Salman Khan birthday: ಬಾಲಿವುಡ್ ಬ್ಯಾಡ್ ಬಾಯ್ ಆಸ್ತಿ ಮತ್ತು ಲೈಫ್ ಸ್ಟೈಲ್!
First Published | Dec 27, 2021, 1:55 PM ISTಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್(Salman Khan) ಅವರಿಗೆ 56 ವರ್ಷಗಳ ಸಂಭ್ರಮ. ಡಿಸೆಂಬರ್ 27, 1965 ರಂದು ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್ 30 ವರ್ಷಗಳಿಗೂ ಹೆಚ್ಚು ಕಾಲ ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸಿದ್ಧ ಚಲನಚಿತ್ರ ಬರಹಗಾರ ಸಲೀಂ ಖಾನ್ (Salim Khan) ಅವರ ಮಗ ಸಲ್ಮಾನ್ ಖಾನ್ ಅವರ ಪೂರ್ಣ ಹೆಸರು ಅಬ್ದುಲ್ ರಶೀದ್ ಸಲೀಂ ಖಾನ್. ಕೋಟಿಗಟ್ಟಲೆ ಆಸ್ತಿಯ ಒಡೆಯ ಸಲ್ಮಾನ್ ತಮ್ಮ ಮೊದಲ ಗಳಿಕೆ ಕೇವಲ 75 ರೂಪಾಯಿ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ವರದಿಗಳ ಪ್ರಕಾರ, ಅವರ ಹೆಸರಿನಲ್ಲಿ ಅನೇಕ ನಗರಗಳಲ್ಲಿ ಆಸ್ತಿಗಳಿವೆ. ಅವರು ಬೀಯಿಂಗ್ ಹ್ಯೂಮನ್ (Being Human) ಎಂಬ ತಮ್ಮದೇ ಆದ ಬಟ್ಟೆ ಬ್ರಾಂಡ್ ಅನ್ನು ಹೊಂದಿದ್ದಾರೆ. ಸುದ್ದಿ ಪ್ರಕಾರ ಸಲ್ಮಾನ್ ಸುಮಾರು 2300 ಕೋಟಿ ರೂ. ಆಸ್ತಿಯ ಒಡೆಯ. ಸಲ್ಮಾನ್ ಖಾನ್ ಅವರ ಆಸ್ತಿ ಮತ್ತು ಲೈಫ್ ಸ್ಟೈಲ್ ವಿವರ ಇಲ್ಲಿದೆ