Chhavi Mittal ಯಿಂದ Sonali Bendreವರೆಗೆ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ನಟಿಯರಿವರು

First Published Apr 30, 2022, 5:16 PM IST

ಕ್ಯಾನ್ಸರ್ (Cancer)  ಕಾಯಿಲೆಯು ವ್ಯಕ್ತಿಯ ಜೀವನದ ಮೇಲೆ ಬಲವಾದ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರ ಮಾನಸಿಕ ಆರೋಗ್ಯವನ್ನು ಅಲುಗಾಡಿಸುತ್ತದೆ. ಈ ಕಾಯಿಲೆಯು ಖಂಡಿತವಾಗಿಯೂ
ಹೋರಾಡುವ ವ್ಯಕ್ತಿಯ ಇಚ್ಛೆಯನ್ನು ಅಲುಗಾಡಿಸುತ್ತದೆ. ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಮತ್ತು ಕ್ಯಾನ್ಸರ್ ವಿರುದ್ಧ ಕಠಿಣವಾದ ಹೋರಾಟ ನಡೆಸಿ ಅವರು ಅನೇಕರಿಗೆ ಸ್ಫೂರ್ತಿಯಾಗಿ ಹೊರಹೊಮ್ಮಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿದ  ಏಳು ಸ್ಟಾರ್ಸ್‌ ಇಲ್ಲಿದ್ದಾರೆ.

ಛಾವಿ ಮಿತ್ತಲ್:
ನಟಿ ಇತ್ತೀಚೆಗೆ ತನಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಘೋಷಿಸಿದರು. ಛಾವಿ ತನ್ನ ಸ್ತನಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ಅವರು ಚೇತರಿಸಿಕೊಳ್ಳುವ ಹಾದಿಯಲ್ಲಿರುವಾಗ, ಅವರು ತಮ್ಮ ಪತಿ ಮೋಹಿತ್ ಹುಸೇನ್ ಅವರೊಂದಿಗೆ ಆಸ್ಪತ್ರೆಯಿಂದ ತಮ್ಮ ವಿವಾಹ ವಾರ್ಷಿಕೋತ್ಸವದ ಆಚರಣೆಗಳ ಸುಂದರವಾದ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಸೋನಾಲಿ ಬೇಂದ್ರೆ:
90 ರ ದಶಕದ ನಟಿ, ಸೋನಾಲಿ ಬೇಂದ್ರೆ ಅವರಿಗೆ 2018 ರಲ್ಲಿ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ನ್ಯೂಯಾರ್ಕ್‌ನಲ್ಲಿ  ಚಿಕಿತ್ಸೆಗೆ ಒಳಗಾಗಿದ್ದರು. ಕ್ಯಾನ್ಸರ್ ಅವರನ್ನು ಕುಗ್ಗಿಸಲು ಪ್ರಯತ್ನಿಸಿದರೂ, ಸೋನಾಲಿ ತನ್ನ ಮುಖದಲ್ಲಿ ನಿರಂತರ ನಗುವಿನೊಂದಿಗೆ ಮತ್ತು 'ನೆವರ್‌ ಗಿವಪ್‌ ಮನೋಭಾವದಿಂದ  ಕ್ಯಾನ್ಸರ್‌ ವಿರುದ್ಧದ ತನ್ನ ಯುದ್ಧವನ್ನು ಎದುರಿಸಿದರು.

ಲಿಸಾ ರೇ:
ಒಂದು ದಶಕದ ಹಿಂದೆ, 2009 ರಲ್ಲಿ, ಲಿಸಾ ರೇಗೆ  ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ತನ್ನ ಯುದ್ಧದಲ್ಲಿ ನಿರ್ಭೀತರಾಗಿದ್ದರು ಮತ್ತು ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸಲು  ಲಿಸಾ ನಿರ್ಧಾರ ಮಾಡಿದರು. ಕ್ಯಾನ್ಸರ್ ರೋಗವಿದೆ ಎಂದು ಸಾರ್ವಜನಿಕವಾಗಿ ಘೋಷಿಸಿದ ಮೊದಲ ಕೆಲವು ಪ್ರಸಿದ್ಧ ವ್ಯಕ್ತಿಗಳಲ್ಲಿ ಲಿಸಾ ಕೂಡ ಒಬ್ಬರು.

ಬಾರ್ಬರಾ ಮೋರಿ:
ಹೃತಿಕ್ ರೋಷನ್ ಅವರ ಕೈಟ್ ಸಹ-ನಟಿ ನಟಿ ಬಾರ್ಬರಾ ಮೋರಿ ಕೂಡ (ಸ್ತನ) ಕ್ಯಾನ್ಸರ್‌ ವಿರುದ್ಧ ಹೋರಾಡಿ ಬದುಕುಳಿದವರು. 2007 ರಲ್ಲಿ ಆಕೆಗೆ ಈ ರೋಗ ಪತ್ತೆಯಾಯಿತು. ರೋಗನಿರ್ಣಯದ ನಂತರ, ಅವರು ಸಕ್ರಿಯವಾಗಿ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ಆಗಾಗ್ಗೆ ಪರೀಕ್ಷೆಗಳಿಗೆ ಒಳಗಾಗುವಂತೆ ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಮನಿಶಾ ಕೊಯಿರಾಲ:
ದಶಕದ ಹಿಂದೆ 2012ರಲ್ಲಿ ಮನೀಶಾ ಕೊಯಿರಾಲ ಅವರಿಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಟಿ ಅಮೇರಿಕಾಕ್ಕೆ ಹಾರಿದರು ಮತ್ತು  ಅಲ್ಲಿ ಅವರು ಕೀಮೋಥೆರಪಿಗೆ ಒಳಗಾಗಿದ್ದರು. ಮನೀಶಾ ತನ್ನ ಆತ್ಮಚರಿತ್ರೆಯಲ್ಲಿ ಕ್ಯಾನ್ಸರ್ ವಿರುದ್ಧದ ಹೋರಾಟದ ಬಗ್ಗೆ ಬರೆದಿದ್ದಾರೆ, ತನ್ನ ಕುಟುಂಬ, ಸ್ನೇಹಿತರು ಮತ್ತು ತನ್ನ ಸ್ವಂತ ನಂಬಿಕೆಯು ಅದರ ವಿರುದ್ಧ ಹೋರಾಡಲು ಹೇಗೆ ಸಹಾಯ ಮಾಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ತಾಹಿರಾ ಕಶ್ಯಪ್‌:
ಆಯುಷ್ಮಾನ್ ಖುರಾನಾ ಅವರ ಪತ್ನಿ, ಚಲನಚಿತ್ರ ನಿರ್ಮಾಪಕಿ ಮತ್ತು ಲೇಖಕಿ ತಾಹಿರಾ ಕಶ್ಯಪ್ ಅವರಿಗೂ 2018 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಒಂದು ವರ್ಷದ ಚಿಕಿತ್ಸೆಯ ನಂತರ  ಅವರು ಕ್ಯಾನ್ಸರ್ ಮುಕ್ತರಾದರು. ತನ್ನ ಚಿಕಿತ್ಸೆಯ ದಿನಗಳಲ್ಲಿ, ತಾಹಿರಾ ಅವರು ರೋಗದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾ ಮತ್ತು ಅದನ್ನು ದಾಖಲಿಸಿ ಅನೇಕರಿಗೆ ಸ್ಫೂರ್ತಿಯಾಗಿದ್ದರು.

ಕಿರಣ್ ಖೇರ್‌:
ಏಪ್ರಿಲ್ 2021 ರಲ್ಲಿ, ಹಿರಿಯ ನಟಿನಿಗೆ ಮಲ್ಟಿಪಲ್ ಮೈಲೋಮಾ, ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರ ಕ್ಯಾನ್ಸರ್ ಬಗ್ಗೆ ಮಾಹಿತಿಯನ್ನು ಅವರ ಪತಿ ಅನುಪಮ್ ಖೇರ್ ಹಂಚಿಕೊಂಡಿದ್ದಾರೆ. ಆದರೆ ಕಿರಣ್ ಕ್ಯಾನ್ಸರ್‌ಗೆ ಸೋಲುವುದನ್ನು ನಿರಾಕರಿಸಿದರು ಮತ್ತು ಅವರು ಇನ್ನೂ ಚಿಕಿತ್ಸೆಯಲ್ಲಿದ್ದಾಗಲೇ ಕೆಲಸದಲ್ಲಿ ತೊಡಗಿದರು.

click me!