Madhuban Controversy: ಸನ್ನಿ ಲಿಯೋನ್ ಮಧುಬನ್‌ ಹಾಡು ನಿಷೇಧಕ್ಕೆ ಪುರೋಹಿತರ ಆಗ್ರಹ !

First Published Dec 26, 2021, 7:28 PM IST

ಇತ್ತೀಚೆಗೆ ಬಿಡುಗಡೆಯಾದ ಸಿಂಗರ್‌ ಕನ್ನಿಕಾ ಕಪೂರ್‌ (Kanika Kapoor) ಮಧುಬನ್‌ (Madhuban) ಮ್ಯೂಸಿಕ್‌ ವಿಡಿಯೋ ಸದ್ದು ಮಾಡುತ್ತಿದೆ. ಸನ್ನಿ ಲಿಯೋನ್‌ (Sunny Leone) ಹೆಜ್ಜೆ ಹಾಕಿರುವ ಈ ಹಾಡು ತೊಂದರೆಯಲ್ಲಿದೆ. ಈ ಹಾಡು ಧಾರ್ಮಿಕ ಭಾವನೆಗಳಿಗೆ ಉಂಟುಮಾಡುತ್ತಿದೆ ಎಂದು ಮೊದಲು ನೆಟ್ಟಿಗ್ಗರು ಆರೋಪಿಸಿದ್ದರು ಹಾಗೂ ಇದನ್ನು ಬ್ಯಾನ್‌ ಮಾಡಬೇಕು ಎಂದು ಡಿಮ್ಯಾಂಡ್‌ ಮಾಡಿದ್ದರು. ಈಗ ಮ್ಯೂಸಿಕ್ ವಿಡಿಯೋಗೆ ಪುರೋಹಿತರು ಸಹ ಪ್ರತಿಕ್ರಿಯಿಸಿದ್ದು,  ಸನ್ನಿ ಲಿಯೋನ್ ಅವರ ಈ ಸಾಂಗ್‌ ಅವಹೇಳನಕಾರಿ ಎಂದು ಮಥುರಾದ ಅರ್ಚಕರು ಹೇಳಿದ್ದಾರೆ.

ಸನ್ನಿ ಲಿಯೋನ್ ಅಭಿನಯದ ಸರೆಗಮ ಮ್ಯೂಸಿಕ್ ಬಿಡುಗಡೆ ಮಾಡಿದ ಮಧುಬನ್ ಎಂಬ ಮ್ಯೂಸಿಕ್ ವಿಡಿಯೋ ಹಾಡಿಗೆ  ಪುರೋಹಿತರು ಪ್ರತಿಕ್ರಿಯಿಸಿದ್ದಾರೆ. ಸನ್ನಿ ಲಿಯೋನ್ ಅವರ ಈ ಸಾಂಗ್‌ ಅವಹೇಳನಕಾರಿ ಎಂದು ಮಥುರಾದ ಅರ್ಚಕರು ಹೇಳಿದ್ದಾರೆ

ಇದಕ್ಕೂ ಮೊದಲು ಸನ್ನಿ ಲಿಯೋನ್ ನಟಿಸಿರುವ  ಹೊಸ ಮ್ಯೂಸಿಕ್‌ ಮಧುಬನ್‌ ವಿಡಿಯೋ ಧಾರ್ಮಿಕ  ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟಿಜನ್ಸ್ ಅರೋಪ ಮಾಡಿ ಹಾಡನ್ನು  ಬ್ಯಾನ್‌ ಮಾಡಲು ಡಿಮ್ಯಾಂಡ್‌ ಮಾಡಿದ್ದರು.ಈ ಮೂಲಕ ಸನ್ನಿ ಲಿಯೋನ್  ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಪುರೋಹಿತರು ಸನ್ನಿ ಲಿಯೋನ್ ಅವರ ಇತ್ತೀಚಿನ ವೀಡಿಯೊ ಆಲ್ಬಂ ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ, ಬಾಲಿವುಡ್ ನಟಿ 'ಮಧುಬನ್ ಮೇ ರಾಧಿಕಾ ನಾಚೆ' ಎಂಬ ಸಾಂಪ್ರದಾಯಿಕ ಹಾಡಿನಲ್ಲಿ 'ಅಶ್ಲೀಲ' ನೃತ್ಯ ಮಾಡುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಸರೆಗಮ ಮ್ಯೂಸಿಕ್‌ನಿಂದ ಮಧುಬನ್ ಎಂಬ ಸಂಗೀತ ವೀಡಿಯೊವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ ಮತ್ತು ಕನಿಕಾ ಕಪೂರ್ ಮತ್ತು ಅರಿಂದಮ್ ಚಕ್ರವರ್ತಿ ಹಾಡಿರುವ ಪಾರ್ಟಿ ಸಂಖ್ಯೆಯಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮೂಲತಃ ಮೊಹಮ್ಮದ್ ರಫಿ ಅವರು 1960 ರ ಕೊಹಿನೂರ್ ಚಲನಚಿತ್ರಕ್ಕಾಗಿ ಹಾಡಿದ್ದಾರೆ.

'ಸರ್ಕಾರವು ನಟಿಯ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮತ್ತು ಅವರ ವೀಡಿಯೊ ಆಲ್ಬಂ ಅನ್ನು ನಿಷೇಧಿಸದಿದ್ದರೆ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ' ಎಂದು ವೃಂದಾಬನ್‌ನ ಸಂತ ನವಲ್ ಗಿರಿ ಮಹಾರಾಜ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Sunny leone

'ದೃಶ್ಯವನ್ನು ಹಿಂಪಡೆದು ಸಾರ್ವಜನಿಕ ಕ್ಷಮೆಯಾಚಿಸುವವರೆಗೆ ಆಕೆಯನ್ನು ಭಾರತದಲ್ಲಿ ಉಳಿಯಲು ಬಿಡಬಾರದು' ಎಂದು ಒಬ್ಬರು ಹೇಳಿದ್ದಾರೆ. 'ನಮ್ಮ ಭಜನೆ ಮಧುಬನ್‌ ಮೇ ರಾಧಿಕಾ ಅನ್ನು ದುರುಪಯೋಗ ಮಾಡಿದ್ದಿರಿ, ನಿಮಗೆ ನಾಚಿಕೆ ಆಗಬೇಕು. ಈ ಸಾಹಿತ್ಯದಿಂದ ನೀವುಗಳು ಕೆಟ್ಟ ಐಟಂ ಸಾಂಗ್‌ ಮಾಡಿದ್ದರೀರಾ' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

ಅಖಿಲ ಭಾರತೀಯ ತೀರ್ಥ ಪುರೋಹಿತ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್ ಪಾಠಕ್ ಅವರು ಸನ್ನಿ ಲಿಯೋನ್ ಅವರು ಅವಹೇಳನಕಾರಿ ರೀತಿಯಲ್ಲಿ  ಹಾಡನ್ನು ಪ್ರಸ್ತುತಪಡಿಸುವ ಮೂಲಕ ಬ್ರಿಜ್‌ಭೂಮಿಯ ಪ್ರತಿಷ್ಠೆಯನ್ನು ಕೆಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

click me!