ಅದಿತ್ಯ ರಾಯ್‌ ಕಪೂರ್‌ನಿಂದ ಫರ್ಹಾನ್‌ ಆಖ್ತರ್‌: ಶ್ರದ್ಧಾ ಕಪೂರ್ ಡೇಟಿಂಗ್‌ ಲೈಫ್‌

Suvarna News   | Asianet News
Published : Mar 03, 2022, 07:42 PM ISTUpdated : Mar 03, 2022, 08:22 PM IST

ಶ್ರದ್ಧಾ ಕಪೂರ್ (Shraddha Kapoor) ಮಾರ್ಚ್ 3 ರಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಹಸೀನಾ ಪಾರ್ಕರ್, ಸ್ತ್ರೀ ಮತ್ತು ಚಿಚೋರೆ ಮುಂತಾದ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಭಿನಯದ ಜೊತೆಗೆ, ಶ್ರದ್ಧಾ ಅವರ ಹೆಸರು ತನ್ನ ಸಹ-ನಟರ ಜೊತೆಯ ಲಿಂಕಪ್‌ ಕಾರಣಕ್ಕಾಗಿ ಮುಖ್ಯಾಂಶಗಳನ್ನು ಪಡೆದುಕೊಂಡಿತು. ಶ್ರದ್ಧಾ ಅವರ ರೂಮರ್ಡ್‌ ಆಫೇರ್‌ಗಳು ಇಲ್ಲಿವೆ. 

PREV
111
ಅದಿತ್ಯ ರಾಯ್‌ ಕಪೂರ್‌ನಿಂದ ಫರ್ಹಾನ್‌ ಆಖ್ತರ್‌: ಶ್ರದ್ಧಾ ಕಪೂರ್ ಡೇಟಿಂಗ್‌ ಲೈಫ್‌

ಶಕ್ತಿ ಕಪೂರ್‌ (Shakti Kapoor) ಪುತ್ರಿ ಶ್ರದ್ಧಾ ತಮ್ಮ ಅಭಿನಯದಿಂದ ಬಾಲಿವುಡ್‌ (Bollywood) ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಇವರ ಹೆಸರು ಕೆಲವು ಸಹ ನಟರ ಜೊತೆ ಸಹ ಕೇಳಿಬಂದಿದೆ. ಶ್ರದ್ಧಾ ಅವರ ಡೈಟಿಂಗ್‌ ಲೈಫ್‌ (Dating Life) ವಿವರ ಇಲ್ಲಿದೆ.

211

ಶ್ರದ್ಧಾ ಕಪೂರ್ ಪ್ರಸ್ತುತ ದೇಶದ ಟಾಪ್ ಸೆಲೆಬ್ರಿಟಿ ಫೋಟೋಗ್ರಾಫರ್‌ಗಳಲ್ಲಿ ಒಬ್ಬರಾದ ರೋಹನ್ ಶ್ರೇಷ್ಠಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ವರದಿಗಳ ಪ್ರಕಾರ, ಶ್ರದ್ಧಾ ಮತ್ತು ರೋಹನ್ ಅವರ ಸಂಬಂಧವು ಕೆಲವು ವರ್ಷಗಳ ಹಿಂದೆ 2018 ರಲ್ಲಿ ಹೊರಹೊಮ್ಮಿತ್ತು. 
 

311

ಫರ್ಹಾನ್ ಅಖ್ತರ್ ಜೊತೆಗಿನ Break Up ಆದ ನಂತರ ಶ್ರದ್ಧಾ ಕಪೂರ್ ಅವರು ರೋಹನ್‌ಗೆ ಹತ್ತಿರವಾದರು ಎಂದು ಹೇಳಲಾಗುತ್ತದೆ. ದಂಪತಿ ತಮ್ಮ ಸಂಬಂಧವನ್ನು ಪ್ರಚಾರದಿಂದ ದೂರ ಇಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. 

411

ಈ ಜೋಡಿ ಮುಂಬೈ ಪಾಪರಾಜಿಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ. ಶ್ರದ್ಧಾ ಅವರ ಸೋದರ ಸಂಬಂಧಿ ಪ್ರಿಯಾಂಕಾ ಅವರ ಮದುವೆಯಲ್ಲಿ ಇಬ್ಬರೂ ಕಾಣಿಸಿಕೊಂಡಾಗ ಶ್ರದ್ಧಾ-ರೋಹನ್ (Shraddha-Rohan) ಅವರ ಮದುವೆಯ  (Wedding) ಮಾತುಕತೆಗಳು ಹೊರಹೊಮ್ಮಿದವು.
 

511

ಹಿಟ್ ಚಿತ್ರ ಆಶಿಕಿ 2 ರ ಚಿತ್ರೀಕರಣದ ಸಮಯದಲ್ಲಿ, ಶ್ರದ್ಧಾ ಕಪೂರ್ ತನ್ನ ಸಹ-ನಟ ಆದಿತ್ಯ ರಾಯ್ ಕಪೂರ್ ಜೊತೆ ಸಂಪರ್ಕ ಹೊಂದಿದ್ದರು. ಶ್ರದ್ಧಾ ಮತ್ತು ಆದಿತ್ಯ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಡಿನ್ನರ್ ಡೇಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

611

ಆದರೆ ನಂತರ ಇಬ್ಬರೂ ಬೇರೆಯಾದರು. ಇಬ್ಬರೂ ವಿಭಿನ್ನ ಹಿನ್ನೆಲೆಯಿಂದ ಬಂದವರು ಆದ್ದರಿಂದ ಅವರು ಬೇರ್ಪಟ್ಟರು ಎಂದು ಹಲವರು ಹೇಳಿದರು. ಶ್ರದ್ಧಾ ಬಹಿರ್ಮುಖಿ ಆದರೆ ಆದಿತ್ಯ ಅಂತರ್ಮುಖಿ ಮುಖ್ಯ ಕಾರಣ ಎನ್ನಲಾಗಿದೆ.


 

711

ಬಾಲಿವುಡ್ ಲೈಫ್ ಪ್ರಕಾರ, ಶ್ರದ್ಧಾ ಅವರ ಪೋಷಕರು ತಮ್ಮ ಮಗಳು ತನ್ನ ಚಲನಚಿತ್ರ ವೃತ್ತಿ ಜೀವನವನ್ನು (Career) ಪ್ರಾರಂಭಿಸಿದ್ದರಿಂದ ಆದಿತ್ಯನನ್ನು ಎಂದಿಗೂ ಒಪ್ಪಿರಲಿಲ್ಲ. ಆಶಿಕಿ 2 ನಂತರ, ಶ್ರದ್ಧಾ ಮತ್ತು ಆದಿತ್ಯ ಮತ್ತೊಂದು
ಚಿತ್ರ ಓಕೆ ಜಾನು ಮಾಡಿದರು.

811

ಪ್ರಸಿದ್ಧ ಆಭರಣ ಸರಣಿಯಾದ TBZ ನ ಉತ್ತರಾಧಿಕಾರಿ ವನರಾಜ್ ಜವೇರಿಯೊಂದಿಗೆ ಶ್ರದ್ಧಾ ಕಪೂರ್ ಡೇಟಿಂಗ್ ಮಾಡಿದ್ದಾರೆ ಎಂದು ವದಂತಿಗಳಿವೆ. ಇಬ್ಬರೂ ಪ್ರೌಢಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು ಮತ್ತು ಐದು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಶ್ರದ್ಧಾ ಕಪೂರ್ ತನ್ನ ಉನ್ನತ ಕಾಲೇಜಿಗೆ ಬೋಸ್ಟನ್ ವಿಶ್ವವಿದ್ಯಾನಿಲಯಕ್ಕೆ ಹೋದಾಗ ಈ ಸಂಬಂಧ ಕೊನೆಗೊಂಡಿತು ಮತ್ತು ವನರಾಜ್ ಜವೇರಿ ಭಾರತದಲ್ಲಿಯೇ ಉಳಿದರು.


 

911

ಶ್ರದ್ಧಾ ಕಪೂರ್ ಮತ್ತು ಅವರ ರಾಕ್ ಆನ್ 2 ಸಹನಟ ಫರ್ಹಾನ್ ಅಖ್ತರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. TOI ಪ್ರಕಾರ, ಶ್ರದ್ಧಾ ಕಪೂರ್ ಅವರು ಫರ್ಹಾನ್ ಜೊತೆಗಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಆದಾಗ್ಯೂ, ಶ್ರದ್ಧಾ ಅವರ ತಂದೆ ಶಕ್ತಿ ಕಪೂರ್ ನಟಿಯನ್ನು ಫರ್ಹಾನ್ ಅವರ ಮನೆಯಿಂದ ಹೊರಗೆಳೆದಿದ್ದಾರೆ ಎಂಬ ವರದಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ ಎಲ್ಲರೂ ಆಘಾತಕ್ಕೊಳಗಾಗಿದ್ದರು.
 

1011

ಶ್ರದ್ಧಾ ಚಿಕ್ಕಮ್ಮ, ಶಕ್ತಿ ಕಪೂರ್ ಮತ್ತು ಪದ್ಮಿನಿ ಕೊಲ್ಹಾಪುರಿ ಅವರು ಅಖ್ತರ್ ಅವರ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು ಮತ್ತು ಶ್ರದ್ಧಾ ಅವರನ್ನು ಫ್ಲಾಟ್‌ನಿಂದ ಹೊರಗೆ ಕರೆದೊಯ್ದರು ಎಂದು ಹಲವಾರು ವರದಿಗಳು ಹೇಳಿವೆ. 

1111

ಶ್ರದ್ಧಾ ಅವರು ವಿಷಯವನ್ನು ದೊಡ್ಡದು ಮಾಡಲು ಬಯಸಲಿಲ್ಲ. ಆದ್ದರಿಂದ ಅವಳು ಸದ್ದಿಲ್ಲದೆ ತನ್ನ ಪ್ರೀತಿಯಂದ ಹೊರಬಂದರು ಎಂದು ವರದಿಯಾಗಿದೆ. ನಂತರ, ಮಗಳು-ತಂದೆ ಇಬ್ಬರೂ ಈ ವರದಿಯನ್ನು 'ಟೋಟಲ್ ಕ್ರಾಪ್' ಎಂದು ಕರೆದರು ಮತ್ತು ವದಂತಿಗಳನ್ನು ತಳ್ಳಿಹಾಕಿದರು.

Read more Photos on
click me!

Recommended Stories