Image: Priyanka ChopraInstagram
ಪ್ರಿಯಾಂಕಾ ಚೋಪ್ರಾ ಅವರು ಗಾಯಕ- ನಟ ಪತಿ ನಿಕ್ ಜೋನಾಸ್ ಅವರೊಂದಿಗೆ ಈಸ್ಟರ್ ಔಟಿಂಗ್‌ನಲ್ಲಿ ಹಳದಿ ಕೋ-ಆರ್ಡರ್ ಧರಿಸಿ ಮಿಂಚಿದರು. ಈಸ್ಟರ್ 2022 ದಿನದಂದು ಕ್ರಾಪ್ ಟಾಪ್ ಮತ್ತು ಮಿಡ್ ವೇಸ್ಟ್ ಸ್ಕರ್ಟ್ ಅನ್ನು ಪ್ರಿಯಾಂಕಾ ಧರಿಸಲು ಆರಿಸಿಕೊಂಡಿದ್ದಾರೆ. ನಟಿಯ ಹಳದಿ ಉಡುಪಿನ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ
Image: Priyanka ChopraInstagram
ಪ್ರಿಯಾಂಕಾ ಚೋಪ್ರಾ ಈಸ್ಟರ್‌ಗಾಗಿ ಧರಿಸಿದ್ದ ಸನ್‌ಶೈನ್ ಯೆಲ್ಲೋ ಕೋ-ಆರ್ಡ್ ಸೆಟ್ 'ಮ್ಯೂಸ್ ಫಾರ್ ಆಲ್' ಎಂಬ ಟರ್ಕಿಶ್ ಬ್ರಾಂಡ್‌ನಿದಾಗಿದೆ ಮತ್ತು ಪಿಸಿಯ ಔಟ್‌ಫಿಟ್ ಬೆಲೆ 23,000 ರೂ.
Image: Priyanka ChopraInstagram
ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಪ್ರಿಯಾಂಕಾ ಚೋಪ್ರಾ ಧರಿಸಿರುವ 'ಸ್ಟೆಫ್ ಶರ್ಟ್' ಬೆಲೆ 2,100 TL ಮತ್ತು 'ಸ್ಟೆಫ್ ಸ್ಕರ್ಟ್' ಬೆಲೆ 2,450 TL.ಭಾರತೀಯ ರೂಪಾಯಿಗಳಲ್ಲಿ, ಕ್ರಾಪ್ ಟಾಪ್ ಕಮ್ ಶರ್ಟ್‌ನ ಬೆಲೆ ಸರಿಸುಮಾರು ರೂ 12,617.5 ಮತ್ತು ಸ್ಕರಟ್ ಬೆಲೆ ಸುಮಾರು ರೂ 10, 815 ಆಗಿದೆ. ಸನ್‌ಶೈನ್ ಹಳದಿ ಕೋ-ಆರ್ಡ್ ಸೆಟ್‌ನ ಒಟ್ಟು ಬೆಲೆ ಅಂದಾಜು ರೂ 23,432,5 ಆಗಿದೆ.
ಪ್ರಿಯಾಂಕಾ ಚೋಪ್ರಾ ಅವರ ಹಳದಿ ಸೆಟ್ ದುಬಾರಿಯಾಗಿದ್ದರೂ ಸಹ ಅದು ಸಂಪೂರ್ಣವಾಗಿ ಖರೀದಿಗೆ ಯೋಗ್ಯವಾಗಿದೆ. ಪ್ರಿಯಾಂಕಾ ಅವರ ಈ ಲುಕ್ ಬೇಸಿಗೆ ಕಾಲಕ್ಕೆ ಪರ್ಪೇಕ್ಟ್ ಆಗಿದೆ ಚಿಕ್ ಮತ್ತು ಮುಖ್ಯವಾಗಿ ಆರಾಮದಾಯಕವಾಗಿದೆ.
ಈ ನಡುವೆ ಪ್ರಿಯಾಂಕಾ ಚೋಪ್ರಾ ಶುಕ್ರವಾರ ತನ್ನ LA ಮನೆಯಲ್ಲಿ ತನ್ನ ಪೂಲ್ ಟೈಮ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ನಟಿ ಕಪ್ಪು ಬಿಕಿನಿಯಲ್ಲಿ ಕೆಲವು ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ 90 ರ ದಶಕದ ಬಾಲಿವುಡ್ ಪ್ಲೇಲಿಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ
ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಮುಂದಿನ ಹಾಲಿವುಡ್ ಚಿತ್ರ ಟೆಕ್ಸ್ಟ್ ಫಾರ್ ಯೂ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನಲ್ಲಿ ಅವರು ಫರ್ಹಾನ್ ಅಖ್ತರ್ ಅವರ ಜೆ ಲೆ ಜರಾ ಪ್ರಾಜೆಕ್ಟ್ ಅನ್ನು ಹೊಂದಿದ್ದಾರೆ. ಇದರಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಪ್ರಿಯಾಂಕಾರ ಸಹ-ನಟಿಯರು.