Actor's Life: ನಾಲ್ವರು ಮಹಿಳೆಯರೊಂದಿಗೆ ರೇಖಾ ತಂದೆ ಜೆಮಿನಿ ಗಣೇಶನ್‌ಗಿತ್ತು ಸಂಬಂಧ!
First Published | Nov 19, 2021, 4:36 PM ISTಬಾಲಿವುಡ್ (Bollywood) ಹಿರಿಯ ನಟಿ ರೇಖಾ (Rekha) ಅವರ ತಂದೆ ಜೆಮಿನಿ ಗಣೇಶನ್ (Gemini Ganesan ) ಅವರ 101ನೇ ಜನ್ಮದಿನ. ಅವರು ನವೆಂಬರ್ 17, 1920 ರಂದು ತಮಿಳುನಾಡಿನ ಪುದ್ದುಕೊಟ್ಟೈನಲ್ಲಿ ಜನಿಸಿದರು. ಜೈಮಿನಿ ಗಣೇಶನ್ ಅವರ ನಿಜವಾದ ಹೆಸರು ರಾಮಸಾಮಿ ಗಣೇಶನ್ (Ramaswamy Ganesan) . ದಕ್ಷಿಣದ ಜೊತೆ ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಜೆಮಿನಿ, ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಯಾವಾಗಲೂ ಸ್ಮರಣೀಯರು. ಅವರು ನಾಲ್ಕು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಇವರಲ್ಲಿ ಒಬ್ಬರನ್ನು ಮಾತ್ರ ವಿವಾಹವಾದರು. ಅವರು ರೇಖಾಳ ತಾಯಿಯನ್ನು ಮದುವೆಯಾಗಿಲ್ಲ ರೇಖಾ ತಮ್ಮ ತಂದೆಯನ್ನು ದ್ವೇಷಿಸುತ್ತಿದ್ದರಂತೆ. ರೇಖಾನಂಥ ಮಹಾನ್ ನಟಿಯ ತಂದೆ, ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಜೆಮಿನಿ ಗಣೇಶನ್ ಬಗ್ಗೆ ಗೊತ್ತಿಲ್ಲದ ಹಲವು ವಿಷಯಗಳು ಇಲ್ಲಿವೆ!