ಬಿಗ್‌ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳ ನಡುವಿನ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಕಿರಣ್ ಶಾಸ್ತ್ರಿ ಆಡಿದ 'ಡೋಲು-ಮೋಲು' ಎಂಬ ಮಾತಿನಿಂದ ಶುರುವಾದ ಜಗಳ, ಗಗನ್ ಮತ್ತು ಧನುಷ್ ನಡುವೆ ವೃತ್ತಿ ನಿಂದನೆಯ ಹಂತಕ್ಕೆ ತಲುಪಿದೆ.
ಎಲ್ಲಾ ಸದಸ್ಯರು ಬಿಗ್‌ಬಾಸ್ ಮನೆಯೊಳಗೆ ಸೇರಿದ್ದು, ಮತ್ತೆ ಕಾಮನ್ ಮ್ಯಾನ್ ವರ್ಸಸ್ ಸೆಲಿಬ್ರಿಟಿ ನಡುವಿನ ಕಲಹ ಮುಂದುವರಿದಂತೆ ಕಾಣಿಸುತ್ತಿದೆ. ಕಾಮನ್ ಮ್ಯಾನ್ ಕೆಟೆಗರಿಯಲ್ಲಿರೋ ಕಿರಣ್ ಶಾಸ್ತ್ರಿ ಮತ್ತು ಧನುಷ್ ಒಂದಾಗಿ ಗಗನ್ ಅವರನ್ನು ಟಾರ್ಗೆಟ್ ಮಾಡಿದ್ರಾ ಅಥವಾ ತಮಾಷೆಯಾಗಿ ಹೇಳಿದ್ದನ್ನು ಗಗನ್ ಸೀರಿಯಸ್ ಆಗಿ ತೆಗೆದುಕೊಂಡ್ರಾ ಎಂಬುದರ ಬಗ್ಗೆ ಗೊತ್ತಿಲ್ಲ.
25
ಯಾರು ಡೋಲು-ಮೋಲು?
ತಾಂಡವ್ ಮತ್ತು ಗಗನ್ ಬಾಲ್ಕನಿಯಿಂದ ಕೆಳಗೆ ಇಳಿದು ಬರುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಇದ್ದ ಕಿರಣ್ ಶಾಸ್ತ್ರಿ, ಇಬ್ಬರು ಜೊತೆಯಾಗಿ ಡೋಲು-ಮೋಲು ರೀತಿ ಮೇಲೆ ಹೋಗ್ತಿರಾ? ಮತ್ತೆ ಕೆಳಗೆ ಬರ್ತೀರಾ ಎಂದು ಪ್ರಶ್ನೆ ಮಾಡ್ತಾರೆ. ಡೋಲು-ಮೋಲು ಅಂತ ಹೇಳಿದ್ದಕ್ಕೆ ಕೋಪಗೊಂಡ ಗಗನ್, ಆ ಪದ ಹಿಂದೆ ತೆಗೆದುಕೊಳ್ಳುವಂತೆ ಕಿರಣ್ ಶಾಸ್ತ್ರಿ ಅವರಿಗೆ ಹೇಳುತ್ತಾರೆ.
35
ಇಬ್ಬರ ಜಗಳಕ್ಕೆ ಧನುಷ್ ಎಂಟ್ರಿ?
ಇವರಿಬ್ಬರ ಮಾತಿನ ನಡುವೆ ಎಂಟ್ರಿ ಕೊಟ್ಟ ಧನುಷ್, ಯಾವಾಗ್ಲೂ ಇಬ್ಬರು ಜೊತೆಯಲ್ಲಿರುತ್ತೀರಿ ಅಲ್ಲವಾ? ಅದಕ್ಕೆ ಡೋಲು-ಮೋಲು ಅಂತ ಹೇಳಿರಬೇಕು ಎಂದು ಹೇಳುತ್ತಾರೆ. ಕಿರಣ್ ಶಾಸ್ತ್ರಿ ಜೊತೆಗಿನ ಗಗನ್ ಜಗಳ, ಧನುಷ್ ಜೊತೆಯಲ್ಲಿ ಮುಂದುವರಿಯುತ್ತದೆ. ನಂತರ ಇದು ಇಬ್ಬರ ವೃತ್ತಿಯನ್ನು ಹೀಯಾಳಿಸುವ ಹಂತಕ್ಕೆ ತಲುಪುತ್ತದೆ.
ನನ್ನೊಂದಿಗೆ ಸಲುಗೆಯಿಂದ ಮಾತನಾಡಲು ಹೋಗಬೇಡಾ ಎಂದು ಧನುಷ್‌ಗೆ ಗಗನ್ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಸಿಡಿಗುಂಡಾದ ಧನುಷ್, ನೀವು ನಮ್ಮ ಬಗ್ಗೆ ಮಾತಾಡ್ತೀರಾ? ನಾವು ಮಾತಾಡಿದ್ರೆ ತಪ್ಪಾ ಎಂದು ಮರುಪ್ರಶ್ನೆ ಮಾಡ್ತಾರೆ. ಮತ್ತೆ ಮಾತು ಮುಂದುವರಿಸಿದ ಗಗನ್, ಕಿತ್ತೊಗಿರೋ ಸೈಕಲ್ ಹೊಡ್ಕೊಂಡು ಬಂದಿದ್ದೀಯಾ ಅಂತ ಹೇಳಿದ್ರೆ ನಿನಗೆ ಇಷ್ಟವಾಗುತ್ತಾ ಅಂತಾ ಹೇಳಿದ್ದಾರೆ.
55
ಎಲ್ಲಿಗೆ ಹೋಯ್ತು ಇಬ್ಬರ ಜಗಳ?
ಗಗನ್ ಮಾತಿಗೆ ಪ್ರತ್ಯುತ್ತರ ನೀಡಿದ ಧನುಷ್, ನಿನ್ನದು ಸಹ ಕಿತ್ತೋಗಿರೋ ಆಕ್ಟಿಂಗ್ ಎಂದು ಹೇಳಬಹುದಾ ಅಂತಾರೆ. ಸದ್ಯ ಪ್ರೋಮೋದಲ್ಲಿ ಇಷ್ಟು ಮಾತ್ರವನ್ನು ತೋರಿಸಲಾಗಿದೆ. ಮುಂದೆ ಇಬ್ಬರ ಜಗಳ ಎಲ್ಲಿಗೆ ಹೋಗಿ ನಿಂತಿದೆ? ಹಿರಿಯರಾದ ಓಂಪ್ರಕಾಶ್ ರಾವ್ ಎಂಟ್ರಿ ಕೊಡ್ತಾರಾ ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.