ಮನುಷ್ಯ (Human) ಸಂಪೂರ್ಣ ಚಟುವಟಿಕೆಯಿಂದ ಕೂಡಿರಲು ಮೆದುಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬೇಕಾದುದು ಅತೀ ಅಗತ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ರೈನ್ ಟ್ಯೂಮರ್ (Brain Tumor) ಸಮಸ್ಯೆಗಳು ಹೆಚ್ಚಾಗ್ತಿವೆ. ಇದಕ್ಕೆ ಕಾರಣವಾಗುವ ಆಹಾರಗಳು (Food) ಯಾವುವು ತಿಳ್ಕೊಳ್ಕೋಣ.
ಆರೋಗ್ಯ (Health)ವಾಗಿರ್ಬೇಕು ಅಂತ ಪ್ರತಿಯೊಬ್ಬರೂ ಬಯಸ್ತಾರೆ. ಹೀಗಾಗಿಯೇ ವರ್ಕೌಟ್, ಯೋಗ (Yoga), ಡಯೆಟ್ ಅಂತ ಏನೇನೋ ಮಾಡ್ತಿರ್ತಾರೆ. ಆದ್ರೆ ಯಾವಾಗ್ಲೂ ಹೆಲ್ದೀ ಇರ್ಬೇಕು ಅಂದ್ರೆ ಜೀವನಶೈಲಿ, ಆಹಾರಪದ್ಧತಿ ಸಹ ಉತ್ತಮವಾಗಿರಬೇಕು. ಇಲ್ಲದಿದ್ದರೆ ಕಾಡೋ ಕಾಯಿಲೆಗಳು (Disease) ಒಂದೆರಡಲ್ಲ. ದೇಹದ ಪ್ರಮುಖ ಅಂಗಗಳೇ ಕಾಯಿಲೆಗೆ ತುತ್ತಾಗಿ ಬಿಡ್ತವೆ. ಅಂಥಾ ಕಾಯಿಲೆಗಳಲ್ಲೊಂದು ಬ್ರೈನ್ ಟ್ಯೂಮರ್ ಅಥವಾ ಮೆದುಳಿನ ಗೆಡ್ಡೆ. ಮನುಷ್ಯ (Human) ಸಂಪೂರ್ಣ ಚಟುವಟಿಕೆಯಿಂದ ಕೂಡಿರಲು ಮೆದುಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬೇಕಾದುದು ಅತೀ ಅಗತ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಬ್ರೈನ್ ಟ್ಯೂಮರ್ (Brain Tumor) ಸಮಸ್ಯೆಗಳು ಹೆಚ್ಚಾಗ್ತಿವೆ. ಇದಕ್ಕೆ ಅನುವಂಶಿಕತೆ, ವಿಕಿರಣಗಳ ಜೊತೆಗೆ ತಿನ್ನೋ ಆಹಾರಗಳು ಸಹ ಕಾರಣವಾಗುತ್ತೆ.
ಬ್ರೈನ್ ಟ್ಯೂಮರ್ ಆದ ಬಳಿಕ ಚಿಕಿತ್ಸೆ ಪಡೆಯಲು ಒದ್ದಾಡುವ ಬದಲು ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು. ಹೀಗಾಗಿ ಮೆದುಳಿನ ಗೆಡ್ಡೆಗೆ ಕಾರಣವಾಗೋ ಆಹಾರಗಳು (Food) ಯಾವುದೆಂದು ಮೊದ್ಲು ತಿಳ್ಕೊಳ್ಳೋಣ.
World Brain Tumour Day 2022: ಮಾರಣಾಂತಿಕ ಮೆದುಳಿನ ಗೆಡ್ಡೆಯ ಸಮಸ್ಯೆಗೆ ಕಾರಣವೇನು ?
ಮೆದುಳಿನ ಗೆಡ್ಡೆ ಸಮಸ್ಯೆಗೆ ಕಾರಣವಾಗೋ ಆಹಾರಗಳು
ಸಕ್ಕರೆಯುಕ್ತ ಪಾನೀಯಗಳು
ಹೆಚ್ಚು ಸಕ್ಕರೆ (Sugar)ಯನ್ನು ಹಾಕಿರುವ ಆಹಾರಗಳು ಯಾವಾಗಲೂ ಮೆದುಳಿನ ಗಡ್ಡೆಗೆ ಮುಖ್ಯ ಕಾರಣವಾಗಿದೆ. ಹೆಚ್ಚಿನ ಫ್ರಕ್ಟೋಸ್ ಪಾನೀಯಗಳು ಅಥವಾ ತಂಪು ಪಾನೀಯಗಳು, ಸೋಡಾ (Soda0, ಹಣ್ಣಿನ ರಸಗಳಂತಹ ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ವಸ್ತುಗಳನ್ನು ಸೇವಿಸುವುದು ಬ್ರೈನ್ ಟ್ಯೂಮರ್‌ಗೆ ತುಂಬಾ ಅಪಾಯಕಾರಿ (Danger)ಯಾಗಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ಕೂಡಾ ನಡೆದಿವೆ. ಅತಿಯಾದ ಸಿಹಿ ಸೇವನೆ ಮಧುಮೇಹಕ್ಕೆ (Diabetes) ಕಾರಣವಾಗೋದು ಮಾತ್ರವಲ್ಲ, ಮೆದುಳಿನ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ.
ಅಲ್ಕೋಹಾಲ್
ಅಲ್ಕೋಹಾಲ್ (Alcohol) ಸೇವನೆ ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಅಲ್ಕೋಹಾಲ್ ಸೇವನೆ ಅತಿಯಾದರೆ ಮೆದುಳಿನ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಅಲ್ಕೋಹಾಲ್ ಅತಿಯಾದ ಸೇವನೆಯು ಮೆದುಳಿನ ಗೆಡ್ಡೆಗಳಿಗೆ ಮಾತ್ರವಲ್ಲದೇ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆ (Mental Problem)ಗೂ ಕಾರಣವಾಗುತ್ತದೆ.
Kids' Health : ಮಗು ಓದಿದ್ದು ತಲೆ ಹೋಗುತ್ತಿಲ್ಲ ಎನ್ನುತ್ತಿದ್ಯಾ ಮಗು, ಈ ಫುಡ್ ಕೊಡಿ
ಹೆಚ್ಚಿನ ಪಾದರಸಯುಕ್ತ ಮೀನು
ಪಾದರಸ ನಿಯೋರಾಕ್ಸಿಕ್ ಅಂಶವನ್ನು ಹೊಂದಿದ್ದು, ಇದು ಗರ್ಭದಲ್ಲಿರುವ ಮಗು ಮತ್ತು ಚಿಕ್ಕ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಶಾರ್ಕ್ ಮತ್ತು ಕತ್ತಿ ಮೀನುಗಳಂತಹ ದೊಡ್ಡ ಮೀನುಗಳಲ್ಲಿ ಪಾದರಸ ಇರುತ್ತದೆ. ಇಂಥ ಮೀನುಗಳನ್ನು ಸೇವಿಸಿದರೆ, ಅದನ್ನು ಹೆಚ್ಚು ಸೇವಿಸುದನ್ನು ಸ್ವಲ್ಪ ಕಡಿಮೆ ಮಾಡಿ. ಇದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ.
ಸಂಸ್ಕರಿಸಿದ ಆಹಾರ
ಇವತ್ತಿನ ದಿನಗಳಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರವನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಲ್ಲಿ ಜಂಕ್ ಫುಡ್, ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸ ಇತ್ಯಾದಿಗಳು ಸೇರಿವೆ. ಇಂತಹ ಆಹಾರವು ಮೆದುಳು ಮತ್ತು ಆರೋಗ್ಯ ಎರಡಕ್ಕೂ ಅಪಾಯಕಾರಿ. ಮೆದುಳನ್ನು ಸದೃಢವಾಗಿರಬೇಕಾದರೆ ಇಂಥಾ ಆಹಾರಗಳಿಂದ ದೂರವಿರುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಮೆದುಳಿಗೆ ಗೆಡ್ಡೆ ಸಮಸ್ಯೆಗೆ ಎಂಥಾ ಆಹಾರ ತಿನ್ನೋದು ಒಳ್ಳೆಯದು
ಮೆದುಳಿನ ಗೆಡ್ಡೆಯ ರೋಗಿಗೆ ಚಿಕಿತ್ಸೆಯ ಪರಿಣಾಮವಾಗಿ ಹಸಿವು ಕಡಿಮೆಯಾಗುತ್ತದೆ. ಆದಾಗ್ಯೂ, ಸೋಂಕಿನ ವಿರುದ್ಧ ಹೋರಾಡಲು ಶಕ್ತಿಯನ್ನು ಕಾಪಾಡಿಕೊಳ್ಳುವುದು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುವುದು ಅತ್ಯಗತ್ಯ. ಆದ್ದರಿಂದ ನಿಮ್ಮ ಆಹಾರದಲ್ಲಿ ಸೇಬು, ಪನೀರ್, ತರಕಾರಿಗಳು, ಪೌಷ್ಟಿಕಾಂಶದ ಪೂರಕಗಳು, ಮಿಲ್ಕ್‌ಶೇಕ್‌ಗಳು, ಸ್ಮೂಥಿಗಳು ಮತ್ತು ಧಾನ್ಯಗಳನ್ನು ಸೇರಿಸಿ.
ಉತ್ಕರ್ಷಣ ನಿರೋಧಕಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ಸತು ಮತ್ತು ಸೆಲೆನಿಯಮ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಕ್ಯಾರೆಟ್, ಕುಂಬಳಕಾಯಿ, ಸಿಹಿ ಆಲೂಗಡ್ಡೆ, ಪಪ್ಪಾಯಿ, ಕಿವಿ, ಮಾವಿನಹಣ್ಣು, ಕೋಸುಗಡ್ಡೆ, ಅನಾನಸ್, ಟೊಮ್ಯಾಟೊ, ಮೆಣಸು, ಹೂಕೋಸು ಮತ್ತು ಕಿತ್ತಳೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ವಿಟಮಿನ್ ಡಿ ಪೂರೈಕೆಯು ಮೀನು, ಅಣಬೆಗಳು, ಹಾಲು ಮತ್ತು ಮೊಸರು ಮುಂತಾದ ಆಹಾರಗಳನ್ನು ಒಳಗೊಂಡಿರುತ್ತದೆ.