿನ ರೂಮ್‌ನಲ್ಲಿ ಟಿವಿ ಆನ್ ಮಾಡಿದ್ದೆ. ಅಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳಲ್ಲಿ ಒಬ್ಬ ನಿರ್ದಿಷ್ಟ ನಟ ಕಾಣಿಸಿಕೊಂಡಿದ್ದ. ಆ ಹಾಡುಗಳಲ್ಲಿ ನಾಯಕಿಯರ ಹೊಕ್ಕುಳನ್ನು ತೋರಿಸುತ್ತಿದ್ದ ರೀತಿ ನೋಡಿ ನನಗೆ ನಗು ತಡೆಯಲಾಗಲಿಲ್ಲ ಎಂದು ಡೈಸಿ ಹೇಳಿದ್ದಾರೆ.
35
ಹೊಕ್ಕುಳ ಮೇಲೆ ಫ್ರೂಟ್ ಸಲಾಡ್, ವೆಜಿಟೇಬಲ್ ಸಲಾಡ್!
ಟಿವಿಯಲ್ಲಿ ತಾವು ನೋಡಿದ ದೃಶ್ಯಗಳನ್ನು ನೆನಪಿಸಿಕೊಂಡು ಸಂದರ್ಶನದಲ್ಲೇ ಜೋರಾಗಿ ನಕ್ಕ ಡೈಸಿ ಶಾ, ಹಾಡುಗಳಲ್ಲಿ ನಾಯಕಿಯರ ಹೊಕ್ಕುಳಿನ ಮೇಲೆ ಫ್ರೂಟ್ ಸಲಾಡ್, ವೆಜಿಟೇಬಲ್ ಸಲಾಡ್ ಮಾಡಲಾಗುತ್ತಿತ್ತು. ಇನ್ನು ಕೆಲವು ದೃಶ್ಯಗಳಲ್ಲಿ ಅದರ ಮೇಲೆ ಐಸ್ ಕ್ಯೂಬ್‌ಗಳನ್ನು ಇಡಲಾಗುತ್ತಿತ್ತು, ಇಲ್ಲವೇ ನೀರು ಬೀಳುವಂತೆ ಚಿತ್ರಿಸಲಾಗುತ್ತಿತ್ತು ಎಂದು ಆ ದೃಶ್ಯಗಳನ್ನು ಲೇವಡಿ ಮಾಡಿದ್ದಾರೆ.
ದಕ್ಷಿಣ ಭಾರತದ ಸಾಂಪ್ರದಾಯಿಕ ಕಮರ್ಷಿಯಲ್ ಸಿನಿಮಾಗಳ ಹಾಡುಗಳಲ್ಲಿ ನಾಯಕಿಯರ ಸೊಂಟ ಹಾಗೂ ಹೊಕ್ಕುಳನ್ನು ಹಣ್ಣುಗಳು, ಹೂವುಗಳು ಅಥವಾ ಐಸ್ ಬಳಸಿ ಹೈಲೈಟ್ ಮಾಡುವ ಹಳೆಯ ಸಿದ್ದಸೂತ್ರದ ಬಗ್ಗೆ ಡೈಸಿ ಶಾ ಮಾಡಿರುವ ಈ ಕಾಮೆಂಟ್ ಹಾಗೂ ಅವರ ತಡೆಯಲಾರದ ನಗುವಿನ ವಿಡಿಯೋ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.
55
ನಟನ ಹೆಸರು ಬಹಿರಂಗ ಮಾಡದ ನಟಿ
ಡೈಸಿ ಶಾ ಅವರು ಸಂದರ್ಶನದಲ್ಲಿ ಆ ನಿರ್ದಿಷ್ಟ ನಟನ ಹೆಸರನ್ನು ಬಹಿರಂಗಪಡಿಸದಿದ್ದರೂ, ಅವರ ಈ ಮುಕ್ತ ಮಾತುಗಳು ಸೌತ್ ಚಿತ್ರರಂಗದ ಇತಿಹಾಸದಲ್ಲಿದ್ದ ಗ್ಲಾಮರಸ್ ಹಾಡುಗಳ ಸೃಷ್ಟಿಯ ಹಿಂದಿನ ಕಲ್ಪನೆಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಡೈಸಿ ಶಾ ಕನ್ನಡದಲ್ಲಿ ಭದ್ರ, ಬಾಡಿಗಾರ್ಡ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.