Wedding Bell: ಸುಶಾಂತ್‌ ಸಿಂಗ್‌ ಮಾಜಿ ಗರ್ಲ್‌ಫ್ರೆಂಡ್‌ ಬ್ಯಾಚಿಲ್ಲೋರೆಟ್ ಪಾರ್ಟಿ ಫೋಟೋ ವೈರಲ್‌!

Suvarna News   | Asianet News
Published : Nov 19, 2021, 05:11 PM IST

ಜನಪ್ರಿಯ ಟಿವಿ ಧಾರಾವಾಹಿ 'ಪವಿತ್ರ ರಿಶ್ತಾ' (Pavitra Rishta) ನಟಿ ಅಂಕಿತಾ ಲೋಖಂಡೆ  (Ankita Lokhande) ಗೆಳೆಯ ವಿಕ್ಕಿ ಜೈನ್ (Vicky Jain) ಅವರನ್ನು ವರಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಂಕಿತಾ ತನ್ನ ಹುಟ್ಟುಹಬ್ಬದ ಒಂದು ವಾರದ ಮೊದಲು ಅಂದರೆ ಡಿಸೆಂಬರ್ 12 ರಂದು ಮದುವೆಯಾಗಬಹುದು. ಈ ನಡುವೆ ಮದುವೆಗೆ ಮೊದಲು, ಅಂಕಿತಾ ತನ್ನ ಸ್ನೇಹಿತರೊಂದಿಗೆ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದರು. ಈ ಪಾರ್ಟಿಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂಕಿತಾ ಲೋಖಂಡೆ ಅವರ ಬ್ಯಾಚಿಲ್ಲೋರೆಟ್ ಪಾರ್ಟಿಯ ಕೆಲವು ಫೋಟೋಗಳನ್ನು ನೋಡಿ.   

PREV
18
Wedding Bell: ಸುಶಾಂತ್‌ ಸಿಂಗ್‌ ಮಾಜಿ ಗರ್ಲ್‌ಫ್ರೆಂಡ್‌ ಬ್ಯಾಚಿಲ್ಲೋರೆಟ್ ಪಾರ್ಟಿ ಫೋಟೋ ವೈರಲ್‌!

ಈ ಫೋಟೋಗಳಲ್ಲಿ,  ಅಂಕಿತಾ ಪಾರ್ಟಿಯಲ್ಲಿ ತುಂಬಾ ಶಾರ್ಟ್‌ ಬಟ್ಟೆಗಳನ್ನು ಧರಿಸಿ ಸಖತ್‌ ಡ್ಯಾನ್ಸ್‌ ಮಾಡುವುದನ್ನು ಕಾಣಬಹುದು. ಅಂಕಿತಾ ಅವರ ಎಲ್ಲಾ ಫ್ರೆಂಡ್ಸ್‌ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

28

 ಅಂಕಿತಾ ಲೋಖಂಡೆ ಉದ್ಯಮಿ ವಿಕ್ಕಿ ಜೈನ್ ಅವರೊಂದಿಗೆ 3 ವರ್ಷಗಳಿಗೂ ಹೆಚ್ಚು ಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ.  ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಕ್ಕಿಯೊಂದಿಗೆ ನಿಕಟ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರೂ ಸೇರಿ ಮದುವೆಯ ಪ್ಲಾನ್ ಮಾಡಿದ್ದಾರೆ.

38

ಅಂಕಿತಾ ಲೋಖಂಡೆ ಪಾರ್ಟಿಯಲ್ಲಿ ತುಂಬಾ ಉತ್ಸುಕರಾಗಿದ್ದರು. ಪಾರ್ಟಿಯಲ್ಲಿ ಕಿರುತೆರೆಯ ಇನ್ನೊಬ್ಬ ನಟಿ ರಶ್ಮಿ ದೇಸಾಯಿ ಅವರ ಬೆನ್ನಿನ ಮೇಲೆ ಸವಾರಿ ಮಾಡಿದರು. ನಂತರ ಇಬ್ಬರೂ ಒಂದೇ ಭಂಗಿಯಲ್ಲಿ ನೃತ್ಯ ಮಾಡಿದರು.

48

ಪಾರ್ಟಿ ವೇಳೆ ಅಂಕಿತಾ ಲೋಖಂಡೆ ಕೇಕ್  ಕತ್ತರಿಸುವ ಮುನ್ನ ಕ್ಯಾಂಡಲ್‌ ಗಳನ್ನು ನಂದಿಸಿ ಬೇಡಿಕೊಂಡರು.ಆ ಕ್ಯಾಂಡಲ್ ಲೈಟ್ ಮುಂದೆ, ಅಂಕಿತಾ ಕಣ್ಣು ಮುಚ್ಚಿ ಪ್ರಾರ್ಥಿಸಿದಾ ಮುಖದಲ್ಲಿ ವಿಶೇಷ ಕಳೆ ಎದ್ದು ಕಾಣುತ್ತಿತ್ತು. 


 

58

ಅಂಕಿತಾ ಲೋಖಂಡೆ ಕಟ್ ಮಾಡಿದ ಕೇಕ್ ಮೇಲೆ ‘ವುಡ್ ಬಿ ಬ್ರೈಡ್’ ಎಂದು ಬರೆಯಲಾಗಿತ್ತು. ಈ ಮೂಲಕ ಆಕೆ ಮದುವೆಯಾಗಲು ಹೊರಟಿರುವುದು ದೃಢಪಟ್ಟಿದೆ. ಆದರೆ, ಈ ಸುದ್ದಿಯ ಅಧಿಕೃತ ಪ್ರಕಟಣೆಯನ್ನು ಅಂಕಿತಾ ಅಥವಾ ಅವರ ಭಾವಿ ಪತಿ  ಇನ್ನೂ ಮಾಡಿಲ್ಲ.

68

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಕಾಮನ್‌ ಫ್ರೆಂಡ್‌ ಮೂಲಕ ಭೇಟಿಯಾದರು. ಅಂಕಿತಾ ವಿಕ್ಕಿ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ.  ಬಹಳ ಸಮಯದಿಂದ ಸಂಬಂಧದಲ್ಲಿರುವ ಇಬ್ಬರೂ ಒಬ್ಬರಿಗೊಬ್ಬರನ್ನು  ತಿಳಿದು ಕೊಂಡಿದ್ದಾರೆ ಮತ್ತು ಅಂಕಿತಾ ಈಗ ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸಿದ್ದಾರೆ .

78

ವಿಕ್ಕಿ ಮೊದಲು, ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಸುಮಾರು 6 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ಇಬ್ಬರೂ ನಂತರ 2016 ರಲ್ಲಿ ಬೇರ್ಪಟ್ಟರು.

88

ಸುಶಾಂತ್‌ ಸಿಂಗ್‌ ಜೊತೆ ಬ್ರೇಕಪ್‌ ನಂತರ ಅಂಕಿತಾ ವಿಕ್ಕಿ ಜೈನ್ ರೂಪದಲ್ಲಿ ಎರಡನೇ ಪ್ರೀತಿಯನ್ನು ಕಂಡುಕೊಂಡರು. ವಿಕ್ಕಿ ವೃತ್ತಿಯಲ್ಲಿ ಉದ್ಯಮಿ. ಅಂಕಿತಾ  ಮತ್ತು ವಿಕ್ಕಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ  ಪರಸ್ಪರ ರೋಮ್ಯಾಂಟಿಕ್‌  ಕ್ಷಣಗಳನ್ನು ಹಂಚಿಕೊಳ್ಳುವುದನ್ನು ಕಾಣಬಹುದು.

Read more Photos on
click me!

Recommended Stories