ನಿನ್ನೆ, ಅಂದರೆ ಡೆಸೆಂಬರ್ 5ರಂದು ಬಾಲಿವುಡ್ ನಟ ಆಧಾರ್ ಜೈನ್ ಮತ್ತು ಅವರ ಸ್ಪೇಷಲ್ ಫ್ರೆಂಡ್ ತಾರಾ ಸುತಾರಿಯಾ ಅವರು ಕಪೂರ್ ಫ್ಯಾಮಿಲಿಯ ಕ್ರಿಸ್‌ಮಸ್ ಬ್ರಂಚ್‌ನಲ್ಲಿ ಕಾಣಿಸಿಕೊಂಡರು. ಮುಂಬೈನಲ್ಲಿರುವ ಕಪೂರ್ ಅವರ ಮನೆಯ ಹೊರಗೆ ಪಾಪರಾಜಿಗಳಿಗೆ ಪೋಸ್ ನೀಡಿದಾಗ ಇಬ್ಬರೂ ತುಂಬಾ ಹಾಟ್ ಆಗಿ ಕಾಣುತ್ತಿದ್ದರು.
ತಾರಾ ಅವರು ಬಿಳಿ ಸ್ಟ್ರಾಪ್‌ಲೆಸ್ ಡ್ರೆಸ್ ಮತ್ತು ಬ್ರೌನ್ ಹೀಲ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಕ್ರಿಸ್‌ಮಸ್‌ಗೆ ಪಪ್ಫೇಕ್ಟ್ ಆಗಿ ಕಾಣುತ್ತಿದ್ದರು. ಅವರು ತನ್ನ ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಮಿನಿಮಮ್ ಮೇಕಪ್ ಮೂಲಕ ಅವರ ಲುಕ್ ಕಂಪ್ಲೀಟ್ ಮಾಡಿದ್ದರು.
ಮತ್ತೊಂದೆಡೆ, ಆಧಾರ್ ಜೈನ್ ಮಲ್ಟಿ ಕಲರ್‌ನ ಪ್ರಿಟೆಂಡ್ ಶರ್ಟ್, ಬಿಳಿ ಪ್ಯಾಂಟ್ ಮತ್ತು ಸನ್ ಗ್ಲಾಸ್‌ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಶಟರ್‌ಬಗ್‌ಗಳಿಗೆ ಪೋಸ್ ನೀಡಿದರು.ಆದಾಗ್ಯೂ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆಧಾರ್ ಅನ್ನು ರಣಬೀರ್ ಕಪೂರ್ ಎಂದು ಭಾವಿಸಿ ಕನ್‌ಫ್ಯೂಸ್ ಆದರು.
ಆಧಾರ್ ಜೈನ್ ಅವರು 'ಸಾಸ್ತಾ ರಣಬೀರ್ ಕಪೂರ್'ನಂತೆ ಕಾಣುತ್ತಿದ್ದಾರೆ ಎಂದು ಹೇಳಿ ಅವರನ್ನು ಟ್ರೋಲ್ ಮಾಡಿದ್ದಾರೆ. ಫೋಟೋದಲ್ಲಿ ಆಧಾರ್ ಜೈನ್ ಅನ್ನು ರಣಬೀರ್ ಕಪೂರ್ ಎಂದು ಭಾವಿಸಿದ ನೆಟಿಜನ್ಸ್ ರಣಬೀರ್ ಅವರ ಎತ್ತರ ಹೇಗೆ ಕಡಿಮೆಯಾಯಿತು ಎಂದು ಕೆಲವರು ಆಶ್ಚರ್ಯ ಪಟ್ಟರು
ಅವರು ತಾರಾ ಅವರೊಂದಿಗೆ ಏಕೆ ಪೋಸ್ ನೀಡುತ್ತಿದ್ದಾರೆಂದು ಕೆಲವರು ಗೊಂದಲಕ್ಕೊಳಗಾದರು ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಆಧಾರ್ ರಣಬೀರ್ ಕಪೂರ್ ಅವರ ಫಸ್ಟ್ ಕಸಿನ್. ಆದ್ದರಿಂದ, ಅವರು ಅನೇಕರನ್ನು ಕನ್‌ಫ್ಯೂಸ್ ಮಾಡುವ ಹೋಲಿಕೆಯನ್ನು ಹೊಂದಿದ್ದಾರೆ.
ಸದ್ಯಕ್ಕೆ ಆಧಾರ್ ಮತ್ತು ತಾರಾ ಡೇಟಿಂಗ್ ನಲ್ಲಿದ್ದಾರೆ ಎಂದು ವರದಿಯಾಗಿದೆ. ನಟಿ ಕಪೂರ್ ಅವರ ಕುಟುಂಬದ ಅನೇಕ ಪಾರ್ಟಿಗಳು ಮತ್ತು ಸೆಲೆಬ್ರೆಷನ್‌ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಆಧಾರ್‌ನ ಮೊದಲ ಬಾಲಿವುಡ್ ಸಿನಿಮಾ ಹಲೋ ಚಾರ್ಲಿ ಅಲ್ಲಿ ಜಾಕಿ ಶ್ರಾಫ್, ಶ್ಲೋಕಾ ಪಂಡಿತ್ ಎಲ್ನಾಜ್ ನೊರೌಜಿ ಮತ್ತು ರಾಜ್‌ಪಾಲ್ ಯಾದವ್ ಕಾಣಿಸಿಕೊಂಡಿದ್ದಾರೆ.