ಆರ್ಯನ್‌ ಡ್ರಗ್‌ ಕೇಸ್‌: ಯಾರಿದು NCB ಆಫೀಸರ್‌ ಸಮೀರ್ ವಾಂಖೆಡೆ?

First Published | Oct 6, 2021, 5:50 PM IST

ಬಾಲಿವುಡ್ (Bollywood) ಸೂಪರ್ ಸ್ಟಾರ್ ಶಾರುಖ್ ಖಾನ್ (Shahrukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು Drug case  ಸಂಬಂಧಿಸಿದಂತೆ ಆರೆಸ್ಟ್‌ ಆಗಿರುವ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತದೆ. ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB) ತಂಡವು ಮುಂಬೈನಿಂದ ಗೋವಾಕ್ಕೆ ಹೋಗುತ್ತಿದ್ದ ಕ್ರೂಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ (Rave Party) ಮೇಲೆ ದಾಳಿ ಮಾಡಿದ ನಂತರ ಆರ್ಯನ್ ಖಾನ್‌ನನ್ನು ಬಂಧಿಸಲಾಯಿತು. ಈ ದಾಳಿಗೆ ಎನ್‌ಸಿಬಿಯ ವಲಯ ನಿರ್ದೇಶಕ Sameer Wankhede ನೇತೃತ್ವ ವಹಿಸಿದ್ದರು. ಸಮೀರ್ ವಾಂಖೆಡೆ ಅವರು ಧೈರ್ಯ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಅವರನ್ನು ಎನ್‌ಸಿಬಿಯಲ್ಲಿ 'ಸಿಂಗಂ' ಎಂದು ಕರೆಯಲಾಗುತ್ತದೆ. ಸಮೀರ್ ವಾಂಖೇಡೆ ಹೈಪ್ರೋಫೈಲ್‌ ವ್ಯಕ್ತಿಯನ್ನು ಬಂಧಿಸುತ್ತಿರುವುದು ಇದೇ ಮೊದಲಲ್ಲ. ಅಷ್ಟಕ್ಕೂ ಯಾರು ಈ ಸಮೀರ್ ವಾಂಖೆಡೆ ಇಲ್ಲಿದೆ ಮಾಹಿತಿ.

ಹಡಗಿನಲ್ಲಿ ಪಾರ್ಟಿ ನಡೆಯುತ್ತಿದೆ ಎಂದು ದಾಳಿ ಮಾಡುವ ಮೊದಲು ಎನ್‌ಸಿಬಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗಿದೆ. NCB ಯ ಸುಮಾರು 22 ಅಧಿಕಾರಿಗಳು ಮತ್ತು ಉದ್ಯೋಗಿಗಳು ಹಡಗಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪಯಣಿಸುತ್ತಿದ್ದರು. ಹಡಗಿನ ಮೇಲೆ ದಾಳಿ ಮಾಡುವ ಮೊದಲು, ಹಿಡನ್‌ ಕ್ಯಾಮೆರಾ ಮೂಲಕ ಸ್ಟ್ರಿಂಗ್‌ ಅಪರೇಷನ್‌ ನಡೆಸಲಾಯಿತು, ನಂತರ ಅಗತ್ಯ ಸಾಕ್ಷ್ಯಗಳು ಸಿಕ್ಕಿದ ಮೇಲೆ ದಾಳಿ ನಡೆಸಲಾಯಿತು.

NCB ಮುಂಬೈನ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಯಾವುದೇ ಒತ್ತಡವಿಲ್ಲದೆ ತಮ್ಮ ಕೆಲಸ ಮಾಡುತ್ತಾರೆ. ಅವರ ಕೆಲಸದ ಶೈಲಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಅವರು ಕೆಲಸ ಮಾಡುವಾಗ ತಮ್ಮ ಕರ್ತವ್ಯದ ಕಡೆಗೆ ಮಾತ್ರ ಗಮನಹರಿಸುತ್ತಾರೆ.

Latest Videos


ಮುಂಬೈನಲ್ಲಿ ಜನಿಸಿದ ಸಮೀರ್ ವಾಂಖೆಡೆ  ಅವರ ತಂದೆ ಪೊಲೀಸ್ ಅಧಿಕಾರಿಯಾಗಿದ್ದರು. ವಾಂಖೆಡೆ 2008 ರ ಬ್ಯಾಚ್ ಭಾರತೀಯ ಕಂದಾಯ ಸೇವೆ (IRS) ಅಧಿಕಾರಿಯಾಗಿದ್ದಾರೆ. ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು NCB ಗಿಂತ ಮುಂಚೆ ಏರ್‌ ಇಂಟೆಲಿಜೆನ್ಸ್‌ ಯೂನಿಟ್‌ನಲ್ಲಿ (NIU) ಹೆಚ್ಚುವರಿ ಎಸ್‌ಪಿ ಹುದ್ದೆಯನ್ನೂ ನಿರ್ವಹಿಸಿದ್ದಾರೆ. 

ಭಾರತೀಯ ಕಂದಾಯ ಸೇವೆಗೆ ಸೇರಿದ ನಂತರ, ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪ ಕಸ್ಟಮ್ಸ್ ಉಪ ಆಯುಕ್ತರಾಗಿ ಅವರ ಮೊದಲ ಹುದ್ದೆ ವಹಿಸಿಕೊಂಡಿದ್ದರು. ಸಮೀರ್ ವಾಂಖೆಡೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಉಪ ಆಯುಕ್ತರನ್ನಾಗಿ ನೇಮಿಸಿದಾಗ, ಅವರು ತಮ್ಮ ಜ್ಯೂನಿಯರ್ಸ್‌ ಸೆಲೆಬ್ರಿಟಿಗಳ ಹಿಂದೆ ಓಡುವುದನ್ನು ನಿಲ್ಲಿಸಿದ್ದರು. 

ವಾಂಖೆಡೆ ಮರಾಠಿ ನಟಿ ಕ್ರಾಂತಿ ರೆಡ್ಕರ್ ಅವರನ್ನು 2017 ರಲ್ಲಿ ವಿವಾಹವಾದರು. ಸಮೀರ್ ವಾಂಖೆಡೆಗೆ ಬಾಲಿವುಡ್ ಚಲನಚಿತ್ರಗಳು ಮತ್ತು ಕ್ರಿಕೆಟ್ ಎಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಆದರೆ ಕರ್ತವ್ಯಕ್ಕೆ ಬಂದಾಗ,  ತನ್ನ ಚಲನಚಿತ್ರಗಳ ಪ್ರೀತಿಯನ್ನು ಬದಿಗಿಟ್ಟು ತನ್ನ ಕರ್ತವ್ಯವನ್ನು ಮಾತ್ರ ಮಾಡುತ್ತಾರೆ.

ಈ ಕಾರಣದಿಂದ ಸಮೀರ್ ಅನೇಕ ಉನ್ನತ ಮಟ್ಟದ ಪ್ರಕರಣಗಳನ್ನು ಯಾವುದೇ ಒತ್ತಡವಿಲ್ಲದೆ ಪೂರ್ಣಗೊಳಿಸಿದ್ದಾರೆ. ಉಪ ಕಸ್ಟಮ್ಸ್ ಆಯುಕ್ತರಾಗಿ ಸಹ, ಅವರು ಕಸ್ಟಮ್ಸ್ ಟ್ಯಾಕ್ಸ್‌ ಮತ್ತು ಫೈನ್‌ಗಳಿಂದ  ತಪ್ಪಿಸಿಕೊಳ್ಳುತ್ತಿರುವ ಅನೇಕ ಚಲನಚಿತ್ರ ತಾರೆಯರು ಮತ್ತು ಕ್ರಿಕೆಟಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರು.

sameer wankhede

ವಾಂಖೇಡೆ ಸೇವಾ ತೆರಿಗೆ ಇಲಾಖೆಯಲ್ಲಿರುವಾಗ, ಅವರು 2500 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು.  ಈ ಪಟ್ಟಿಯಲ್ಲಿ ತೆರಿಗೆ ಉಳಿಸಲು ಪ್ರಯತ್ನಿಸುತ್ತಿರುವ 200 ಸೆಲೆಬ್ರಿಟಿಗಳು ಸಹ  ಸೇರಿದ್ದಾರೆ. ಅವರು ಎರಡು ವರ್ಷಗಳಲ್ಲಿ 87 ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹಿಸಿದ್ದಾರೆ, ಇದು ಮುಂಬೈನ ದಾಖಲೆಯಾಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಡ್ರಗ್ ಪ್ರಕರಣವನ್ನು ಸಮೀರ್ ವಾಂಖೆಡೆ ಮುನ್ನಡೆಸಿದರು. ಈ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರು ರಿಯಾ ಚಕ್ರವರ್ತಿ ಮತ್ತು ಸುಶಾಂತ್‌ನ ಇತರ ಸ್ನೇಹಿತರನ್ನು ಕೂಡ ಪ್ರಶ್ನಿಸಿದ್ದಾರೆ. ಅವರು ಇಲ್ಲಿಯವರೆಗೆ ಅನೇಕ ದೊಡ್ಡ  ಸ್ಟಾರ್ಸ್‌ನ ವಿಚಾರಣೆ ನೆಡೆಸಿದ್ದಾರೆ. ಇವರಲ್ಲಿ ಅರ್ಜುನ್ ರಾಂಪಾಲ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಸೇರಿದ್ದಾರೆ. ಇದಲ್ಲದೆ ಅರ್ಮಾನ್ ಕೊಹ್ಲಿ, ಭಾರತಿ ಸಿಂಗ್, ಎಜಾಜ್ ಖಾನ್, ಟಿವಿ ಕಲಾವಿದ ಗೌರವ್ ದೀಕ್ಷಿತ್ ಅವರನ್ನೂ ಬಂಧಿಸಲಾಗಿದೆ.
  

ಏಪ್ರಿಲ್ 2011  ರಲ್ಲಿ  ಭಾರತೀಯ ಕ್ರಿಕೆಟ್ ತಂಡ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆದರೆ ಡ್ಯೂಟಿ ಪಾವತಿಸಿದ ನಂತರವಷ್ಟೇ ವಿಶ್ವಕಪ್ ಟ್ರೋಫಿಯನ್ನು ಮುಂಬೈ ವಿಮಾನ ನಿಲ್ದಾಣದಿಂದ ಸಮೀರ್ ವಾಂಖೆಡೆ  ಬಿಡುಗಡೆ ಮಾಡಿದರು. ಆ ಸಮಯದಲ್ಲಿ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಉಪ ಆಯುಕ್ತರನ್ನಾಗಿ ನೇಮಿಸಲಾಯಿತು.

click me!