1 ಕೋಟಿ ಜೀವನಾಂಶ, ಕೊನೆಗೂ ಪತ್ನಿಯಿಂದ ಬೇರ್ಪಟ್ಟ ಹನಿ ಸಿಂಗ್

Published : Sep 09, 2022, 06:03 PM IST

ರಾಪರ್ ಯೋ ಯೋ ಹನಿ ಸಿಂಗ್ (Yo Yo Honey Singh) ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರ 11 ವರ್ಷಗಳ ದಾಂಪತ್ಯ ಕೊನೆಗೊಂಡಿದೆ. ಇಬ್ಬರ ನಡುವೆ ವಿಚ್ಛೇದನವನ್ನು ಅಂತಿಮಗೊಳಿಸಲಾಯಿತು. ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಹನಿ ಸಿಂಗ್ ತನ್ನ ಪತ್ನಿಗೆ ಜೀವನಾಂಶವಾಗಿ 1 ಕೋಟಿ ರೂ. ಚೆಕ್ ಅನ್ನು ಮೊಹರು ಮಾಡಿದ ಕವರ್‌ನಲ್ಲಿ ಹಸ್ತಾಂತರಿಸಿದರು ಮತ್ತು ಅವರ ಹಾದಿಗಳು ಶಾಶ್ವತವಾಗಿ ಬೇರ್ಪಟ್ಟವು.  

PREV
18
 1 ಕೋಟಿ ಜೀವನಾಂಶ, ಕೊನೆಗೂ ಪತ್ನಿಯಿಂದ ಬೇರ್ಪಟ್ಟ ಹನಿ ಸಿಂಗ್

ಶಾಲಿನಿ ತನ್ನ ಪತಿಯಿಂದ ವಿಚ್ಛೇದನಕ್ಕಾಗಿ (Divorce) ಸುಮಾರು 10 ಕೋಟಿ ರೂಪಾಯಿ ಜೀವನಾಂಶವನ್ನು ಬೇಡಿಕೆ ಇಟ್ಟಿದ್ದರು, ಆದರೆ ಅವರು ಕೇವಲ 1 ಕೋಟಿಗೆ ತೃಪ್ತಿ ಪಡಬೇಕಾಯಿತು.

28

ಕಳೆದ ವರ್ಷ ಹನಿ ಸಿಂಗ್ ಅವರ ಪತ್ನಿ ಶಾಲಿನಿ ದೆಹಲಿಯ (Delhi) ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು  ಪತಿ ಕೌಟುಂಬಿಕ ದೌರ್ಜನ್ಯ (Domestic Violence) ಮತ್ತು ಇತರ ಮಹಿಳೆಯರೊಂದಿಗೆ ದೈಹಿಕ ಸಂಬಂಧ (Physical Relationship) ಸೇರಿ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು ಶಾಲಿನಿ. 

38

ಕಳೆದ ವರ್ಷ ಆಗಸ್ಟ್‌ನಲ್ಲಿ ಶಾಲಿನಿ ತಲ್ವಾರ್ ಅವರು ತಮ್ಮ ಪತಿ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಪತಿ ಹಾಗೂ ಮಾವ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. 

48

ಮಾಧ್ಯಮ ವರದಿಗಳ ಪ್ರಕಾರ, ಒಂದು ದಿನ ತಾನು ಕೋಣೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ತನ್ನ ಮಾವ ಸರಬ್ಜಿತ್ ಸಿಂಗ್ ಕುಡಿದು ಕೋಣೆಗೆ ಪ್ರವೇಶಿಸಿದ್ದಾಗಿ ಅವರು ಹೇಳಿದ್ದರು. ತನ್ನ ಮಾವ ತನ್ನನ್ನು ತಪ್ಪಾದ ಜಾಗದಲ್ಲಿ ಮುಟ್ಟಲು ಯತ್ನಿಸಿದ್ದಾರೆ ಎಂದೂ ಆಕೆ ಆರೋಪಿಸಿದ್ದಳು. 

58

ಮದುವೆಯ ನಂತರ ಹನಿ ಸಿಂಗ್ ತನಗೆ ಹಲವು ಬಾರಿ ಥಳಿಸುತ್ತಿದ್ದು, ನಿಂದಿಸುತ್ತಿದ್ದ ಎಂದು ಶಾಲಿನಿ ತನ್ನ ಪತಿ ವಿರುದ್ಧ ಆರೋಪ ಮಾಡಿದ್ದರು ಮತ್ತು ಮದುವೆಯ ನಂತರ ಹಲವು ಮಹಿಳೆಯರೊಂದಿಗೆ ಏಳು ಅಕ್ರಮ ಸಂಬಂಧ ಹೊಂದಿದ್ದಾಗಿಯೂ  ಹನಿ ಸಿಂಗ್‌ ವಿರುದ್ಧ  ಶಾಲಿನಿ, ಹೇಳಿದ್ದರು. 
 

68

ಕಳೆದ ವರ್ಷ ಅಂದರೆ 2021 ರಲ್ಲಿ ಶಾಲಿನಿ ಅವರು ತಮ್ಮ ವಕೀಲರ ಮೂಲಕ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಇದರೊಂದಿಗೆ ಪತಿಯಿಂದ 10 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.


 

78

ಮದುವೆಗೆ ಮುಂಚೆ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಸುಮಾರು 20 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು  ಶಾಲೆಯಲ್ಲಿ ಓದುತ್ತಿದ್ದಾಗ ಇಬ್ಬರೂ ಭೇಟಿಯಾದರು. ಇಲ್ಲಿಂದ ಇಬ್ಬರ ನಡುವೆ ಸ್ನೇಹ ಶುರುವಾಗಿ ನಂತರ ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು.

88

 23 ಜನವರಿ 2011 ರಂದು ಪಂಜಾಬಿ ಪದ್ಧತಿಗಳ ಪ್ರಕಾರ ಗುರುದ್ವಾರದಲ್ಲಿ ದಂಪತಿ ವಿವಾಹವಾದರು. ಆದರೆ, ಹನಿ ಸಿಂಗ್ ತನ್ನ ಮದುವೆಯನ್ನು ಸುಮಾರು 4 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು.

Read more Photos on
click me!

Recommended Stories