Radhe Shyam: ಟ್ರೇಲರ್ ಕಂಡು ದಂಗಾದ ಫ್ಯಾನ್ಸ್.. ಮದುವೆ ಗುಟ್ಟು ಕೊಟ್ಟ ಬಾಹುಬಲಿ!

Published : Mar 02, 2022, 08:08 PM ISTUpdated : Mar 02, 2022, 08:09 PM IST

ಮುಂಬೈ(ಮಾ. 02)  ಬಾಹುಬಲಿ (Baahubali) ಖ್ಯಾತಿಯ ಪ್ರಭಾಸ್ 'ರಾಧೆ ಶ್ಯಾಮ್' ಟ್ರೇಲರ್  (Radhe Shyam Trailer) ಬಿಡುಗಡೆಯಾಗಿದ್ದು ಸಖತ್ ರೆಸ್ಪಾನ್ಸ್  ಪಡೆದುಕೊಂಡಿದೆ.  ಚಿತ್ರತಂಡ ಮುಂಬೈನಲ್ಲಿಯೇ ಬಿಡು ಬಿಟ್ಟಿದೆ. ಪೂಜಾ ಹೆಗ್ಡೆ ಚಿತ್ರದ ಆಕರ್ಷಣೆ...

PREV
112
Radhe Shyam: ಟ್ರೇಲರ್ ಕಂಡು ದಂಗಾದ ಫ್ಯಾನ್ಸ್.. ಮದುವೆ ಗುಟ್ಟು ಕೊಟ್ಟ ಬಾಹುಬಲಿ!

ಹಸ್ತ ಸಾಮುದ್ರಿಕ ಜ್ಯೋತಿಷಿ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದು ಸಸ್ಪೆನ್ಸ್ ಲವ್ ಸ್ಟೋರಿ ಕತಾ ಹಂದರ ಎನ್ನುವುದು ಗೊತ್ತಾಗುತ್ತಿದೆ.

ರಾಧೆ ಶ್ಯಾಮದಲ್ಲಿ ಶಿವಣ್ಣ

212

ಮುಂಬೈನಲ್ಲಿದ್ದ ತಂಡದ ಜತೆ ಪತ್ರಕರ್ತರು ಮಾತನಾಡಿದರು. ಪ್ರಭಾಸ್ ಬಳಿ ನೀವು ಎಂದಾದರೂ ಭವಿಷ್ಯ ನುಡಿದಿದ್ದೀರಾ ಎಂದು ಪ್ರಶ್ನೆ ಮಾಕಡಿದರು. ಇದಕ್ಕೆ  ನಗುವೇ ಉತ್ತರವಾಗಿತ್ತು .

312

ಆಸ್ಟ್ರೋ-ಥ್ರಿಲ್ಲರ್ ಆಗಿರುವುದರಿಂದ, ಜ್ಯೋತಿಷ್ಯದ ಹಿನ್ನೆಲೆಯಲ್ಲಿ, ನಿಮ್ಮ ಸ್ವಂತ ಮದುವೆಯ ಬಗ್ಗೆ ನೀವು ಎಂದಾದರೂ ಭವಿಷ್ಯ ನುಡಿದಿದ್ದೀರಾ ಎಂದು ನಟನನ್ನು  ಪ್ರಶ್ನೆ ಮಾಡಿದಾಗ 'ಬೋಹೋತ್ ಬಾರ್ ಗಲತ್ ಹುವಾ ಹೈ ಪ್ಯಾರ್ ಕೋ ಲೇಕೆ ಇಸಿ ಲಿಯೇ" ಎಂದು ಪ್ರಭಾಸ್ ಉತ್ತರ ನೀಡಿದರು.

412

ಶಾರುಖ್ ಮತ್ತು ಸಲ್ಮಾನ್ ರನ್ನು ಇಷ್ಟಪಡುತ್ತೇನೆ. ಬಿಗ್ ಬಿ ಅಮಿತಾಭ್ ಬಚ್ಚನ್ ನನಗೆ ಸದಾ ಸ್ಪೂರ್ತಿಯಾಗಿದ್ದಾರೆ ಎಂದು  ಪ್ರಭಾಸ್ ಹೇಳಿದರು.

512

ಪ್ಯಾನ್ ಇಂಡಿಯಾ ಸಿನಿಮಾ ವಿಶ್ಯವ್ಯಾಪಿ ಬಿಡುಗಡೆಯಾಗಲಿದೆ.  ಪ್ರಭಾಸ್ ಮತ್ತು ಪೂಜಾ ಜೋಡಿ ಮೋಡಿ ಮಾಡುವುದು ಖಚಿತವಾಗಿದೆ ಎನ್ನೋದು ಅಭಿಮಾನಿಗಳ ಆಸೆ.

612

 'ರಾಧೆ ಶ್ಯಾಮ್‌' ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿರುವುದು ಎಲ್ಲರಿಗೂ ಗೊತ್ತಿದೆ. ವಿಕ್ರಮಾದಿತ್ಯ ಮತ್ತು ಪ್ರೇರಣಾಳ ಅದ್ಭುತ ಪ್ರೇಮ್‌ ಕಹಾನಿಯಲ್ಲಿ ಕನ್ನಡದ ಶಿವಣ್ಣ ಸಹ ಮುಖ್ಯ ಭೂಮಿಕೆಯಲ್ಲಿದ್ದಾರೆ.

712

ಶಿವಣ್ಣ ಈ ಚಿತ್ರದಲ್ಲಿ ಪಾತ್ರ ಮಾಡಿಲ್ಲ ಆದರೆ  ರೆಟ್ರೋ ಲವ್ ಸ್ಟೋರಿಯನ್ನು ಕನ್ನಡದಲ್ಲಿ ನಿರೂಪಣೆಗೆ ದನಿ ನೀಡಿರುವುದು ಶಿವರಾಜ್ ಕುಮಾರ್.

812

ತಮ್ಮ ಸಿನಿಮಾದ ಕನ್ನಡ ವರ್ಷನ್‌ಗೆ ಧ್ವನಿ ನೀಡಿರುವ ಶಿವರಾಜ್‌ಕುಮಾರ್‌ಗೆ 'ರಾಧೆ ಶ್ಯಾಮ್' ಬಳಗ ಧನ್ಯವಾದ ಹೇಳಿದೆ. ಅದಕ್ಕಾಗಿಯೇ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡು ಧನ್ಯವಾದ ಅರ್ಪಿಸಿದೆ.

912

'ರಾಧೆ ಶ್ಯಾಮ್' ಹಿಂದಿ ವರ್ಷನ್‌ಗೆ 'ಬಿಗ್‌ಬಿ' ಅಮಿತಾಭ್ ಬಚ್ಚನ್ ಧ್ವನಿ ನೀಡಿದ್ದಾರೆ. ಮಲಯಾಳಂ ವರ್ಷನ್‌ಗೆ ಪೃಥ್ವಿರಾಜ್‌ ಸುಕುಮಾರನ್ ಧ್ವನಿ ನೀಡಿದ್ದಾರೆ. ಇನ್ನು, ತೆಲುಗು ವರ್ಷನ್‌ಗೆ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಧ್ವನಿ ನೀಡಿದ್ದಾರೆ. 

 

1012

'ರಾಧೆ ಶ್ಯಾಮ್' ಹಿಂದಿ ವರ್ಷನ್‌ಗೆ 'ಬಿಗ್‌ಬಿ' ಅಮಿತಾಭ್ ಬಚ್ಚನ್ ಧ್ವನಿ ನೀಡಿದ್ದಾರೆ. ಮಲಯಾಳಂ ವರ್ಷನ್‌ಗೆ ಪೃಥ್ವಿರಾಜ್‌ ಸುಕುಮಾರನ್ ಧ್ವನಿ ನೀಡಿದ್ದಾರೆ. ಇನ್ನು, ತೆಲುಗು ವರ್ಷನ್‌ಗೆ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಧ್ವನಿ ನೀಡಿದ್ದಾರೆ. 

1112

ಬಿಗ್ ಬಜೆಟ್ ಸಿನಿಮಾದಲ್ಲಿ  ಭಾಗ್ಯಶ್ರೀ, ಕೃಷ್ಣಂರಾಜು, ಸತ್ಯರಾಜ್, ಜಗಪತಿ ಬಾಬು, ಪ್ರಿಯದರ್ಶಿ, ಮುರಳಿ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಎಸ್‌. ಥಮನ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

1212

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಾಧೆ ಶಾಮಾ ಟ್ರೇಲರ್ ಹವಾ ಸೃಷ್ಟಿ ಮಾಡಿದ್ದು  ಚಿತ್ರ ಬಿಡುಗಡೆ ನಂತರ ಅಭಿಮಾನಿಗಳಿಂದ ಹೇಗೆ ಸ್ವೀಕಾರ ಆಗಲಿದೆ ಎನ್ನುವುದನ್ನು ಕಾದು ನೋಡಬೇಕು. 

 

Read more Photos on
click me!

Recommended Stories