ಉದ್ದ ಕೂದಲು, ಗಡ್ಡ ಬಿಟ್ಟ ನಟರು ರಾಕ್ಷಸರಂತೆ ಕಾಣುತ್ತಾರೆ: ಯಶ್ ಲುಕ್ ಬಗ್ಗೆ ಕಮೆಂಟ್

Published : Sep 14, 2026, 12:37 PM IST

ಬಾಲಿವುಡ್ ನಿರ್ಮಾಪಕ 'ಕೆಜಿಎಫ್' ಸಿನಿಮಾದಲ್ಲಿನ ಯಶ್ ಲುಕ್ ಬಗ್ಗೆ ಟೀಕಿಸಿದ್ದಾರೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟ ನಾಯಕರು ರಾಕ್ಷಸರಂತೆ ಕಾಣುತ್ತಾರೆ ಎಂದಿರುವ ಅವರು, ಇಂದಿನ ಮಾಸ್ ಸಿನಿಮಾಗಳಲ್ಲಿನ ಹಿಂಸೆಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

PREV
15
ಯಶ್ ಲುಕ್ ಬಗ್ಗೆ ಕಮೆಂಟ್

ಬಾಲಿವುಡ್ ಅಂಗಳದ ಖ್ಯಾತ ಮತ್ತು ಹಿರಿಯ ನಿರ್ಮಾಪಕರೊಬ್ಬರು, ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್' ಸಿನಿಮಾದ ಲುಕ್ ಬಗ್ಗೆ ಟೀಕಿಸಿದ್ದಾರೆ. ಉದ್ದವಾದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡ ನಾಯಕ ನಟರು ರಾಕ್ಷಸರಂತೆ ಕಾಣಿಸುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟಾಕ್ಸಿಕ್ ಸಿನಿಮಾದಲ್ಲಿಯೂ ಯಶ್, ಕೆಜಿಎಫ್ ಲುಕ್‌ನಲ್ಲಿಯೇ ಮಿಂಚಿದ್ದರು.

25
ನಿರ್ಮಾಪಕ ತಿಗ್ಮಾಂಶು ಧುಲಿಯಾ

ಕೆಲ ದಿನಗಳ ಹಿಂದೆಯಷ್ಟೇ ನಿರ್ಮಾಪಕ ತಿಗ್ಮಾಂಶು ಧುಲಿಯಾ ಅವರು ಕೊಶಲಾ ಲಿಟ್ರೇಚರ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾ ಹೇಗೆ ಬದಲಾಗುತ್ತಿದೆ ಎಂಬ ವಿಷಯವನ್ನು ಆಧರಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಇಂದಿನ ಮಾಸ್ ಹೆಸರಿನ ಸಿನಿಮಾಗಳು ಹೆಚ್ಚು ಹಿಂಸೆಯನ್ನು ತೋರಿಸುತ್ತಿವೆ ಎಂದು ಧುಲಿಯಾ ಬೇಸರ ವ್ಯಕ್ತಪಡಿಸಿದರು.

35
ಉದ್ದ ಕೂದಲು, ದಪ್ಪ ಗಡ್ಡ

ಇಂದಿನ ಸಿನಿಮಾಗಳಲ್ಲಿ ಹೀರೋಗಳು ಉದ್ದ ಕೂದಲು ಮತ್ತು ದಪ್ಪವಾಗಿ ಗಡ್ಡ ಬಿಟ್ಟುಕೊಳ್ಳುತ್ತಾರೆ. ತಲೆ ಮತ್ತು ಮುಖದ ಮೇಲಿನ ಹೆಚ್ಚು ಕೂದಲುಗಳಿಂದ ನಾಯಕರು ರಾಕ್ಷಸರಂತೆ ಕಾಣುತ್ತಾರೆ. ರಾಮಯಾಣ ಮತ್ತು ಮಹಾಭಾರತದಲ್ಲಿನ ರಾಕ್ಷಸರನ್ನು ಹೋಲುವಂತಹ ಪಾತ್ರಧಾರಿಗಳನ್ನು ಹೀರೋಗಳನ್ನಾಗಿ ಮಾಡಲಾಗುತ್ತಿದೆ. ಆದ್ರೆ ಈ ಲುಕ್ ಯುವ ಸಮುದಾಯದಲ್ಲಿ ಟ್ರೆಂಡ್ ಆಗುತ್ತಿರೋದ್ಯಾಕೆ ಎಂದು ಧುಲಿಯಾ ಪ್ರಶ್ನೆ ಮಾಡುತ್ತಾರೆ.

45
ಹಿಂಸೆ ಮತ್ತು ರಕ್ತಪಾತ

ಮುಂದುವರಿದು ಮಾತನಾಡಿರುವ ಧುಲಿಯಾ, ಇಂದಿನ ಸಿನಿಮಾಗಳು ಹಿಂಸೆಯನ್ನು ಪ್ರಚೋದಿಸುತ್ತಿವೆ. ಇತ್ತೀಚಿನ ಬಾಹುಬಲಿ, ಕೆಜಿಎಫ್, ಕಾಂತಾರದಂತಹ ಸಿನಿಮಾಗಳು ರಕ್ತಪಾತದ ಹೊಳೆಯನ್ನೇ ಹರಿಸಿವೆ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ಕಾರಣಕ್ಕೆ ಇಂತಹ ಸಿನಿಮಾಗಳು ನಿರ್ಮಾಣಗೊಳ್ಳುತ್ತಿರಬಹುದು. ಕೆಲ ಪ್ರೇಕ್ಷಕರಿಗೆ ಈ ಬಗ್ಗೆ ಕೋಪವಿರಬಹುದು. ಆದ್ರೆ ಕೋಪವನ್ನು ಹೇಗೆ ಅಥವಾ ಯಾವ ಮಾರ್ಗದಲ್ಲಿ ವ್ಯಕ್ತಪಡಿಸಬೇಕು ಅನ್ನೋದು ಗೊತ್ತಿರಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು.

55
ಇಂಥ ಸಿನಿಮಾಗಳೇ ಇಂದು ಸೂಪರ್ ಹಿಟ್

ವಿರೋಧ ವ್ಯಕ್ತಪಡಿಸುವಿಕೆ ಮಾರ್ಗ ತಿಳಿಯದ ಕಾರಣ ಇಂತಹ ಸಿನಿಮಾಗಳನ್ನು ಜನರು ನೋಡುತ್ತಿದ್ದಾರೆ. ಈ ಕಾರಣದಿಂದ ಸಾಲು ಸಾಲು ಆಕ್ಷನ್ ಆಂಡ್ ಮಾಸ್ ಸಿನಿಮಾಗಳು ಬರುತ್ತಿವೆ ಮತ್ತು ಜನಪ್ರಿಯತೆ ಪಡೆಯುತ್ತಿವೆ ಎಂದು ಧುಲಿಯಾ ಹೇಳುತ್ತಾರೆ. ಧುಲಿಯಾ 'ಘಮಸಾನ್' ಸಿನಿಮಾ ಸೆಪ್ಟೆಂಬರ್ 11 ರಂದು Z5 OTT ಪ್ಲಾಟ್‌ಫಾರಂನಲ್ಲಿ ಬಿಡುಗಡೆಯಾಗಿದ್ದು, ಅರ್ಷದ್ ವಾರ್ಸಿ ಮತ್ತು ಪ್ರತೀಕ್ ಗಾಂಧಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories