ಶಾರುಖ್‌ ಮನೆಗೆ ಸಲ್ಮಾನ್‌: ನೆಟ್ಟಿಗರಿಂದ ಟ್ರೋಲ್‌!

First Published | Oct 6, 2021, 5:24 PM IST

ಡ್ರಗ್ಸ್ (Drugs) ಪಾರ್ಟಿಗೆ ಸಂಬಂಧಿಸಿದಂತೆ ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್ (Aryan Kahn) ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಭಾನುವಾರ ಬಂಧಿಸಿದೆ.  ಸೋಮವಾರ ಜಾಮೀನು ರಿಜೆಕ್ಟ್ ಆಗಿದ್ದು, ಆರ್ಯನ್ ಕಸ್ಟಡಿಯನ್ನು ಅಕ್ಟೋಬರ್‌ 7 ಗುರವಾರದವರೆಗೆ ವಿಸ್ತರಿಸಲಾಗೆದೆ. ಮತ್ತೊಂದೆಡೆ, ಭಾನುವಾರ ತಡರಾತ್ರಿ ಸಲ್ಮಾನ್ ಖಾನ್ (Salman Khan) ಮಗನ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಶಾರುಖ್ ಅವರನ್ನು ಭೇಟಿ ಮಾಡಲು ಆವರ ಮನೆಗೆ ತಲುಪಿದರು. ಈ ಸಮಯದ ಸಲ್ಮಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು ಮಾತ್ರವಲ್ಲ, ಜನರು ಸಲ್ಮಾನ್ ಮೇಲೆ ಅಸಭ್ಯವಾದ ಟೀಕೆಗಳನ್ನು ಮಾಡುತ್ತಿದ್ದಾರೆ, ಆತನನ್ನು ತೀವ್ರವಾಗಿ ಟ್ರೋಲ್‌ (Troll)  ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ಮನೆ ಮನ್ನತ್ ಹೊರಗಿನ ಸಲ್ಮಾನ್ ಖಾನ್ ಅವರ ಫೋಟೋಗಳು ಮತ್ತು ಅವರ ಬಗ್ಗೆ ಕಾಮೆಂಟ್‌ಗಳನ್ನು ಕೆಳಗೆ ನೋಡಿ.

ಫೋಟೋಗಳಲ್ಲಿ, ಸಲ್ಮಾನ್ ಖಾನ್  ಕಪ್ಪು ಟೋಪಿ ಹಾಕಿಕೊಂಡಿರುವುದು ಕಂಡುಬರುತ್ತದೆ ಹಾಗೂ  ಸಲ್ಮಾನ್‌ ಗಡ್ಡ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ವಿವಾದಾತ್ಮಕ ರಿಯಾಲಿಟಿ ಶೋ (Reality Show) ಬಿಗ್ ಬಾಸ್ (Bigg Boss) 15 ಆರಂಭಿಸಿದರು.
 

ಶಾರುಖ್ ಖಾನ್ (Sharukh Khan) ಮನೆಯ ಹೊರಗೆ ಸಲ್ಮಾನ್ ಖಾನ್ ಫೋಟೋಗಳು ವೈರಲ್ (Viral) ಆದ ತಕ್ಷಣ ಜನರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನಿಂದಿಸಲು ಆರಂಭಿಸಿದರು. 'ನಾನು ತುಂಬಾ ಅಪರಾಧಗಳನ್ನು ಮಾಡಿದ್ದೇನೆ, NCB ಅವರಿಗೆ ನನ್ನನ್ನು ಏನನ್ನೂ ಮಾಡಲು ಸಾಧ್ಯವಾಗಿಲ್ಲ, ನಿಮ್ಮ ಮಗನಿಗೆ ಏನೂ ಆಗಲು ಬಿಡುವುದಿಲ್ಲ, ಟೆನ್ಶನ್ ತೆಗೆದುಕೊಳ್ಳಬೇಡ ಎಂದು ಹೇಳಿರಬೇಕು,' ಎಂದು ಒಬ್ಬರು ಕಾಮೆಂಟ್ ಹೀಗೆ ಮಾಡಿದ್ದಾರೆ. 

Tap to resize

'ಅನುಭವ ಇರುವ ಜನರು ಹೊಸ ಜನರಿಗೆ ಸಹಾಯ ಮಾಡಲು ಬಂದಿದ್ದಾನೆ' ಎಂದು ಇನ್ನೊಬ್ಬರು ಮತ್ತು  'ಭಾಯಿ ಕ್ರಿಮಿನಲ್‌ ಆಗಿರುವುದರಿಂದ ತಪ್ಪನ್ನೇ ಸಪೋರ್ಟ್‌  ಮಾಡುತ್ತಾನೆ' ಎಂದು ಮತ್ತೊಬ್ಬರು ಹೇಳಿದರು. 'ಕರಣ್-ಅರ್ಜುನ್ ಒಟ್ಟಿಗೆ ಸೇರಿದ್ದಾರೆ, ಈಗ ಆರ್ಯನ್ ಮನೆಗೆ ಬರುತ್ತಾನೆ' ಎಂದು ಮತ್ತೊಬ್ಬರ ಕಾಮೆಂಟ್‌ ಕಂಡುಬರುತ್ತದೆ.  

'ರಾಂಗ್‌ ಪರ್ಸನ್‌ಸಂಜು ಬಾಬಾ ಅವರನ್ನು ಕರೆಯಬೇಕಿತ್ತು' ಎಂದು ಮತ್ತೊಂದು ಕಾಮೆಂಟ್‌ ಮಾಡಲಾಗಿದೆ 'ಭಾಯಿಯ ಹತ್ತಿರ ಹಳೆಯ ಅನುಭವವಿದೆ' 'ಎಕ್ಸ್‌ಪರ್ಟ್ ಬಂದಿದ್ದಾರೆ' 'ಈಗ ಆರ್ಯನ್‌ನನ್ನು  ಉಳಿಸುತ್ತಾನೆ' 'ಬಾಲಿವುಡ್ ಮಾಫಿಯಾ (Bollywood Mafia) ಮತ್ತೆ ಗ್ಯಾಂಗ್ ಅನ್ನು ರಚಿಸುತ್ತಿದೆ' ಹೀಗೆ  ಸೋಶಿಯಲ್‌ ಮೀಡಿಯಾ (Social Media) ಯೂಸರ್ಸ್‌ ಸಲ್ಮಾನ್‌ ಮೇಲೆ ತರತರದ  ಟೀಕೆ ಮಾಡಿದ್ದಾರೆ. 

'ಪ್ರಾಣಿ (Animal) ಮತ್ತು ಮನುಷ್ಯ (Human Being) ಇಬ್ಬರನ್ನೂ ಕೊಂದ ನಂತರವೂ ಬಿಡುಗಡೆಯಾಗಿದೆ, ಇದು ಕೇವಲ NCBಗೆ ಸೇರಿದ್ದು ನೀನು ಸರಿ ಮಾಡುತ್ತಿಯಾ ಬಿಡು' ಎಂದು  ಒಬ್ಬರು ಸಲ್ಮಾನ್‌ಗೆ ಅರೋಪಿಸಿದ್ದಾರೆ. 'ಬಾಯಿಗೆ  ಅನುಭವವಿದೆ, ಅವರು ಎಲ್ಲರಿಗೂ ಮಾರ್ಗದರ್ಶನ ಮಾಡಲು ಬಂದಿದ್ದಾರೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರ ಕಾರು ಶಾರುಖ್ ಖಾನ್ ಅವರ ಬಂಗಲೆ ಮನ್ನತ್ (Mannath) ಹೊರಗೆ ತಲುಪಿದ ತಕ್ಷಣ, ಅಲ್ಲಿ ನೆರೆದಿದ್ದ ಜನರು ಆತನ ಕಾರನ್ನು ಸುತ್ತುವರಿದರು. ಜನಸಂದಣಿಯನ್ನು ನಿಯಂತ್ರಿಸಲು ಸಿಬ್ಬಂದಿಗೆ ಕಷ್ಟವಾಗುತ್ತಿತ್ತು.

ಈ ಸಮಯದಲ್ಲಿ, ಸಲ್ಮಾನ್ ಖಾನ್ ಕೂಡ ಮಾಧ್ಯಮ ಛಾಯಾಗ್ರಾಹಕರ ಕ್ಯಾಮೆರಾದ ಫ್ಲಾಶ್ ಲೈಟ್‌ (Flash Light) ಅನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಅವರು ಸ್ವಲ್ಪ ಕೋಪಗೊಂಡಂತೆ ಕಾಣುತ್ತಿದ್ದರು.

ಸಲ್ಮಾನ್ ಖಾನ್  ತಮ್ಮ ಮುಂಬರುವ ಚಿತ್ರ ಟೈಗರ್ 3 (Tiger-3)ಚಿತ್ರೀಕರಣಕ್ಕಾಗಿ ರಷ್ಯಾ (Russia)ಕ್ಕೆ ತೆರಳಿದ್ದಾರೆ.  ಕೆಲವು ದಿನಗಳ ಹಿಂದೆ ಬಿಗ್ ಬಾಸ್ 15 ಪ್ರೀಮಿಯರ್ ಚಿತ್ರೀಕರಣಕ್ಕಾಗಿ ಅವರು 45 ದಿನಗಳ ಶೂಟಿಂಗ್‌  ಮುಗಿಸಿ ಮುಂಬೈಗೆ ಮರಳಿದ್ದರು.

Latest Videos

click me!