ಆರ್ಯನ್ ಜೊತೆ ಆರೆಸ್ಟ್‌ ಆಗಿರುವ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಯಾರು ಗೊತ್ತಾ?

First Published Oct 6, 2021, 6:04 PM IST

ಡ್ರಗ್ಸ್ ಪ್ರಕರಣದಲ್ಲಿ (Drug case) ಬಂಧಿತ ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್‌ಗೆ (Aryan Khan) ನ್ಯಾಯಾಲಯ ಇನ್ನೂ ಜಾಮೀನು ನೀಡಿಲ್ಲ. ಆರ್ಯನ್ ಅವರನ್ನು ಈಗ ಅಕ್ಟೋಬರ್ 7 ರವರೆಗೆ NCB ಕಸ್ಟಡಿಗೆ ನೀಡಲಾಗಿದೆ. ಆರ್ಯನ್ ಜೊತೆಗೆ ಮುನ್ ಮುನ್ ಧಮೇಚಾ  (Munmun Dhamecha) ಮತ್ತು ಅರ್ಬಾಜ್ ಮರ್ಚೆಂಟ್ (Arbaaz Merchant) ಸೇರಿ 8 ಜನರನ್ನು ವಶಕ್ಕೆ ಪಡೆಯಲಾಗಿದೆ. ರೇವ್ ಪಾರ್ಟಿ ನಡೆಯುತ್ತಿದ್ದ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಬೆಂಗಳೂರಿನ ನಂಟೂ ಇರುವಂತೆ ಕಾಣಿಸುತ್ತಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ. ಅಂದಹಾಗೆ,ಯಾರಿದು ಆರ್ಯನ್‌ ಜೊತೆ ಸಿಕ್ಹಾಕಿಕೊಂಡವರು?

ಫ್ಯಾಷನ್ ಮಾಡೆಲ್ ಮುನ್ಮುನ್ ಧಮೇಚಾ ಮೂಲತಃ ಮಧ್ಯಪ್ರದೇಶದ (Madhya Pradesh) ಸಾಗರದವಳು. ಶಾಲಾ ಶಿಕ್ಷಣವನ್ನು ಅಲ್ಲೇ ಮುಗಿಸಿದ ನಂತರ ಮುನ್ಮುನ್‌ ಉನ್ನತ ಶಿಕ್ಷಣಕ್ಕಾಗಿ (Higher Education) ಭೋಪಾಲ್‌ಗೆ ಸ್ಥಳಾಂತರಗೊಂಡಳು. ಅವಳ ಸಹೋದರ ರಾಜಕುಮಾರ ಧಮೆಚಾ ದೆಹಲಿಯಲ್ಲಿ ವಾಸಿಸುತ್ತಾನೆ.

ಮುನ್ಮುನ್ ಅವರ ತಾಯಿ ಕಳೆದ ವರ್ಷ ನಿಧನರಾದರು.  ಅನೇಕ ವರ್ಷಗಳ ಹಿಂದೆ ತಂದೆ ಅಮಿತ್ ಕುಮಾರ್ ಧಮೇಚಾ ಅವರೂ ನಿಧನರಾಗಿದ್ದರು ಮತ್ತು ಮುನ್ಮುನ್ ತನ್ನ ಸಹೋದರನೊಂದಿಗೆ ವಾಸಿಸುತ್ತಾಳೆ.

ಫ್ಯಾಶನ್ (Fashion) ಮಾಡೆಲ್ ಆಗಿರುವ ಮುನ್ಮುನ್ ಧಮೇಚಾ ಅನೇಕ ಫ್ಯಾಶನ್ ಶೋಗಳಲ್ಲಿ ರಾಂಪ್ ವಾಕ್ (Ramp Walk) ಮಾಡಿದ್ದಾರೆ. ತುಂಬಾ ಸುಂದರವಾಗಿರುವ ಮುನ್ಮನ್‌ ಸ್ಟೈಲ್‌ ವಿಷಯದಲ್ಲಿ ಟಾಪ್‌ ನಾಯಕಿಯರನ್ನು ಸಹ ಸೋಲಿಸುತ್ತಾಳೆ.

ಮುನ್ಮುನ್ ಧಮೇಚಾ ಪಾರ್ಟಿಗಳೆಂದರೆ (Parites) ತುಂಬಾ ಇಷ್ಟ. ಗುರು ರಾಂಧವ, ಸುಯ್ಯಾಶ್ ರೈ ಮತ್ತು ಅರ್ಜುನ್ ರಾಂಪಾಲ್, ವರುಣ್ ಧವನ್, ನಿಖಿಲ್ ಚಿನಪ್ಪ ಮುಂತಾದ ಖ್ಯಾತನಾಮರೊಂದಿಗೆ ಅವರು ಆಗಾಗ್ಗೆ ಕಾಣಿಸಿಕೊಂಡಿದ್ದಾಳೆ. 

ದೆಹಲಿಯ ಖಾಸಗಿ ಕಂಪನಿಯಲ್ಲಿ (Privated Company) ಕೆಲಸ ಮಾಡುವ  ಜೊತೆಗೆ ಮುನ್ಮುನ್ ಕೆಲವು ಜಾಹೀರಾತುಗಳಲ್ಲಿ (Advertisements) ಕೆಲಸ ಮಾಡಿದ್ದಾಳೆ ಎಂದು ವರದಿಗಳು ಹೇಳುತ್ತವೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಸಕ್ರಿಯವಾಗಿರುವ ಮುನ್ಮುನ್ ತನ್ನ ಹಲವು  ಫೋಟೋಗಳನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಹಂಚಿಕೊಂಡಿದ್ದಾರೆ.  

ಬಾಲಿವುಡ್‌ನಲ್ಲಿ (Bollywood)  ಧಮೇಚಾಗೆ ಹಲವು ಸ್ನೇಹಿತರಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಡೆಲಿಂಗ್ (Modelling) ಮತ್ತು ಆಡ್ಸ್‌ನಲ್ಲಿ ಕೆಲಸ ಮಾಡುವುದರ ಹೊರತಾಗಿ, ಮುನ್ಮುನ್ ಅನೇಕ ಮನಮೋಹಕ ಫೋಟೋಶೂಟ್‌ಗಳನ್ನು (Photoshoot) ಕೂಡ ಮಾಡಿದ್ದಾಳೆ. ಆಕೆ  ಹಲವು ಫೋಟೋಗಳನ್ನು ಅವರ ಇನ್‌ಸ್ಟಾಗ್ರಾಮ್‌ನಲ್ಲಿಯೂ ನೋಡಬಹುದು.

ಈ ಕೇಸ್‌ನಲ್ಲಿ ಆರೆಸ್ಟ್‌ ಆಗಿರುವ ಇನ್ನೊಬ್ಬ ಅರ್ಬಾಜ್ ಮರ್ಚೆಂಟ್. ಈತ  ವೃತ್ತಿಯಲ್ಲಿ ನಟ ಮತ್ತು ಆರ್ಯನ್ ಖಾನ್ ಕ್ಲೋಸ್‌ ಫ್ರೆಂಡ್‌. ಮರ್ಚೆಂಟ್‌ ಅನೇಕ ಬಾರಿ ಸುಹಾನಾ ಮತ್ತು ಆರ್ಯನ್ ಜೊತೆ ಪಾರ್ಟಿ ಮಾಡುತ್ತಿರುವುದನ್ನು ಗುರುತಿಸಲಾಗಿದೆ.  

ಕೆಲವು ಫೋಟೋಗಳಲ್ಲಿ, ಅವರು ಚಂಕಿ ಪಾಂಡೆಯವರ ಮಗಳು ಮತ್ತು ನಟಿ ಅನನ್ಯಾ ಪಾಂಡೆ (Ananya Panday)ಯೊಂದಿಗೆ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಅವನು ಹಲವು ವರ್ಷಗಳ ಹಿಂದೆ ಅಲಯಾ ಎಫ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದನೆಂಬ ವದಂತಿಗಳಿದ್ದವು. 

ಉಳಿದ ಬಂಧಿತರಾದ ಮೋಹಕ್ ಜಸ್ವಾಲ್, ನೂಪುರ್ ಸಾರಿಕಾ ಎಡಿಬಿ ಗೋಮಿತ್ ಚೋಪ್ರಾ ದೆಹಲಿಯ ನಿವಾಸಿಗಳು. ಮೊಹಕ್ ಮತ್ತು ನೂಪುರ್ ಇಬ್ಬರೂ ಫ್ಯಾಷನ್ ಡಿಸೈನರ್ ಆಗಿದ್ದರೆ, ಗೋಮಿತ್ ಕೇಶ ವಿನ್ಯಾಸಕಿ ಮತ್ತು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌.  

click me!