ಗಾಳಿಯಿಂದಲೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ದಂಡ

By Anusha Kb  |  First Published Jun 7, 2022, 10:12 AM IST

 ಲೇಸ್‌ನ ಮಾತೃಸಂಸ್ಥೆಯಾದ ಪೆಪ್ಸಿಕೋ ಸಂಸ್ಥೆಗೆ ಕೇರಳದ ತ್ರಿಶೂರ್‌ನ ಕಾನೂನು ಮಾಪನಶಾಸ್ತ್ರ ಕಚೇರಿ 85,000 ರೂ ದಂಡ ವಿಧಿಸಿದೆ.


ತ್ರಿಶೂರ್: ಜಂಕ್‌ಫುಡ್ ಪ್ರಿಯರಾದ ಇಂದಿನ ಜನರೇಷನ್‌, ಅದರಲ್ಲೂ ಮಕ್ಕಳು ಲೇಸ್  ಕಂಪನಿಯ ಆಲೂಗಡ್ಡೆ ಚಿಪ್ಸ್‌ನ್ನು ಪ್ರಾಣಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಾರೆ. ಲೇಸ್‌ನ ರುಚಿಯೂ ಹಾಗಿರುತ್ತದೆ. ಲೇಸ್‌ಗೋಸ್ಕರ ಮಕ್ಕಳು ಪೋಷಕರೊಂದಿಗೆ ಜಗಳವಾಡುವುದನ್ನು ನೀವು ನೋಡಿರಬಹುದು. ಅಲ್ಲದೇ ಮಕ್ಕಳು ಪೋಷಕರಾದಿಯಾಗಿ ಎಲ್ಲರೂ ಲೇಸ್‌ನ್ನು ಬಹುವಾಗಿ ಇಷ್ಟ ಪಡುತ್ತಾರೆ. ಅಷ್ಟರ ಮಟ್ಟಿಗೆ ಲೇಸ್‌ ಭಾರತದಲ್ಲಿ ಪ್ರಭಾವ ಬೀರಿದೆ. ಆದರೆ ಲೇಸ್‌ ಪ್ಯಾಕೇಟ್‌ಗಳಲ್ಲಿ ಆಲೂಗಡ್ಡೆ ಚಿಪ್ಸ್‌ಗಿಂತ ಹೆಚ್ಚು ಗಾಳಿಯೇ ತುಂಬಿರುತ್ತದೆ. ಅದನ್ನು ಲೇಸ್‌ ತಿನ್ನುವವರೆಲ್ಲರೂ ಎರಡು ಮಾತಿಲ್ಲದೇ ಒಪ್ಪಿಕೊಳ್ಳುತ್ತಾರೆ. 

ಇದೇ ಕಾರಣಕ್ಕೆ ಈಗ ಲೇಸ್‌ನ ಮಾತೃಸಂಸ್ಥೆಯಾದ ಪೆಪ್ಸಿಕೋ ಸಂಸ್ಥೆಗೆ ಕೇರಳದ ತ್ರಿಶೂರ್‌ನ  ಕಾನೂನು ಮಾಪನಶಾಸ್ತ್ರ ಕಚೇರಿ 85,000 ರೂ ದಂಡ ವಿಧಿಸಿದೆ. ಪ್ಯಾಕೇಟ್‌ ತುಂಬಾ ಗಾಳಿ ತುಂಬಿಸುತ್ತಿದ್ದ ಸಂಸ್ಥೆ ಅದರೊಳಗಿರುವ ಚಿಪ್ಸ್‌ನ ಪ್ರಮಾಣದಲ್ಲಿ ಕಡಿಮೆ ಮಾಡುತ್ತಿತ್ತು.

Consumer Protection - Full of air, no chips.! Lays slapped Rs 85,000 fine by Kerala Legal Metrology Department

Thrissur, Kerala. There is a worldwide accusation that there was more air than the chips in a packet of Lays. https://t.co/FlIZ9XyQfd

— VSK BHARAT (@editorvskbharat)

Tap to resize

Latest Videos

ತ್ರಿಶೂರ್ ಲೀಗಲ್ ಮಾಪನಶಾಸ್ತ್ರ ಕಚೇರಿ  (Thrissur Legal Metrology Office) ಪಿಡಿ ಜಯಶಂಕರ್ (PD Jayashankar) ಅವರು  ಲೇಸ್'ನ ಮಾತೃಸಂಸ್ಥೆ ಪೆಪ್ಸಿಕೋಗೆ 85,000 ರೂಪಾಯಿ ದಂಡ ವಿಧಿಸಿದ್ದಾರೆ. ತ್ರಿಶೂರ್ ಮೂಲದ ನಿವಾಸಿಯಾಗಿರುವ ಸಾಮಾಜಿಕ ನ್ಯಾಯ ಸಂರಕ್ಷಣಾ ಕೇಂದ್ರದ ಅಧ್ಯಕ್ಷರು ಆಗಿರುವ ವ್ಯಕ್ತಿಯೊಬ್ಬರು ಖರೀದಿಸಿದ ಲೇಸ್‌ ಪ್ಯಾಕೆಟ್‌ನಲ್ಲಿರುವ ಚಿಪ್ಸ್‌ನ ಪ್ರಮಾಣದಲ್ಲಿ ನಿಗದಿಗಿಂತ ಕಡಿಮೆ ಇರುವ ಬಗ್ಗೆ ಲೀಗಲ್ ಮಾಪನಶಾಸ್ತ್ರ ಕಚೇರಿಗೆ ದೂರು ನೀಡಿದ್ದರು.

ಲೇಸ್‌ ಚಿಪ್ಸ್‌ ಕವರ್‌ನಿಂದ ಸಾರಿ ತಯಾರಿಸಿದ ನಾರಿ

ಈ ದೂರಿನ ಆಧಾರದ ಮೇಲೆ ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ (PepsiCo India Holdings Pvt) ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 

ಲೇಸ್‌ ಪ್ಯಾಕೆಟ್‌ನಲ್ಲಿ 115 ಗ್ರಾಂ ಎಂದು ತೋರಿಸಲಾಗಿತ್ತು. ಆದರೆ ಅದರೊಳಗಿನ ಚಿಪ್ಸ್‌ಗಳ ಪ್ರಮಾಣವು ಅದಕ್ಕಿಂತ ಕಡಿಮೆಯಿತ್ತು,  ಪ್ಯಾಕೆಟ್‌ಗಳ ತಪಾಸಣೆ ನಡೆಸಿದಾಗ ಒಂದರಲ್ಲಿ ಕೇವಲ 50. 930 ಗ್ರಾಂ, ಎರಡನೆಯದರಲ್ಲಿ 72 ಗ್ರಾಂ ಮತ್ತು ಮೂರನೇ ಪ್ಯಾಕೆಟ್‌ನಲ್ಲಿ 86.380 ಗ್ರಾಮ್‌ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಜಾಣಿಯಲ್ಲಿರುವ (Kanjani) ಸೂಪರ್‌ ಮಾರ್ಕೆಟ್‌ನಲ್ಲೂ (supermarket) ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.

ಲೇಸ್‌ ಸ್ಟೈಲ್‌ನ ಆಲೂಗೆಡ್ಡೆ ಚಿಪ್ಸ್‌ ರಿಸಿಪಿ ಇಲ್ಲಿದೆ ನೋಡಿ...

ಲೇಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಚು ಗಾಳಿ ಇತ್ತು ಎಂಬ ಆರೋಪ ಪ್ರಪಂಚದಾದ್ಯಂತ ಇದೆ. ಆದರೆ ಯಾರೂ ಅದರ ತೂಕವನ್ನು ಪರಿಶೀಲಿಸಲು ಅಥವಾ ಅದರ ಪ್ರಮಾಣದ ಬಗ್ಗೆ ದೂರು ನೀಡಲು ತಲೆಕೆಡಿಸಿಕೊಳ್ಳುವುದಿಲ್ಲ, ಇದನ್ನೇ ಕಂಪನಿಯು ದುರುಪಯೋಗಪಡಿಸಿಕೊಂಡಿದೆ. ಸರಿಯಾದ ತಪಾಸಣೆಯ ಕೊರತೆಯಿಂದಾಗಿ ಇದು ಭಾರತದಲ್ಲಿ ವ್ಯಾಪಕವಾಗಿ ನಡೆಯುತ್ತದೆ ಲೇಸ್‌ನಂತಹ ಹಲವಾರು ಇತರ ಪ್ರಮುಖ ಬ್ರಾಂಡ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು  ಕಡಿಮೆ ಗುಣಮಟ್ಟದ್ದಾಗಿದೆ.

click me!