ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಮದುವೆಯ ದುಬಾರಿ ಗಿಫ್ಟ್‌ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು?

Published : Jan 27, 2023, 05:25 PM IST

ಇತ್ತೀಚೆಗಷ್ಟೇ ಸುನೀಲ್ ಶೆಟ್ಟಿ (Suneil Shetty)  ಪುತ್ರಿ ಅಥಿಯಾ ಶೆಟ್ಟಿ (Athiya Shetty)  ಕೆಎಲ್ ರಾಹುಲ್ (KL Rahul) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ನಂತರ ಈ ಜೋಡಿಗೆ ಸೆಲೆಬ್ರಿಟಿಗಳಿಂದ ಕೋಟಿಗಟ್ಟಲೆ ಗಿಫ್ಟ್ ಸಿಕ್ಕಿದೆ ಎಂಬ ಸುದ್ದಿ ಬಂದಿದೆ. ಆದರೆ, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಈಗ ಬಯಲಿಗೆ ಬಂದಿದೆ.   

PREV
18
ಆಥಿಯಾ ಶೆಟ್ಟಿ, ಕೆಎಲ್ ರಾಹುಲ್ ಮದುವೆಯ ದುಬಾರಿ ಗಿಫ್ಟ್‌ ಬಗ್ಗೆ ಸುನೀಲ್ ಶೆಟ್ಟಿ ಹೇಳಿದ್ದೇನು?

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ವಿವಾಹವಾಗಿದ್ದಾರೆ, ಅವರ ಫೋಟೋಗಳು ಇನ್ನೂ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಅಥಿಯಾ ಶೆಟ್ಟಿ ಮತ್ತು ರಾಹುಲ್ ಕೂಡ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

28

ವರದಿಗಳ ಪ್ರಕಾರ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ತಮ್ಮ ಮದುವೆಯಲ್ಲಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರಿಂದ ದುಬಾರಿ ಉಡುಗೊರೆಗಳನ್ನು ಪಡೆದರು.


 

38

ಮಾಧ್ಯಮ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅಥಿಯಾ-ರಾಹುಲ್‌ಗೆ 2.17 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಕೆಎಲ್ ರಾಹುಲ್ ಗೆ ಕವಾಸಕಿ ನಿಂಜಾ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.

48

ಸ್ವತಃ ಸುನಿಲ್ ಶೆಟ್ಟಿ ಅವರು ತಮ್ಮ ಮಗಳಿಗೆ ಮುಂಬೈನಲ್ಲಿ 50 ಕೋಟಿ ಬೆಲೆಯ ಫ್ಯಾನ್ಸಿ ಅಪಾರ್ಟ್‌ಮೆಂಟ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹಲವಾರು ವರದಿಗಳು ಹೇಳಿವೆ. 

58

ಅಥಿಯಾ ಅವರನ್ನು ಬಾಲಿವುಡ್‌ನಲ್ಲಿ ಲಾಂಚ್ ಮಾಡಿದ ಸಲ್ಮಾನ್ ಖಾನ್ ಆಕೆಗೆ 1.64 ಕೋಟಿ ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದೂ ಚರ್ಚೆಯಾಗಿತ್ತು.

68
Athiya Shetty And KL Rahul wedding

ಅಷ್ಟೇ ಅಲ್ಲ, ಜಾಕಿ ಶ್ರಾಫ್ ದಂಪತಿಗೆ 30 ಲಕ್ಷ ರೂಪಾಯಿ ಮೌಲ್ಯದ ಚೋಪಾರ್ಡ್ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಅರ್ಜುನ್ ಕಪೂರ್ ಆಕೆಗೆ 1.5 ಕೋಟಿ ಮೌಲ್ಯದ ಡೈಮಂಡ್ ಬ್ರೇಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

 
 

78

ಆದರೆ ಕುಟುಂಬವು ಈ ವರದಿಗಳನ್ನು ನಿರಾಕರಿಸಿದೆ ಮತ್ತು ಸುನೀಲ್ ಶೆಟ್ಟಿ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ, ಎಲ್ಲಾ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ನಿಜವಲ್ಲ. ಸಾರ್ವಜನಿಕ ಡೊಮೇನ್‌ನಲ್ಲಿ ಅಂತಹ ತಪ್ಪು ಮಾಹಿತಿಯನ್ನು ಪ್ರಕಟಿಸುವ ಮೊದಲು ನಮ್ಮೊಂದಿಗೆ ದೃಢೀಕರಿಸಲು ನಾವು ಪತ್ರಿಕಾ ಬಂಧುಬಳಗವನ್ನು ವಿನಂತಿಸುತ್ತೇವೆ' ಎಂದು ಸನೀಲ್‌ ಶೆಟ್ಟಿ ಹೇಳಿಕೆ ನೀಡಿದ್ದಾರೆ.

88

ಐಪಿಎಲ್ ಪಂದ್ಯದ ನಂತರ ದಂಪತಿಗಳಿಗೆ ಭವ್ಯವಾದ ಆರತಕ್ಷತೆಯನ್ನು ಆಯೋಜಿಸಲಾಗಿದೆ ಮತ್ತು  ಸುಮಾರು 3000 ಅತಿಥಿಗಳು ಪಾಲ್ಗೊಳ್ಳಬಹುದು ಎಂದು ಹೇಳಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories