ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಂಗನಾ ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.
ಇದೀಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಹಾಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ. ಕಂಗನಾ ಶೇರ್ ಮಾಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ.
ಅಂದಹಾಗೆ ಬಾಲಿವುಡ್ ಸ್ಟಾರ್ ಕಂಗನಾ ರೀತಿಯ ಹಾಟ್ ಅಂಡ್ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಕಂಗನಾ ಸಿಕ್ಕಾಪಟ್ಟೆ ಹಾಟ್ ಫೋಟೋ ಶೇರ್ ಮಾಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದರು.
ಕಪ್ಪು ಬಟ್ಟೆ ಧರಿಸಿರುವ ಕಂಗನಾ ಡೀಪ್ ನೆಕ್ ಇರುವ ಸ್ಕರ್ಟ್ ಧರಿಸಿದ್ದಾರೆ. ಈ ಉಡುಪಿನಲ್ಲಿ ಕಂಗನಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಕಂಗನಾ ಫೋಟೋಗೆ ಅಭಿಮಾನಿಗಳು ಹಾಟಿ, ಬೆಂಕಿ, ವಾವ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇನ್ನು ಕೆಲವರು ನೀವು ಮುಂದೆ ಮಹಾರಾಷ್ಟ್ರದ ಸಿಎಂ ಆಗುವವರು ಹೀಗೆಲ್ಲ ಬಟ್ಟೆ ಧರಿಸಬೇಡಿ ಎಂದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕಂಗನಾ ರಣಾವತ್ ಸದ್ಯ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಈ ಶೋ ಪ್ರಸಾರವಾಗುತ್ತಿದ್ದು ಕಂಗನಾ ಅನೇಕ ವೈಯಕ್ತಿಕ ವಿಚಾರಗಳನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಕಂಗನಾ ಬಾಲ್ಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾದರೇ ಕಂಗನಾ ಸದ್ಯ ಧಾಖಡ್ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಜೊತೆಗೆ ತೇಜಸ್ ಸಿನಿಮಾದ ಚಿತ್ರೀಕರಣ ಸಹ ಮುಗಿಸಿದ್ದಾರೆ. ಈ ನಡುವೆ ಟಿಕು ವೆಡ್ಸ್ ಶೇರು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ನಟನೆ ಜೊತೆಗೆ ಕಂಗನಾ ಸಿನಿಮಾ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ.
ಸುದೀಪ್ ಮತ್ತು ಅಜಯ್ ದೇವಗನ್ ಅವರ ರಾಷ್ಟ್ರಾಭಾಷಾ ವಿವಾದದ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 'ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಬೇಕೆಂದು ನಾನು ಹೇಳುತ್ತಾರೆ. ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಎಲ್ಲಾ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ. ಸಂಸ್ಕೃತ ಯಾಕೆ ರಾಷ್ಟ್ರಭಾಷೆಯಾಗಿಲ್ಲ. ಶಾಲೆಗಳಲ್ಲಿ ಯಾಕೆ ಖಡ್ಡಾಯ ಮಾಡಿಲ್ಲ? ಎನ್ನುವುದು ನನಗೆ ಗೊತ್ತಿಲ್ಲ' ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಧಾಖಡ್ ಸಿನಿಮಾ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಕಂಗನಾ ರಾಷ್ಟ್ರಾಭಾಷಾ ವಿವಾದದ ಬಗ್ಗೆ ಮಾತನಾಡಿ, 'ಸಂವಿಧಾನದ ಪ್ರಕಾರ ಸದ್ಯ ಹಿಂದಿ ರಾಷ್ಟ್ರಭಾಷೆಯಾಗಿದೆ' ಎಂದು ಹೇಳಿದ್ದಾರೆ.