ಬಿಪಾಶಾ ಬಸು Baby Shower: ಪ್ರೆಗ್ನೆಂಸಿ ಗ್ಲೋನಿಂದ ಹೊಳೆಯುತ್ತಿರುವ ನಟಿ

Published : Sep 09, 2022, 05:48 PM IST

43 ವರ್ಷದ ಬಾಲಿವುಡ್‌ ನಟಿ ಬಿಪಾಶಾ ಬಸು  (Bipasha Basu) ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಿನಗಳಲ್ಲಿ ಬಿಪಾಶಾ ಅವರು ತಮ್ಮ ಪ್ರೆಗ್ನೆಂಸಿ ಸಮಯವನ್ನು ಆನಂದಿಸುತ್ತಿದ್ದಾರೆ. ಕೆಲವು ಗಂಟೆಗಳ ಹಿಂದೆ, ಅವರ ಮನೆಯಲ್ಲಿ ಬೇಬಿ ಶವರ್ ಸಮಾರಂಭವನ್ನು ಆಯೋಜಿಸಲಾಗಿತ್ತು, ಅದರ ಫೋಟೋಗಳನ್ನು ಬಿಪಾಶಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.   

PREV
18
ಬಿಪಾಶಾ ಬಸು Baby Shower: ಪ್ರೆಗ್ನೆಂಸಿ ಗ್ಲೋನಿಂದ ಹೊಳೆಯುತ್ತಿರುವ ನಟಿ

ಇದೀಗ ಸೋಷಿಯಲ್ಲಿ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ಬಿಪಾಶಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಕಡು ಗುಲಾಬಿ ಬಣ್ಣದ (Dark Pink) ಬನಾರಸಿ ಸೀರೆ (Banarasi Saree) ಉಟ್ಟಿದ್ದಾರೆ. ಸಿಂಧೂರ, ಹಣೆ ಮೇಲೆ ಬಿಂದಿ, ಹಾರ ಮತ್ತು ಕೈಯಲ್ಲಿ ಪೂರ್ಣ ಬಳೆ ಧರಿಸಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ

28

 ಬಿಪಾಶಾ ಬಸು ತಾವು ತಾಯಿಯಾಗಲಿರುವ ವಿಷಯವನ್ನು ಘೋಷಿಸಿದಾಗಿನಿಂದ, ನಿರಂತರವಾಗಿ  ಬೇಬಿ ಬಂಪ್ (Baby Bump) ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಈ ನಡುವೆ ಅವರು ಶೇರ್ ಮಾಡಿದ ಕೆಲವು ಫೋಟೋಗಳಿಂದಾಗಿ ಟ್ರೋಲ್‌ಗೂ (Troll) ಒಳಗಾಗಿದ್ದರು.

38

ಬಿಪಾಶಾ ಬಸು ಅವರ ಬೇಬಿ ಶವರ್ ಸಮಾರಂಭವನ್ನು ಬಂಗಾಳಿ (Bengali) ಪದ್ಧತಿಗಳ ಪ್ರಕಾರ ಆಯೋಜಿಸಲಾಗಿತ್ತು. ಬಿಪಾಶಾ ಸಂಬಂಧಿಕರೆಲ್ಲರೂ ಸರದಿಯ ಪ್ರಕಾರ ಸೀಮಂತದ ಶಾಸ್ತ್ರವನ್ನು ಮಾಡಿದರು.

48

ಈ ಸಮಯದಲ್ಲಿ, ಬಿಪಾಶಾ ತುಂಬಾ ಉತ್ಸುಕರಾಗಿ ಕಾಣುತ್ತಿದ್ದರು ಮತ್ತು ಈ ಸೆಲೆಬ್ರೆಷನ್‌ನ ಕೆಲವು ಫೋಟೋಗಳನ್ನು  ಬಿಪಾಶಾ ಬಸು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಸಹೋದರಿ ಮತ್ತು ತಾಯಿಯೊಂದಿಗೆ ಪೋಸ್ ನೀಡುತ್ತಿದ್ದಾರೆ.

58

ಹೊರಬಿದ್ದ ಫೋಟೋಗಳಲ್ಲಿ, ಬಿಪಾಶಾರ ತಾಯಿ, ಸಹೋದರಿಯರು ಮತ್ತು ಸಂಬಂಧಿಕರು ಬೇಬಿ ಶವರ್ ಸಮಾರಂಭವನ್ನು ನಡೆಸುತ್ತಿದ್ದಾರೆ ಮತ್ತು  ಅವರ ದೃಷ್ಟಿ ತೆಗೆಯುತ್ತಿದ್ದಾರೆ. 
 

68

ಬಿಪಾಶಾ ಬಸು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ತಾಯಿ ಮಮತಾ ಬಸು ಅವರೊಂದಿಗಿನ 2 ಫೋಟೋಗಳನ್ನು ಹಂಚಿಕೊಂಡಿದ್ದಾರೆ,ನಾನು ನಿಮ್ಮಂತೆ ತಾಯಿಯಾಗಲು ಪ್ರಯತ್ನಿಸುತ್ತೇನೆ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

78

ಬಿಪಾಶಾ ಬಸು ಅವರು ಪತಿ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ದಂಪತಿ ತುಂಬಾ ರೋಮ್ಯಾಂಟಿಕ್ ಮತ್ತು ಸಂತೋಷದಿಂದ ಕಾಣುತ್ತಾರೆ.

88

ಬಿಪಾಶಾ ಬಸು ದೀರ್ಘಕಾಲದಿಂದ  ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಅವರು ಬಹಳ ಹಿಂದೆಯೇ ನಟನಾ ಪ್ರಪಂಚದಿಂದ ದೂರ ಸರಿದಿದ್ದಾರೆ.

Read more Photos on
click me!

Recommended Stories