ಮಸಾಬಾ ಅವರು ಎರಡು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಸತ್ಯದೀಪ್ ಮಿಶ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರಗಳಲ್ಲಿ, ದಂಪತಿಗಳು ರೋಮ್ಯಾಂಟಿಕ್ ಆಗಿ ಪೋಸ್ ನೀಡಿರುವುದನ್ನು ಕಾಣಬಹುದು.
'ಈ ಬೆಳಿಗ್ಗೆ ನಾನು ನನ್ನ ಶಾಂತಿಯ ಸಾಗರವನ್ನು ಮದುವೆಯಾಗಿದ್ದೇನೆ. ಇದು ಅನೇಕ ಜೀವಿತಾವಧಿಯ ಪ್ರೀತಿ, ಶಾಂತಿ, ಸ್ಥಿರತೆ ಮತ್ತು ಮುಖ್ಯವಾಗಿ ನಗು. ಈ ಶೀರ್ಷಿಕೆಯನ್ನು ಆಯ್ಕೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಇದು ಅದ್ಭುತವಾಗಿರುತ್ತದೆ' ಎಂದು ಮಸಾಬಾ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ.
ಆಯುಷ್ಮಾನ್ ಖುರಾನಾ, ಅಥಿಯಾ ಶೆಟ್ಟಿ, ರಿಯಾ ಕಪೂರ್, ಲಕ್ಷ್ಮಿ ಮಂಚು, ಸೋಫಿ ಚೌದ್ರಿ ಮತ್ತು ಜೋಯಾ ಅಖ್ತರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮಸಾಬಾ ಗುಪ್ತಾ ಅವರ ಜೀವನದಲ್ಲಿ ಹೊಸ ಅಧ್ಯಾಯಕ್ಕಾಗಿ ಹಾರೈಸಿದ್ದಾರೆ.
ಶಾಹಿದ್ ಕಪೂರ್ ಅವರ ಪತ್ನಿ ಮೀರಾ ಕಪೂರ್,'ಅಭಿನಂದನೆಗಳು.ಎಂದು ಬರೆದಿದ್ದಾರೆ. ದಿಯಾ ಮಿರ್ಜಾ ಅನೇಕ ಕೆಂಪು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಪರಿಣಿತಿ ಚೋಪ್ರಾ ಅವರನ್ನು ಅಭಿನಂದಿಸುತ್ತಾ, 'ನನ್ನ ಹುಡುಗಿಗೆ ಅಭಿನಂದನೆಗಳು. ನಿಮಗೆ ಮತ್ತು ಸತ್ತು ಅವರಿಗೆ ಶುಭಾಶಯಗಳು' ಎಂದು ಬರೆದಿದ್ದಾರೆ
ನಿಯತಕಾಲಿಕದೊಂದಿಗಿನ ಸಂಭಾಷಣೆಯಲ್ಲಿ ಮಸಾಬಾ ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. 'ನಮ್ಮಿಬ್ಬರೂ ಸರಳವಾದ ನ್ಯಾಯಾಲಯದ ವಿವಾಹವನ್ನು ಬಯಸಿದ್ದೆವು. ಅದನ್ನು ಚಿಕ್ಕದಾಗಿ ಇಟ್ಟುಕೊಂಡು ಮನೆಯವರ ಸಮ್ಮುಖದಲ್ಲಿ ಮಾಡುವ ಯೋಚನೆ ಇತ್ತು. ಇದು ತುಂಬಾ ಆತ್ಮೀಯ ಸಮಾರಂಭವಾಗಬೇಕೆಂದು ನಾವು ಬಯಸಿದ್ದೇವೆ. ಇನ್ನು ಮುಂದೆ ನಾವು ಅದನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಿಲ್ಲ. ಆದಾಗ್ಯೂ, 80-85 ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸುವ ಪಾರ್ಟಿ ಇರುತ್ತದೆ, ಅವರು ಸತ್ಯದೀಪ್ ಮತ್ತು ನನನ್ನು ತುಂಬಾ ಇಷ್ಟಪಡುತ್ತಾರೆ' ಎಂದಿದ್ದಾರೆ.
'ನಾನು ಅವರನ್ನು ಮೊದಲು 'ಮಸಾಬ ಮಸಾಬ' ಸೆಟ್‌ನಲ್ಲಿ ಭೇಟಿ ಮಾಡಿದ್ದೇನೆ. ಕುತೂಹಲಕಾರಿಯಾಗಿ, ಅವರು ಮೊದಲ ಸೀಸನ್‌ನಲ್ಲಿ ನನ್ನ ಮಾಜಿ ಗಂಡನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ನಟ ಮತ್ತು ಅದಕ್ಕೂ ಮೊದಲು ಒಂದು ದಶಕದಿಂದ ವಕೀಲರಾಗಿದ್ದರು' ಎಂದು ಸತ್ಯದೀಪ್ ಮಿಶ್ರಾ ಬಗ್ಗೆ ಮಸಾಬ ಅವರು ಹೇಳಿದರು,.
33 ವರ್ಷದ ಮಸಾಬಾ ಗುಪ್ತಾ ಅವರು ನೀನಾ ಗುಪ್ತಾ ಮತ್ತು ಅವರ ಮಾಜಿ ಗೆಳೆಯ ವಿವಿಯನ್ ರಿಚರ್ಡ್ಸ್ ಅವರ ಮಗಳು. ಅವರು ಈ ಮೊದಲು 2015 ರಲ್ಲಿ ಚಲನಚಿತ್ರ ನಿರ್ಮಾಪಕ ಮಧು ಮಂಟೆನಾ ಅವರನ್ನು ವಿವಾಹವಾದರು, ಅವರೊಂದಿಗೆ 2019 ರಲ್ಲಿ ವಿಚ್ಛೇದನ ಪಡೆದರು.
ಕೆಲವು ಗಂಟೆ ಮೊದಲು ಮಸಾಬಾ ಅವರು ಮದುವೆಯ ಸಮಯದ ಕೆಲವು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಪೂರ್ತಿ ಫ್ಯಾಮಿಲಿ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹಂಚಿಕೊಂಡಿರುವ ಫೋಟೋಗಳಿಂದ ವಿವಿಯನ್ ರಿಚರ್ಡ್ಸ್ ಅವರು ಸಹ ಮಗಳ ಮದುವೆಯಲ್ಲಿ ಭಾಗವಹಿಸಿರುವುದು ತಿಳಿಯುತ್ತದೆ. ಮಸಾಬಾ ಗುಪ್ತಾ ಅವರು ತಂದೆ ಜೊತೆ ಪೋಸ್ ನೀಡಿದ್ದಾರೆ.