ದೇಶದಾದ್ಯಂತ ಗಣೇಶ ಮೆರವಣಿಗೆಯ ಸಂಭ್ರಮ ಮುಗಿಲು ಮುಟ್ಟಿದೆ. ಗಣೇಶ ಹಬ್ಬ ಕಳೆದರು ಗಣಪನ ಮೆರವಣೆಗೆ ಜೋರಾಗಿದೆ. ಗಣೇಶನ್ನು ಕೂರಿಸಿ 3 ದಿನ, ಐದು ದಿನ, 11 ದಿನ ಹೀಗೆ ತಮಗೆ ಇಷ್ಟದ ದಿನದ ವರೆಗೂ ಕೂರಿಸಿ ಮೆರವಣಿಗೆ ಮಾಡಿ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೆ ಸಿನಿಮಾ ಸೆಲೆಬ್ರಿಟಿಗಳ ಮನೆಯಲ್ಲೂ ಸಹ ಗಣೇಶ ಸಂಭ್ರಮ ಜೋರಾಗಿತ್ತು.
ಗಣೇಶ ಹಬ್ಬವನ್ನು ಜಾತಿ, ಧರ್ಮಗಳ ಭೇದವಿಲ್ಲದೆ ಆಚರಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ಬಾಲಿವುಡ್ ಖಾನ್ ಗಳು ಸಹ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ ಮಾಡಿರುವ ವಿಡಿಯೋಗಳು ವೈರಲ್ ಆಗಿತ್ತು.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಕರೀನಾ ಕಪೂರ್ ಮನೆಯಲ್ಲಿ ಗಣೇಶ ಇಟ್ಟಿರುವ ಫೋಟೋ ವೈರಲ್ ಆಗಿವೆ. ಹೂಗಳಿಂದ ಅಲಂಕಾರ ಮಾಡಿರುವ ಗಣೇಶನ ಪಕ್ಕದಲ್ಲಿ ಕರೀನಾ ಕಪೂರ್ ಕುಳಿತಿರುವ ಫೋಟೋ ಹಂಟಿಕೊಂಡಿದ್ದಾರೆ. ಕರೀನಾ ಜೊತೆ ಜೇಯ್ ಕೂಡ ಗಣೇಶನ ಪಕ್ಕದಲ್ಲಿ ಕುಳಿತಿದ್ದಾನೆ.
ಕರೀನಾ ಪಕ್ಕದಲ್ಲಿ ಕುಳಿತಿರುವ ಪುತ್ರ ಜೇಯ್ ಗಣೇಶನ ಪಕ್ಕದಲ್ಲಿ ಇಟ್ಟಿರುವ ಮೋದಕದ ಮೇಲೆಯೆ ಇದೆ. ಮೋದಕ ತಿನ್ನುತ್ತಾ ಕುಳಿತಿರುವ ಜೇಯ್ ಕ್ಯೂಟ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕರೀನಾ ಕಪೂರ್, ಖಾನ್ ಕುಟುಂಬದ ಸೊಸೆಯಾದರೂ ಸಹ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ.
ಇಂದು (ಸೆಪ್ಟಂಬರ್ 9) ಮುಂಬೈನಲ್ಲಿ ಗಣೇಶನ ಮೆರವಣಿಗೆ ಅದ್ದೂರಿಯಾಗಿದೆ. ಮುಂಬೈನಲ್ಲಿ ಮಹಾಗಣಪತಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ರಾಜಾ ಗಣಪತಿಯನ್ನು ಅದ್ದೂರಿಯಾಗಿ ವಿಸರ್ಜನೆ ಮಾಡಲಾಗುತ್ತದೆ. ಅನೇಕ ಸೆಲೆಬ್ರಿಟಿಗಳು ಮುಂಬೈ ಗಣಪತಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಕರೀನಾ ಕಪೂರ್ ಸದ್ಯ ಇಬ್ಬರು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಕರೀನಾ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮತ್ತೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೊಂಚ ದಪ್ಪ ಆಗಿರುವ ಕರೀನಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಕರೀನಾ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.